ಹೊನ್ನಾವರ : ತಾಲೂಕಾ ಹಾಗೂ ಉತ್ತರಕನ್ನಡಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು, ಶ್ರೀ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು ಕವಲಕ್ಕಿ ಮತ್ತು ಶ್ರೀ ಮಹಾಬಲ ಶೋಧ ಸಂಸ್ಥಾನಮ್ ಬೆಂಗಳೂರು ಇವರ ಸಹಯೋಗದಲ್ಲಿ, ಹಿರಿಯ ಪತ್ರಕರ್ತ ಶ್ರೀ ಜೀಯು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಯುತ ಜಿ.ಎಸ್ ಭಟ್ಟ ಮೈಸೂರು ಅವರ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಯವರ ಕುರಿತಾದ 2 ಪುಸ್ತಕಗಳು ಲೋಕಾರ್ಪಣೆಗೊಂಡವು.

RELATED ARTICLES  ಸಹಯಾನದಲ್ಲಿ ಪ್ರಸಾಧನ ಮತ್ತು ವಸ್ತ್ರವಿನ್ಯಾಸ ಶಿಬಿರ

ಯಕ್ಷಗಾನ ಕಲಾಧರ ಹಾಗೂ ಯಕ್ಷಯುಗಪುರುಷ ಶೀರ್ಷಿಕೆಯ ಪುಸ್ತಕಗಳು ಬಿಡುಗಡೆಗೊಂಡವು.

ಇದೇ ಸಂದರ್ಭದಲ್ಲಿ ಸುಪ್ರಸಿದ್ಧ ಭಾಗವತ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಇವರಿಂದ ಯಕ್ಷಗಾಯನ ವ್ಯಾಖ್ಯಾನ ವೈಭವ, ಶ್ರೀಕೃಷ್ಣ ಮ್ಯೂಸಿಕ್ನ ಶ್ರೀ ಮಾರುತಿ ನಾಯಕರಿಂದ ಚಿಟ್ಟಾಣಿಯವರ 60ಕ್ಕೂ ಹೆಚ್ಚು ಯಕ್ಷಗಾನಗಳ ಡಿವಿಡಿ_ಪ್ರದರ್ಶನ ಮತ್ತು ಮಾರಾಟ ಜೊತೆಗೆ ನನ್ನ ಯಕ್ಷಚಿತ್ರಮಾಲಿಕೆ ಯಿಂದ ಆಯ್ದ ಚಿಟ್ಟಾಣಿ ಫೋಟೋಗಳ ಪ್ರದರ್ಶನ ನಡೆಯಿತು.

RELATED ARTICLES  ಹಫ್ತಾ ವಸೂಲಿ ಮಾಡುತ್ತಿದ್ದ ಪೊಲೀಸ್ ಪೇದೆ ಎ.ಸಿ.ಬಿ ಬಲೆಗೆ

ಹಿರಿಯ ಕಲಾವಿದ ಜಲವಳ್ಳಿ ವೆಂಕಟೇಶ ರಾವ್, ಚಿಟ್ಟಾಣಿಯವರ ಶ್ರೀಮತಿ ಸುಶೀಲಾ ಹೆಗಡೆ, ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ , ಶ್ರೀಯುತ ಮೋಹನ ಹೆಗಡೆ, ಪ್ರಾಚಾರ್ಯ ಶ್ರೀ ಎಸ್ ಜಿ ಭಟ್ಟ, ಉಪನ್ಯಾಸಕರಾದ ಶ್ರೀ ಎನ್ ಜಿ ಅಪಗಾಲ್ ಮತ್ತು ಶ್ರೀ ಪ್ರಶಾಂತ ಹೆಗಡೆ ಮುಂತಾದ ಗಣ್ಯರು ಉಪಸ್ತಿತರಿದ್ದರು.

ಕನ್ನಡಸಾಹಿತ್ಯ ಪರಿಷತ್ತಿನ ಸದಸ್ಯರು, ಕಲಾವಿದರು, ಕಲಾಸಕ್ತರು ಪತ್ರಕರ್ತರು ಭಾಗವಹಿಸಿದ್ದರು.