ಹೊನ್ನಾವರ : ಗುಜರಾತ್ ರಾಜ್ಯದಿಂದ ಆಗಮಿಸಲಿರುವ ಸಪ್ತಕ್ ಜಾನಪದ ನೃತ್ಯ ತಂಡದ 15 ನುರಿತ ಕಲಾವಿದರಿಂದ ‘ರಾಸ್’ ಮತ್ತು ‘ಗರ್ಭ’ ಎಂಬ ವಿಶೇಷ ಪ್ರಸ್ತುತಿ ಪ್ರದರ್ಶಿಸಲಿದ್ದಾರೆ. ಜಾನಪದ ತಳಹದಿಯಲ್ಲಿ ರೂಪಗೊಂಡಿರುವ ದಾಂಡಿಯಾರಾಸ್ ಪ್ರಸ್ತುತಿಗೊಳ್ಳಲಿದೆ.
ಜಾನಪದ ಶೈಲಿಯಲ್ಲಿಯೇ ವೇಷಭೂಷಣಗಳನ್ನು ಅಳವಡಿಸಿಕೊಂಡು ಪ್ರದರ್ಶಿಸುವ ಈ ಖ್ಯಾತ ತಂಡ ದೇಶ ವಿದೇಶಗಳಲ್ಲಿ ಮಾನ್ಯತೆ ಪಡೆದಿದೆ. ತದನಂತರದಲ್ಲಿ ದೃಷ್ಠಿ ಡ್ಯಾನ್ಸ್ ಎನ್ಸೆಂಬಲ್ ಇವರಿಂದ ಶ್ರೀಮತಿ ಅನುರಾಧಾ ವಿಕ್ರಾಂತ ಹಾಗೂ ತಂಡ ಪ್ರಸ್ತುತಪಡಿಸಲಿರುವ ‘ನವರಸ ಶಕ್ತಿ’ ಎಂಬ ಅಪರೂಪದ ಡಾನ್ಸ್ ಪ್ರದರ್ಶನಗೊಳ್ಳಲಿದೆ. ಈ ನೃತ್ಯದಲ್ಲಿ ದೇವಿಯ ವಿವಿಧ ನವರಸಗಳನ್ನು ಪೌರಾಣಿಕ ಕಥೆಯೊಂದಿಗೆ ವಿದ್ವಾನ್ ಡಿ.ಎಸ್. ಶ್ರೀವಾಸ್ತವ ಮತ್ತು ವಿದ್ವಾನ್ ಗುರುಮೂರ್ತಿಯವರ ವಿಶಿಷ್ಠ ಸಂಯೋಜನೆಯೊಂದಿಗೆ ಪ್ರಸ್ತುತಗೊಳ್ಳಲಿದೆ.
ಅಂತಿಮವಾಗಿ ಚೆನ್ನೈಯಿಂದ ಆಗಮಿಸಲಿರುವ ಕಲೈಮಾಮಣಿ ವಿ. ದಕ್ಷಿಣಾಮೂರ್ತಿ ಮತ್ತು ಅವರ 15 ಕಲಾವಿದರ ತಂಡದಿಂದ ‘ಕೀಚಕ ವಧೆ’ ತೆರುಕುತ್ತು ಪ್ರದರ್ಶನಗೊಳ್ಳಲಿದೆ.