ಹೊನ್ನಾವರ: ತಾಲೂಕಿನ ಮುಗ್ವಾದ ನಾಮಧಾರಿ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ನಿರ್ಮಾಣವಾಗಲಿರುವ ನಾಮಧಾರಿ ಸಭಾಭವನದ ಶಿಲಾನ್ಯಾಸ ಸಮಾರಂಭ ಶ್ರೀ ರಾಮ ಕ್ಷೇತ್ರದ ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿತು.
ನಾಮಧಾರಿ ಅಭಿವೃದ್ಧಿ ಸಂಘವು 30ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು ಊರಿಗೆ ಅತ್ಯವಶ್ಯಕ ಇರುವ ನೀರಿನ ಪೂರೈಕೆ, ರಸ್ತೆ ನಿರ್ಮಿಸಿಕೊಂಡು ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಷ್ಟದಲ್ಲಿದ್ದವರಿಗೆ ಆರ್ಥಿಕವಾಗಿ ಸಹಾಯ ಮಾಡಿದೆ ಇಂತಹ ಸಂಘಟನೆಗಳ ಅಗತ್ಯ ಸಮಾಜಕ್ಕಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಈ ಮಹತ್ಕಾರ್ಯಕ್ಕೆ ಶಾಸಕ ಮಾಂಕಳ ವೈದ್ಯ 2.50ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ,ವೆಂಕಟ್ರಮಣ ಹೆಗಡೆ, ಇನ್ನಿತರ ಪ್ರಮುಖರು ಹಾಜರಿದ್ದರು.