ವಿಜಯನಗರ ಸಾಮ್ರಾಜ್ಯ ಅಳ್ವಿಕೆಯ ಕಾಲದಲ್ಲಿ ಶ್ರೀಶೈಲದಿಂದ ವಲಸೆ ಬಂದ ಎತ್ತುಗಳೇ ಈ ದೇವರ ಎತ್ತುಗಳು. ಮ್ಯಾಸಬೇಡ ಗುಡಿಕಟ್ಟಿಗೆ ಸೇರಿದ ಈ ಎತ್ತುಗಳ ಮೂಲಸ್ಥಾನವೇ ಶ್ರೀಶೈಲವಾಗಿದೆ. ಮ್ಯಾಸಬೇಡರಲ್ಲಿ ಹಿರಿಯರು ಸಾವನಪ್ಪಿದ ಮೇಲೆ ಪಾತಾಳ ಲೋಕಕ್ಕೆ ಹೋಗುತ್ತಾರೆ. ಅಲ್ಲಿ ದನಗಳಾಗಿ ಮರು ಜನ್ಮವನ್ನು ಪಡೆಯುತ್ತಾರೆ. ಅದರ ಪ್ರತಿರೂಪ ಪಾತಾಳದಿಂದ ಬಂದಿದ್ದು ಎತ್ತುಗಳು ಅವುಗಳನ್ನು ಪಾಲನೆ-ಪೋಷಣೆ ಮಾಡಿದರೆ ನಮ್ಮ ಪೂರ್ವಜನರನ್ನು ಪೋಷಣೆ ಮಾಡಿದಷ್ಟೇ ಪುಣ್ಯ ದೊಯುತ್ತದೆ. ಪ್ರತಿಯೊಂದು ಹಬ್ಬದಲ್ಲಿ ಅವುಗಳಿಗೆ ಮೊದಲು ಹಿರೆಯರ ಪೂಜೆ ಎಂದು ದೇವರ ಎತ್ತುಗಳಿಗೆ ಪೂಜೆ ಮಾಡುವ ಪ್ರತೀತಿ ಇಂದಿಗೂ ಇಲ್ಲಿ ದೇವರ ಎತ್ತುಗಳನ್ನು ನಾವು ಕಾಣಬಹುದಾಗಿದೆ.

ಚಿತ್ರದುರ್ಗದ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಮ್ಯಾಸಬೇಡ ಬುಡಕಟ್ಟು ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿರುವ ಬೀಡು. ಈ ಭಾಗದ ಸುಮಾರು ೧೧ಕ್ಕೂ ಹೆಚ್ಚು ಗುಡಿಕಟ್ಟಿನ ಜನರು ಇಂದಿಗೂ ರಾಸುಗಳನ್ನೇ ಮನೆ ದೇವರು ಎಂದು ಪೂಜಿಸುತ್ತಿದ್ದಾರೆ. ಪರಂಪರಿಕವಾಗಿ ಬಂದ ಆಚರಣೆ ಇಂದಿಗೂ ಈ ಭಾಗದಲ್ಲಿ ಜೀವಂತವಾಗಿದೆ.

