ಶ್ರೀಭಾರತೀ ವಿದ್ಯಾಲಯದಲ್ಲಿ ಗಣರಾಜೊತ್ಸವದ ದಿನವು ಉತ್ಸವದ ಕಳೆಯನ್ನು ಪಡೆದುಕೊಂಡಿತು.ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಧ್ವಜಾರೋಹಣ,ದೇಶಭಕ್ತಿ ಗೀತ ಗಾಯನ,ಯೋಗ ಪ್ರದರ್ಶನ,ಪಾಲಕರ ಕ್ರೀಡಕೂಟ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ನೂರಾರು ವಿದ್ಯಾರ್ಥಿ ಹಾಗೂ ಪಾಲಕರಿಗೆ ಬಹುಮಾನ ವಿತರಣೆಗಳು ನಡೆದವು.

ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಶಾಲಾ ಆಡಳಿತ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಕಲಾ ಮತ್ತು ವಿಜ್ಞಾನ ಪ್ರದರ್ಶನದ

ಉದ್ಘಾಟನೆ ನೆರವೇರಿತು. ಸಾವಿರಾರು ಮಂದಿ ಸಾರ್ವಜನಿಕರು ಈ ಕಲಾ ಮತ್ತು ವಿಜ್ಞಾನ ಪ್ರದರ್ಶನವನ್ನು ವೀಕ್ಷಿಸಿ ಪ್ರಶಂಸಿಸಿದರು.

ಕಲಾ ಮತ್ತು ವಿಜ್ಞಾನ ಪ್ರದರ್ಶನವು ಇಸ್ರೋದ ಸಾಧನೆಗಳು, ಮೊಬೈಲ್ ಪ್ಲಾನೆಟೊರಿಯಮ್, ಗೋಲೋಕ, ಶಕ್ತಿಯ ಪರ್ಯಾಯ ಮೂಲಗಳು, ರಸಾಯನಶಾಸ್ತ್ರ ಲೊಕ, ಮಾನವ ಅಂಗ ರಚನಾ ಶಾಸ್ತ್ರ, ಕಲಾ ಸೌಧ, ಗಣಿತ ಪ್ರದರ್ಶನಾಲಯ, ಪೌಷ್ಟಿಕ ರಸಪ್ರಶ್ನೆ, ಮರಳು ಚಿತ್ರ ಪ್ರದರ್ಶನ, ಆಟಗಳು ಮತ್ತು ಒಗಟು, ಚಿತ್ರಕಲಾ ಪ್ರದರ್ಶನ, ಗೊಕಥನ ಇವಿಷ್ಟು ವಿಷಯವನ್ನು ಕೇಂದ್ರೀಕರಿಸಿ ಆಯೋಜಿತವಾಗಿದೆ.

RELATED ARTICLES  ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

ಇವಲ್ಲದೇ ಸಾರ್ವಜನಿಕರಿಗಾಗಿ ಗವ್ಯೋತ್ಪನ್ನ ಮಾರಾಟ ಮಳಿಗೆ, ಸಾವಯವ ವಸ್ತುಗಳ ಮಾರಾಟ ಮಳಿಗೆ, ಶುದ್ಧ ದೇಶೀ ಗೋವಿನ ಉತ್ಪನ್ನಗಳಿಂದ ತಯಾರಿಸಿದ ತಿಂಡಿ, ತಿನಿಸುಗಳು, ಪೇಯಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಪುಷ್ಟಿಯನ್ನು ಒದಗಿಸಿಕೊಟ್ಟಿದೆ.

ದಿನಾಂಕ 27- 1- 2018 (ನಾಳೆ) ಬೆಳಿಗ್ಗೆ 9. 30 ರಿಂದ ಮಧ್ಯಾಹ್ನ 1.30 ರವರೆಗೆ ಪ್ರದರ್ಶನವು ಮುಂದುವರಿಯಲಿದ್ದು ಇನ್ನಷ್ಟು ಚಿತ್ತಾಕರ್ಷಕ ಮಳಿಗೆಗಳು ವಿವಿಧ ಪ್ರದರ್ಶನಗಳು ಸೇರ್ಪಡೆಯಾಗಲಿದೆ.

RELATED ARTICLES  ದೇವಗುಂಡಿಯಲ್ಲಿ ನಾಗ ಪ್ರತಿಷ್ಠೆ ಹಾಗೂ ಕಲಾವೃದ್ಧಿ ಕಾರ್ಯಕ್ರಮ

ನಾಳೆ ಸಂಜೆ 4.3೦ ರಿಂದ ಶ್ರೀಭಾರತೀ ವಿದ್ಯಾಲಯದ ವಾರ್ಷಿಕೋತ್ಸವವೂ ಕೂಡ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಗೋಪಾಲ ಬಿ. ಹೊಸೂರು, IPS ( ನಿವೃತ್ತ ಅಧಿಕಾರಿಗಳು) ಮಾಜಿ ಆರಕ್ಷಕ ಮಹಾನಿರೀಕ್ಷಕರು, ಕರ್ನಾಟಕ ಸರಕಾರ ಇವರು ಆಗಮಿಸಲಿದ್ದಾರೆ. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ವಾರ್ಷಿಕ ಸಂಚಿಕೆಯ ಲೋಕಾರ್ಪಣೆ, ವಿಶೆಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಪುರಸ್ಕಾರ ಇತ್ಯಾದಿ ಕಾರ್ಯಕ್ರಮಗಳು ಸಂಪನ್ನವಾಗಲಿವೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದವು ಈ ಮೂಲಕ ಎಲ್ಲರನ್ನೂ ಹೃತ್ಪೂರ್ವಕವಾಗಿ ಆಮಂತ್ರಿಸುತ್ತದೆ.