ಕುಮಟಾ: ಯುವಬಿಂಬ ಅಳ್ವೇಕೋಡಿ ಇವರ ಆಶ್ರಯದಲ್ಲಿ 5ನೇ ವರ್ಷದ ಗ್ರಾಮಪಂಚಾಯತ ಮಟ್ಟದ ಅಂಗನವಾಡಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಥಳೀಯ ಮಕ್ಕಳಿಂದ “ಚಿಣ್ಣರ ಕಲರವ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಾಸಕರಾದ ಶಾರದಾ ಮೋಹನ ಶೆಟ್ಟಿ ಚಿಣ್ಣರ ಜೊತೆ ದೀಪ ಬೆಳಗಿಸಿ ಉದ್ಘಾಟಿಸಿದರು.

RELATED ARTICLES  ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯ: ಹಳಿಯಾಳದಲ್ಲಿ ಬಲಿಯಾಯ್ತು ಗರ್ಭಿಣಿಯ ಜೀವ

ನಂತರ ಸಂಘಟಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು,ಇಂತಹ ಕಾರ್ಯಕ್ರಮಗಳು ಹೆಚ್ಚಿದಾಗ ಮಕ್ಕಳ ಮನಸ್ಸು ಅರಳುವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಭಾಗವಹಿಸಿ ಯುವ ಜನತೆ ಹಾಗೂ ಹಿರಿಯರು ಸೇರಿ ಪ್ರತೀ ವರ್ಷ ರೂಪಿಸುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

RELATED ARTICLES  ಗೋಕರ್ಣ ಗೌರವ ಪಡೆದ ಶ್ರೀ ಶ್ರೀ ಮಹದೇಶ್ವರ ಸ್ವಾಮೀಜಿ.

ಜೆಡಿಎಸ್ ಪ್ರಮುಖ ಪ್ರದೀಪ ನಾಯಕ, ಪ್ರಮುಖರಾದ ವಿರೂಪಾಕ್ಷ ನಾಯ್ಕ,ಭಾಸ್ಕರ ಪಟಗಾರ ಇನ್ನಿತರರು ಹಾಜರಿದ್ದರು.