ಶತಮಾನಗಳ ಹಿಂದೆ ಅಲ್ಲಿ ಬರವಿದ್ದ ಕಾಲದಲ್ಲಿ ಈ ಭಾಗಕ್ಕೆ ಕರೆತರಲಾಯಿತು. ಅವುಗಳನ್ನು ನೋಡಿಕೊಳ್ಳಲು ತಮ್ಮ ಕಟ್ಟೆಮನೆಯಿಂದಲೇ ಕಿಲಾರಿಗಳನ್ನು ನೇಮಿಸಲಾಯಿತು. ಇಂದಿಗೂ ಸಹ ಅವುಗಳನ್ನು ನೋಡಿಕೊಳ್ಳುತ್ತಿರುವವರು ಕಿಲಾರಿಗಳೇಯಾಗಿದ್ದಾರೆ. ಸಿಂಧೂನಾಗರೀಕತೆಯ ಜನರು ಪ್ರಕೃತಿ, ಪ್ರಾಣಿ, ಸೂರ್ಯ, ಚಂದ್ರರನ್ನೇ ದೇವರು ಎಂದು ಪೂಜಿಸಿದವರು. ಇಂತಹ ಪೂಜಾ ಕಾರ್ಯ ಆಧುನಿಕತೆಯಲ್ಲೂ ಇಲ್ಲಿನ ನಲಗೇತಲ ಮುತ್ತಯ್ಯರು, ನನ್ನಿವಾಳದ ಮುತ್ತಯ್ಯರು, ಪದಿ ಮುತ್ತಯ್ಯ ಮ್ಯಾಸಬೇಡ ಬುಡಕಟ್ಟಿನವರು ದೇವರ ಎತ್ತುಗಳನ್ನು ಪೂಜೆಸುವ ಮೂಲಕ ಉಳಿಸಿಕೊಂಡಿದ್ದಾರೆ. ಅವರು ಯಾವುದೇ ಹಬ್ಬ ಹರಿದಿನಗಳನ್ನು ಅವುಗಳೊಂದಿಗೆ ಇಂದಿಗೂ ನಡೆಸುತ್ತಿದ್ದಾರೆ. ಮ್ಯಾಸಬೇಡರ ಆರಾಧ್ಯ ದೈವ ಇಂದು ನಮ್ಮಿಂದ ದೂರವಾಗುತ್ತಿವೆ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ. ಮೇವಿಲ್ಲ, ನೀರಿಲ್ಲದೆ ಪ್ರತಿ ನಿತ್ಯವೂ ಸಾವನಪ್ಪುತ್ತಿರುವ ಈ ಎತ್ತಗಳನ್ನು ರಕ್ಷಣೆ ಮಾಡುವವರೆ ಇಲ್ಲವಾಗಿದೆ. ದನಗಳ ಮುತ್ತೈಗಳ ನಿಧಿ ಅಥವಾ ರೊಪ್ಪ (ಎತ್ತುಗಳನ್ನು ಕೂಡುವ ಜಾಗ)ದಲ್ಲಿ ಆಹಾರ ವಿಲ್ಲ, ನೀರು ಸಿಗುತ್ತಿಲ್ಲ. ಹೇಗಾದರೂ ಬದುಕಿಸಬೇಕು ಎಂಬ ಚಲದಿಂದ ಶಿವಮೊಗ್ಗ, ಚಿಕ್ಕಮಂಗಳೂರು, ಧರ್ಮಸ್ಥಳ, ಶೃಂಗೇರಿ, ದಾವಣಗೆರೆ ಸೇರಿದಂತೆ ನಾನಾ ಕಡೆಗೆ ವಲಸೆಯ ದಾರಿ ಹಿಡಿದಿವೆ.

RELATED ARTICLES  ಪತ್ನಿಯ ಮೃತದೇಹ ತರಲು ದುಡ್ಡಿಲ್ಲದೆ ಕೊರಗುತ್ತಿದ್ದ ಪತಿ : ನೆರವಾದ ಅಪ್ಪು ಅಭಿಮಾನಿಗಳು

