ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಚಲನಚಿತ್ರ ಗೀತೆಗಳ ಆಧಾರಿತ `ಗಾನಯಾನ ಕಾರ್ಯಕ್ರಮ’ ಜನೇವರಿ 28 ರಂದು ಭಾನುವಾರ ಸಂಜೆ 5.30 ಗಂಟೆಗೆ ರವೀಂದ್ರನಾಥ ಠಾಗೋರ ಕಡಲತೀರದಲ್ಲಿರುವ ಮಯೂರವರ್ಮ ವೇದಿಕೆಯಲ್ಲಿ ಆಯೋಜಿಸಲಾಗಿದೆ.

ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ನಾಗಚಂದ್ರಿಕಾ ಬೆಂಗಳೂರು ಅವರ ತಂಡದ ಉದಯೋನ್ಮುಖ ಗಾಯಕರು ಸತತ ಮೂರು ಗಂಟೆಗಳ ಕಾಲ ಕನ್ನಡ ಚಿತ್ರಗೀತೆಗಳ ರಸಧಾರೆ ಹರಿಸಲಿದ್ದಾರೆ. 70ರ ಹಿರಿಯರಿಂದ 20ರ ಹರೆಯದ ಯುವ ಸಮೂಹಕ್ಕೂ ಆಪ್ತವೆನಿಸುವ ಸಮಾನತೆಯ ಆಶಯ ಆದರಿಸಿದ ಸಾಹಿತ್ಯ ಸಮೃದ್ಧ, ಮಾಧುರ್ಯ ತುಂಬಿದ ಕನ್ನಡ ಗೀತೆÉಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

RELATED ARTICLES  ಕಾರ್ ಬಾಡಿಗೆ ಮಾಡಿಕೊಂಡು ಬಂದವರು ಚಾಲಕನಿಗೆ ಚಾಕುವಿನಿಂದ ಹಲ್ಲೆ ಮಾಡಿದರು..!

ಗಾನಯಾನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರವ.ವಿ ದೇಶಪಾಂಡೆ ಉದ್ಘಾಟಿಸುವರು. ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿರುವರು.

RELATED ARTICLES  ಇಂದಿನ(ದಿ-28/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.

ಕಾರ್ಯಕ್ರಮ ಕನ್ನಡ ನಾಡಿನ ಸಾಂಸ್ಕøತಿಕ ಬೆಸುಗೆಯಾಗಿರುವ ಕನ್ನಡ ಚಲನಚಿತ್ರ ರಂಗ ಬೆಳೆದು ಬಂದ ಘಟ್ಟಗಳು, ಕನ್ನಡ ಚಲನಚಿತ್ರ ಹಾಡುಗಳ ಮೂಲಕ ಅನಾವರಣಗೊಳ್ಳಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾಧಿಕಾರಿ ಹಿಮಂತರಾಜು ಜಿ. ಕೋರಿದ್ದಾರೆ.