ಹೊನ್ನಾವರ: ಅರಣ್ಯ ಇಲಾಖೆ ಹೊನ್ನಾವರ ವಿಭಾಗ,ಕುಮಟಾ ಉಪವಿಭಾಗ ಹರೇಗುತ್ತಿ ವಲಯ ಇವರ ಜಂಟೀ ಆಶ್ರಯದಲ್ಲಿ ಆಮೆ ಸಂರಕ್ಷಣಾ ಪ್ರದೇಶವಾದ ಗಂಗೆ ಕೊಳ್ಳದ ಹತ್ತಿರ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಕಡಲಾಮೆ ಮರಿಗಳನ್ನು ಪಾಲನೆ ಮಾಡಿ ಸಂರಕ್ಷೀಸುವ ಸಲುವಾಗಿ ಸಮುದ್ರದ ನೀರಿಗೆ ತೇಲಿ ಬಿಟ್ಟರು.

RELATED ARTICLES  ಬಿಜೆಪಿಗೆ ಸೇರ್ಪಡಗೊಂಡ ಮುಸ್ಲಿಂ ಮಹಿಳೆಯರು!

ಕಡಲಾಮೆ‌ ಸಂರಕ್ಷಣೆ ಹಾಗೂ ಅವುಗಳ ವಂಶ ಅಭಿವೃದ್ಧಿಯ ದೃಷ್ಟಿಯಿಂದ ಈ ಕಾರ್ಯ ಮಾಡಲಾಗುವುದೆಂದು ಇಲಾಖೆಯವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾರುತಿ ತಾಂಡೆಲ್,ಪೇರು ಅಂಬಿಗ, ಶಾಂತರಾಮ ನಾಯ್ಕ,ಅರುಣ ಗೌಡ,ಹನೀಫ್ ಸಾಬ್, ದೇವೇಂದ್ರ ಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES  ಹೆಗಡೆಕಟ್ಟಾದಲ್ಲಿ ಪ್ರತಿಭಾಕಾರಂಜಿ ಮತ್ತು ವೀಣಾ ಭಟ್ ರಿಗೆ ಸನ್ಮಾನ