ದೇವರ ಎತ್ತುಗಳನ್ನು ಕಾಯುವ ಕಿಲಾರಿಗಳು ಶರ್ಟ್ ಹಾಕಲ್ಲ, ಒಂದು ಕಾಟನ್ ಒದ್ದಿಕೆ, ಹೆಗಲ ಮೇಲೆ ಕರಿ ಕಂಬಳಿ, ತಲೆಗೆ ರುಮಾಲ್, ಪಂಚೆ, ಕೈಯಲ್ಲಿ ಒಂದು ಕೋಲು ಹಿಡಿದು ದೇವರಿಗೆ ಮೀಸಲಿಟ್ಟ ಅಲೆಮಾರಿ ಎತ್ತುಗಳನ್ನು ರಕ್ಷಣೆ ಮಾಡುವ ಮೀಸಲು ಪಡೆಯೇ ಈ ಕಿಲಾರಿಗಳು. ಇವರು ತಮ್ಮ ಕುಟುಂಬವನ್ನೇಲ್ಲವನ್ನು ಬಿಟ್ಟು ದೇವರ ಎತ್ತುಗಳ ರಕ್ಷಣೆಗಾಗಿ ವಲಸೆ ಹೊರಟಿದ್ದಾರೆ. ಇಂದಿಗೂ ಅವರು ಅಲ್ಯೂಮಿನಿಯಂ ವಸ್ತುಗಳನ್ನು ಬಳಸುವುದಿಲ್ಲ. ಕಣ್ಣಿನಿಂದ ತಯಾರು ಮಾಡಿದ ತಟ್ಟೆ, ಮಡಿಕೆ, ಕುಡಿಕೆ ಇವರ ವಸ್ತುಗಳು. ಅವರು ದೇವರ ಎತ್ತುಗಳೊಂದಿಗೆ ವಲಸೆ ಹೊದರೆ ಬಳಸುವುದು ಮಣ್ಣಿನ ಮಡಿಕೆಯೇ ಯಾಗಿದೆ. ಕಿಲಾರಿ ರಾಮಣ್ಣ ಹೇಳುವಂತೆ ಕಳೆದ ಹತ್ತು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಬರವಿದೆ. ಅದರ ಮದ್ಯದಲ್ಲಿ ಪ್ರಾಣಿ ಸಂಕುಲಕ್ಕಾಗಿ ಮೀಸಲಿಟ್ಟ ಜಾಗವನ್ನು ರಾಷ್ಟ್ರದ ಪ್ರತಿಷ್ಟಿತ ಕಂನಿಗಳಿಗೆ ನೀಡಿದ್ದರಿಂದ ಮೇವಿಗೂ ಸಹ ಕೊರತೆ ಉಂಟಾಗಿ ದಿನ ನಿತ್ಯವೂ ಒಂದೆರಡು ಎತ್ತುಗಳು ಸಾವನಪ್ಪುತ್ತಿವೆ. ಮೇವು, ನೀರಿನ ಕೊರತೆ ಈ ಬಾರಿ ಹೆಚ್ಚಾಗಿ ವಾರದಲ್ಲಿ ೮-೧೦ ದೇವರ ಎತ್ತುಗಳು ಸಾವನಪ್ಪುತ್ತಿವೆ. ಇಂತಹ ಸ್ಥಿತಿಯನ್ನು ಕಂಡು ವಲಸೆ ಹೋಗುತ್ತಿದ್ದೇವೆ ಎನ್ನುತ್ತಾರೆ.

RELATED ARTICLES  ಪುಟ್ಟ ಗೌರಿ ತಮ್ಮ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟಿದ್ದಾಳೆ!

ದೇವರ ಎತ್ತುಗಳೇ ನಮ್ಮ ಮನೆ ದೇವರು, ಅವುಗಳಲ್ಲಿ ನಮ್ಮ ಪೂರ್ವಜರು ಇದ್ದಾರೆ. ಸಂಪ್ರದಾಯದಂತೆಯೇ ಅವುಗಳನ್ನು ನಾವು ನೋಡಿಕೊಳ್ಳುತ್ತಿದ್ದೇವೆ. ಇಂತಹ ಎತ್ತುಗಳು ಇಂದು ಸಾವನಪ್ಪುತ್ತಿವೆ. ಮೊದಲು ೬೦೦ಕ್ಕೂ ಹೆಚ್ಚು ಇದ್ದ ಎತ್ತುಗಳು ಬರಕ್ಕೆ ಸಿಲುಕಿ ೨೫೦ಕ್ಕೆ ಬಂದಿವೆ. ಅವುಗಳನ್ನಾದರೂ ಉಳಿಸಿಕೊಳ್ಳಲು ವಲಸೆ ಹೋಗುವಂತ ಪರಿಸ್ಥಿತಿ ಇದೆ ಎಂಬುದು ಬುಡಕಟ್ಟಿನವರ ಅಳಲು…..!