ಕುಮಟಾ: ಗಣರಾಜ್ಯೋತ್ಸವದ ಶುಭ ಸಂದರ್ಭದಂದು ಕುಮಟಾದ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ವತಿಯಿಂದ ಹಿರೇಗುತ್ತಿಯ ಪದವಿಪೂರ್ವ ಕಾಲೇಜಿನಲ್ಲಿ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ನ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು 26/01/18 ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಅವರ ಪರಿಶ್ರಮದ ಜೊತೆಗೆ ಶಿಕ್ಷಕರ ಪರಿಶ್ರಮ, ಪ್ರೋತ್ಸಾಹ ಕೂಡಾ ಇರುತ್ತದೆ. ಹಾಗಾಗಿ ಸಾಧನೆಗೈದ ವಿದ್ಯಾರ್ಥಿಗಳೊಂದಿಗೆ ಅವರ ಏಳಿಗೆಗಾಗಿ ಶ್ರಮಿಸಿದ ಎಲ್ಲಾ ಉಪನ್ಯಾಸಕರ ಪರವಾಗಿ ಪ್ರಾಂಶುಪಾಲರನ್ನು ಸನ್ಮಾನಿಸಲಾಗಿದೆ. ಈ ಕಾರ್ಯಕ್ರಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರೆ ಇತರೇ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ ಎನ್ನುವುದು ನಮ್ಮ ಆಶಯ. ಪ್ರತಿಭಾವಂತರ ಜೊತೆಗೆ ಶಿಕ್ಷಣದಲ್ಲಿ ಹಿಂದುಳಿದಿರುವ ಇನ್ನಿತರ ವಿದ್ಯಾರ್ಥಿಗಳನ್ನು ಕೂಡಾ ಹುರಿದುಂಬಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಸತತ ಅಭ್ಯಾಸ ಪ್ರಯತ್ನದ ಮೂಲಕ ಮುನ್ನಡೆದರೆ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

RELATED ARTICLES  ಲೋಕಸಭಾ ಚುನಾವಣಾ ಮತ ಎಣಿಕೆ : ಜಿಲ್ಲೆಯಾದ್ಯಂತ ಮೇ 22 ರಿಂದ 24 ರ ವರೆಗೆ ನಿಷೇಧಾಜ್ಞೆ.

ನಿವೃತ್ತ ಶಿಕ್ಷಕರಾದ ಸುಖದ ನಾಯಕ ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆಯವರು ಬಡವರ ಪರ ಹೆಚ್ಚು ಕಾಳಜಿ ವಹಿಸುತ್ತಿದ್ದು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದಾರೆ. ಇಂತಹ ನಿಃಸ್ವಾರ್ಥ ಮನೋಭಾವನೆಯ ವ್ಯಕ್ತಿ ಸಿಗುವುದು ತೀರಾ ವಿರಳ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮಾನಂದ ಗಾಂವಕರ ರವರು ನಾಗರಾಜ ನಾಯಕ ತೊರ್ಕೆಯವರ ಕಾರ್ಯವನ್ನು ಆಭಿನಂದಿಸಿದರು.

ಈ ಸಂದರ್ಭದಲ್ಲಿ ಎಲ್ಲಾ ಉಪನ್ಯಾಸಕರ ಪರವಾಗಿ ಪ್ರಾಂಶುಪಾಲರಾದ ಪ್ರೇಮಾನಂದ ಗಾಂವಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ನ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿರುವುದಲ್ಲದೇ ಅತಿ ಹೆಚ್ಚು ಅಂಕ ಗಳಿಸಿದ ಅಂಕಿತಾ ಪ್ರಭಾಕರ ನಾಯ್ಕ, ಗೋಪಾಲ ನಾಗು ಹಳ್ಳೇರ ಇವರನ್ನು ಪುರಸ್ಕರಿಸಲಾಯಿತು. ಹಾಗೂ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೀವರ ನಾಗರಾಜ ನಾಯಕ ಇವರನ್ನೂ ಕೂಡಾ ಪುರಸ್ಕರಿಸಲಾಯಿತು.

RELATED ARTICLES  ಗೋಡೌನ್ ನಲ್ಲಿ 102 ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಪಡಿತರ ಅಕ್ಕಿ ಪೊಲೀಸ್ ವಶಕ್ಕೆ

ಉಪನ್ಯಾಸಕರಾದ ಅರುಣ ಹೆಗಡೆಯವರು ಎಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕರಾದ ನಾರಾಯಣ ಹೆಗಡೆ ಅವರು ವಂದಿಸಿದರು. ಶೀಲಾ ಮೇಸ್ತ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುನೀಲ ಪೈ, ರಾಮನಾಥ ಪ್ರಭು, ಅರುಣ ಕವರಿ ತೊರ್ಕೆ, ಸದಾನಂದ ಹೊಸ್ಕಟ್ಟ, ಸಣ್ಣಪ್ಪ ನಾಯಕ, ಪ್ರಶಾಂತ ಗಾಂವಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.