ಶಿರಸಿ: ಮಕ್ಕಳು ಸಂಸ್ಕಾರವಂತರಾಗಬೇಕು. ತಂದೆ-ತಾಯಿ ಗುರುಹಿರಿಯರನ್ನು ಗೌರವಿಸಬೇಕು. ಈ ದೇಶದ ಸಂಸ್ಕತಿ ಬೇರೆ ಯಾವ ದೇಶದಲ್ಲೂ ಇಂತಹ ಉತ್ತಮ ಸಂಸ್ಕಾರ ಸಂಸ್ಕತಿಗಳನ್ನು ಕಾಣಲು ಸಾಧ್ಯವಿಲ್ಲ. ಇಂತ ಅಪರೂಪದ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು. ಎಂದು ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಹೇಳಿದರು.
ಅವರು ಶಿರಸಿ ತಾಲೂಕಿನ ಬರೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 69 ನೇ ಪ್ರಜಾರಾಜ್ಯೋತ್ಸವದಂದು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಶಾಲೆಯನ್ನು ದತ್ತು ಸ್ವೀಕರಿಸಿ ಈಗಾಗಲೇ ಶಾಲೆಗೆ ಹಲವಾರು ವಸ್ತುಗಳನ್ನು ಕೊಡುಗೆ ನೀಡಿರುವ ಇವರು ಈ ಶುಭ ಸಂದರ್ಭದಲ್ಲಿ ಶಾಲೆಗೆ ಕಂಪೌಂಡ ಗೋಡೆ ನಿರ್ಮಿಸಲು 2.90 ಲಕ್ಷ ರೂಪಾಯಿಗಳನ್ನು ಕೊಡಿಸುತ್ತಿರುವ ಸುದ್ದಿಯನ್ನು ತಿಳಿಸಿದರಲ್ಲದೇ ಶಾಲೆಗೆ ಇನ್ನೊಂದು ಕೊಠಡಿ ಸಭಾಂಗಣ ಸಹಿತ ನಿರ್ಮಾಣಕ್ಕೆ 13 ಲಕ್ಷ ರೂಪಾಯಿಗಳನ್ನು ಕೊಡಿಸುವ ಬರವಸೆ ನೀಡಿದರು.
ಸ್ಥಳೀಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದ ಮೊಕ್ತೇಸರ ಮಂಜುನಾಥ ಭಟ್ ಬೆಳಕಂಡ ಮುಖ್ಯ ಅತಿಥಿಯಾಗಿದ್ದು ನಮ್ಮ ಅಂತರಾತ್ಮ ಒಪ್ಪುವಂತ ಕಾರ್ಯಗಳನ್ನು ಮಾಡಬೇಕು. ತಪ್ಪು ದಾರಿಯಲ್ಲ ಹೋಗಬಾರದು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕುಳವೆ ಗ್ರಾ,.ಪಂ ಮಾಜಿ ಅಧ್ಯಕ್ಷೆ ಪ್ರತಿಭಾ ಭಟ್ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸವಿತಾ ನಾಯ್ಕ,. ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ನಾಯ್ಕ ವೇದಿಕೆಯಲ್ಲಿದ್ದರು.