ಕುಮಟಾ:ಇಲ್ಲಿನಕೊಂಕಣಎಜ್ಯುಕೇಶನ್‍ಟ್ರಸ್ಟ್‍ನ ಸಮೂಹ ಸಂಸ್ಥೆಗಳಿಂದ ಸಂಭ್ರಮದ 69ನೇ ಗಣರಾಜ್ಯೋತ್ಸವವನ್ನುಆಚರಿಸಲಾಯಿತು.

ಗಣರಾಜ್ಯೋತ್ಸವದಧ್ವಜಾರೋಹಣವನ್ನು ಹಿರಿಯ ಟ್ರಸ್ಟಿಗಳಾದ ಶ್ರೀ ವಿಠ್ಠಲ ಆರ್. ನಾಯಕರವರು ನೆರವೇರಿಸಿದರು. ಟ್ರಸ್ಟಿಗಳಾದ ಶ್ರೀ ಡಿ.ಡಿ.ಕಾಮತ ಮಾತನಾಡಿ, ದೇಶಭಕ್ತಿ ಬೆಳೆಸಿಕೊಂಡು ದೇಶ ಸೇವೆ ಮಾಡದಿದ್ದರೆ ಮತ್ತೆಗುಲಾಮರಾಗುವ ಸಾಧ್ಯತೆಯಿದೆಎಂದು ವಿವರಿಸಿ, ಸರ್ವರಿಗೂಗಣರಾಜ್ಯೋತ್ಸವದ ಶುಭಾಶÀಯಗಳನ್ನು ತಿಳಿಸಿದರು. ಸರಸ್ವತಿ ಪದವಿಪೂರ್ವಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸುಲೋಚನಾ ರಾವ್, ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಲೀಲಾವತಿ ನಾಯಕ, ಶ್ರೀ ಆರ್.ಎಚ್.ದೇಶಭಂಡಾರಿ, ಸಿ.ವಿ.ಎಸ್.ಕೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿಶ್ರೀಮತಿ ಸುಮಾ ಪ್ರಭು, ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿಶ್ರೀಮತಿ ಸುಜಾತಾ ನಾಯ್ಕ, ರಂಗಾದಾಸ್ ಶಾನಭಾಗ ಹೆಗಡೆಕರ ಬಾಲಮಂದಿರದ ಮುಖ್ಯಾಧ್ಯಾಪಕಿಶ್ರೀಮತಿ ಸಾವಿತ್ರಿ ಹೆಗಡೆ ಮೊದಲಾದವರುಈ ಸಂದರ್ಭದಲ್ಲಿಉಪಸ್ಥಿತರಿದ್ದರು.

RELATED ARTICLES  ಕೊಂಕಣದಲ್ಲಿ ‘ಸರಸ್ವತಿ ಸಂಭ್ರಮ’

ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿನಿ ಬಿ.ವಿ.ದಿಶಾ ಸಂಗಡಿಗರುರಾಷ್ಟ್ರಗೀತೆ, ರೈತಗೀತೆ, ವಂದೇ ಮಾತರಂ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶಿಕ್ಷಕ ಪ್ರಕಾಶಗಾವಡಿ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ತದನಂತರಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.

RELATED ARTICLES  ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಅಧಿಕೃತ ಆಂಡ್ರಾಯ್ಡ್ ಮೊಬೈಲ್ ಆಪ್ ಲೋಕಾರ್ಪಣೆ