ಹೊನ್ನಾವರ: ತಾಲೂಕಿನ ಮಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಮಾಂಕಾಳ ವೈದ್ಯ ಉದ್ಘಾಟಿಸಿದರು.

ಶಾಲೆಯ ಹಳೆ ವಿದ್ಯಾರ್ಥಿ ಸುರೇಂದ್ರ ಹಳ್ಳೇರ್ ಇವನಿಗೆ ಸನ್ಮಾನ ಮಾಡಲಾಯಿತು. ನಂತರ ಮಾತನಾಡಿದ ಶಾಸಕ ಮಾಂಕಾಳ ವೈದ್ಯ ಮಾತನಾಡಿ ನಾನು ಕಷ್ಟಪಟ್ಟು ಶಿಕ್ಷಣ ಕ್ಷೇತ್ರದಲ್ಲಿ ಯಾವ ಕೊರತೆ ಇರಬಾರದು ಎಂದು ಕೆಲ್ಸ ಮಾಡುತ್ತಿದ್ದೇನೆ. ಪ್ರತಿಭಾನ್ವಿತ ವಿದ್ಯಾರ್ಥಿ ಸುರೇಂದ್ರ ಹಳ್ಳೇರ್ ನಿಗೆ ಸನ್ಮಾನ ಮಾಡಿದ್ದು ಕುಶಿ ತಂದಿದ್ದೆ. ನಾನು ಏನು ಯೋಚನೆ ಮಾಡುತ್ತಿದ್ದೇನೆ ಅದು ಇಲ್ಲಿ ನಡೆದ ಸನ್ಮಾನ ಉದಾಹರಣೆ ಎಂದರು. ಉತ್ತಮ ಪಾಲಿತಾಂಶ ಇದ್ದರೆ ಉಚಿತ ಶಿಕ್ಷಣ ಪಡೆಯಬಹುದು. ಶಿಕ್ಷಣ ಪ್ರತಿಯೊಬ್ಬ ಮಗುವಿಗೆ ಯಾವುದೇ ಕೊರತೆ ಇಲ್ಲದೆ ಸಿಗಬೇಕು. ರಸ್ತೆ ಸೇತುವೆ ಎಲ್ಲಾ ಯಾವಾಗ ಬೇಕಾದರೂ ಮಾಡಬಹುದು. ಆದರೆ ಶಿಕ್ಷಣ ಆಯಾ ಸಮಯದಲ್ಲಿ ಪಡೆದುಕೊಳ್ಳಬೇಕು. ನಾನು ನೇರವಾಗಿ ಮಕ್ಕಳಿಂದಲೇ ಸಮಸ್ಯೆಯನ್ನು ಕೇಳಿ ಪರಿಹರಿಸುತ್ತೆನೇ ಕಟ್ಟಡ ಕೂಡ ವಿದ್ಯಾರ್ಥಿ ಪ್ರತಿನಿಧಿಗಳಿಂದ ಶಾಲಾ ಕೊರತೆಯನ್ನು ನನಗೆ ತಿಳಿಸಿದ್ದಾರೆ. ಅವರೊಂದಿಗೆ ನಾನು ಚರ್ಚಿಸಿ ನಿಮ್ಮ ಸಮಸ್ಯೆ ಬಗೆ ಹರಿಸುತ್ತೆನೆ ಎಂದರು. ಕಾಲೇಜಿಗೆ ಅವಶ್ಯಕತೆಯಿರುವ ನೀರಿನ ಪಿಲ್ಟರ್ ನನ್ನ ಸ್ವಂತ ಖರ್ಚಿನಲ್ಲಿ ನಾಳೆಯೇ ಕಾಲೇಜಿಗೆ ಕೊಡಿಸುತ್ತೇನೆ. ವಿದ್ಯಾರ್ಥಿಗಳನ್ನು ನಾನು ಎತ್ತರದ ಸ್ಥಾನದಲ್ಲಿ ನೋಡಲು ಬಯಸುತ್ತೇನೆ. ಉತ್ತಮ ಪಳಿತಾಂಶ ಮಾಡಿದ್ದರೆ ನಾನೇ ನಿಮ್ಮ ವಿದ್ಯಾಭ್ಯಾಸ ಪಡೆಯಲು ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತೇನೆ. ನಿಮ್ಮ ಹೆತ್ತವರು ಪಟ್ಟ ಕಷ್ಟವನ್ನು ನೀವು ಪಡಬಾರದು. ಕಾಲೇಜಿಗೆ ಪೂರಕವಾದ ಲ್ಯಾಬ್, ಹಾಗೂ ಇನ್ನಿತರ ಪೀಠೋಪಕರಣ ಆದಷ್ಟು ಬೇಗ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ಇವತ್ತು 253 ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಸನ್ಮಾನ ಮಾಡಬಹುದು. ಇದು ಎಲ್ಲ ವಿದ್ಯಾರ್ಥಿಗಳಿಗೆ ಸನ್ಮಾನ ಸಿಗುವಂತಾಗಬೇಕು. ನಾನು ಜನಗಳ ಮಧ್ಯೆ ಇರೋದಕ್ಕೆ ಬಯಸುತ್ತೇನೆ. ಯಾವ ಸಂಧರ್ಬದಲ್ಲಿ ನನ್ನ ಭೇಟಿ ಮಾಡಬಹುದು ಎಂದರು.

RELATED ARTICLES  ಮಹಿಳೆಯನ್ನು ಲಾಡ್ಜ್ ಗೆ ಕರೆತಂದು ಪಂಗನಾಮ ಹಾಕಿದ ಭೂಪ : ಗೋಕರ್ಣದಲ್ಲಿ ಘಟನೆ.

ಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಲ್ಲಾಸ ನಾಯ್ಕ, ಸತೀಶ್ ನಾಯ್ಕ, ಚಂದ್ರಶೇಖರ್ ಗೌಡ, ಅಣ್ಣಯ್ಯ ನಾಯ್ಕ, ಗಜಾನನ ನಾಯ್ಕ, ಈಶ್ವರ್ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ಅಗಸ್ಟ 9 ರಂದು ಶ್ರೀ ಕ್ಷೇತ್ರ ಗೋಕರ್ಣದಲ್ಲಿ ವಿಲಂಬಿ ಸಂವತ್ಸರದ 'ಯಾಮಪೂಜೆ'