ಹೊನ್ನಾವರ – ತಾಲೂಕಿನ ಗುಣವಂತೆಯ ಕೆರೆಮನೆ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ ವಿದ್ಯುಕ್ತವಾಗಿ ಶುಭಾರಂಭಗೊಂಡಿತು. ಉತ್ಕರ್ಷ ದರ್ಜೆಯ ರಂಗಸ್ಥಳವನ್ನು ಜನಪ್ರಿಯ ಶಾಸಕರಾದ ಶ್ರೀ ಮಂಕಾಳ ವೈದ್ಯರು ಲೋಕಾರ್ಪಣೆಗೊಳಿಸಿದರು.
ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡ ಸಭಾಕರ್ಯಕ್ರಮ ಕಲಾ ಪ್ರಪಂಚದಲ್ಲಿ ಕಲಾರಾಧನೆ ಮಾಡಿ ದೈವಾಧೀನರಾದ ಶ್ರೀ ನಾರಾಯಣ ಪಂಡಿತ, ಗೋಕರ್ಣ, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀ ಎಂ. ಜಿ. ಬರವಣಿ ಮುಂತಾದವರನ್ನು ಸ್ಮರಿಸಿ ಶೃದ್ಧಾಂಜಲಿ ಅರ್ಪಿಸಲಾಯಿತು.
ಸಭಾಸದರನ್ನು ಕಲಾಪೆÇೀಷಕರನ್ನು ಸರ್ವರನ್ನು ಸ್ವಾಗತಿಸಿ ರಾಷ್ಟ್ರೀಯ ನಾಟ್ಯೋತ್ಸವದ ಆಶಯವನ್ನು ವ್ಯಕ್ತಪಡಿಸಿ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸರ್ವಮಂಗಳಾ ಶಂಕರ್‍ರವರು ನಾಟ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಂಗಸ್ಥಳ ಉದ್ಘಾಟಿಸಿದ ಜನಪ್ರಿಯ ಶಾಸಕರಾದ ಶ್ರೀ ಮಂಕಾಳ ವೈದ್ಯರವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ವೈವಿಧ್ಯಮಯ ಕಲಾ ಸಂಗಮದ ಈ ನಾಟ್ಯೋತ್ಸವಕ್ಕೆ ಸರಕಾರದ ಸಹಾಯಧನದ ಅವಶ್ಯಕತೆ ಇದೆ. ಕಲಾ ಬೆಳವಣಿಗೆಯಲ್ಲಿ ಸಮಾಜ, ಸರಕಾರ ಕೈಜೋಡಿಸಿದಿದ್ದರೆ ನಮ್ಮಿಂದ ಅಪರಾಧವಾಘುತ್ತದೆ. ಸಮಾಜದ ಪರಿಶುದ್ಧತೆಗೆ ಕಲಾ ಬೆಳವಣಿಗೆ ಅನಿವಾರ್ಯ. ಈ ದಿಸೆಯಲ್ಲಿ ನನ್ನ ವೈಯಕ್ತಿಕ ಧನ ಸಹಾಯವನ್ನು ಘೋಷಿಸಿದರು.
ನಾಟ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಡಾ. ಸರ್ವಮಂಗಳಾ ಶಂಕರ್ ಕಲೆಗಳು ಹರಿಯುವ ನದಿಯಾಗಿರಬೇಕು. ಹೊಸ ಹೊಸ ದೃಷ್ಠಿಕೋನದಿಂದ, ಪರಂಪರೆಗೆ ತೊಡಕಾಗದಂತೆ ವೈವಿಧ್ಯಮಯವಾಗಿ ಬೆಳೆಯಬೇಕು ಎಂದರು. ಯಕ್ಷಗಾನದ ಅಧ್ಯಯನಕ್ಕೆ, ದಾಖಲೆಗೆ ವಿಶ್ವವಿದ್ಯಾಲಯ ಕಾಳಜಿ ವಹಿಸಬೇಕೆಂದರು.
ಕೆರೆಮನೆ ಮೇಳ ನೀಡುತ್ತಾ ಬಂದಿರುವ ಪ್ರತಿಷ್ಠಿತ ಶ್ರೀ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ 2017ನ್ನು ಶ್ರೀ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮಂಡಳಿ, ಹಾಸ್ಯಗಾರ ಮೇಳ, ಕರ್ಕಿ ಇವರಿಗೆ 25,000/- ನಗದು, ತಾಮ್ರ ಫಲಕದೊಂದಿಗೆ ಪ್ರಧಾನ ಮಾಡಲಾಯಿತು.
ಖ್ಯಾತ ಬರಹಗಾರರಾದ ಶ್ರೀ ಹೆಚ್. ಎಸ್. ಮೋಹನ, ಸಾಗರ ಇವರು ಕರ್ಕಿ ಮೇಳದ ಬಗ್ಗೆ ಅಭಿನಂದನಾ ನುಡಿಗೈದರು. ಪ್ರಶಸ್ತಿ ಪುರಸ್ಕೃತರಾದ ಕರ್ಕಿ ಮೇಳದ ಸಂಸ್ಥಾಪಕ ಕಲಾವಿದರಾದ ಶ್ರೀ ಸತ್ಯ ಹಾಸ್ಯಗಾರರು ಮಾತನಾಡಿ ಧನ್ಯತೆಯನ್ನು ವ್ಯಕ್ತಪಡಿಸಿದರು. ಕೆರೆಮನೆ ಮೇಳದೊಂದಿಗೆ ಕರ್ಕಿ ಮೇಳದ ಸಾಮ್ಯತೆಯನ್ನು, ಹೊಂದಾಣಿಕೆ ಪರ್ವವನ್ನು ನೆನಪಿಸಿಕೊಂಡರು.
ಶ್ರೀ ಶಂಭು ಹೆಗಡೆಯವರ ಕಲಾ ಪ್ರಪಂಚದ ಕೊಡುಗೆಯ ಸ್ಮರಣೆಗಾಗಿ ಕೇಂದ್ರ ಸರಕಾರದ ಅಂಚೆ ವಿಭಾಗದವರಿಂದ ಶ್ರೀ ಶಂಭು ಹೆಗಡೆಯವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿ, ಕಾರವಾರ ವಿಭಾಗದವರು, ಅಂಚೆ ನಿರೀಕ್ಷಕರಾದ ಶ್ರೀ ಸಹನಕುಮಾರ, ಹೊನ್ನಾವರ ಪೆÇೀಸ್ಟ್ ಮಾಸ್ಟರ್ ಶ್ರೀ ಎಂ. ಎಂ. ಗೊಂಡ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಶೀ ಹರಿಪ್ರಕಾಶ ಕೋಣೆಮನೆ, ಬೆಂಗಳೂರು, ಹಿರಿಯ ಪತ್ರಕರ್ತರು ಮಾತನಾಡಿದರು. ಅಧ್ಯಕ್ಷತೆಯನ್ನು ಪೆÇ್ರ. ಕೆ. ಇ. ರಾಧಾಕೃಷ್ಣ ವಹಿಸಿದ್ದರು. ಶ್ರೀ ಶಿವಾನಂದ ಹೆಗಡೆ ವಂದಿಸಿದರು.