ಹೊನ್ನಾವರ: ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿತು.

ಮೊದಲಿಗೆ ಬೆಂಗಳೂರಿನ ಶ್ರೀಮತಿ ಅನುರಾಧಾ ವಿಕ್ರಾಂತ ಹಾಗೂ ದೃಷ್ಠಿ ಡ್ಯಾನ್ಸ್ ಎನ್ಸೆಂಬಲ್ ತಂಡದವರು ದೇವಿಯ ವಿವಿಧ ನವರಸಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.

RELATED ARTICLES  ಗೋಕರ್ಣದ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕ ಪ್ರವಾಸಿಗ ಸಾವು.

DSC 3468
ತದನಂತರದಲ್ಲಿ ಗುಜರಾತ್ ರಾಜ್ಯದಿಂದ ಆಗಮಿಸಿದ ಸಪ್ತಕ್ ಜಾನಪದ ನೃತ್ಯ ತಂಡದ ಕಲಾವಿದರಿಂದ ದಾಂಡಿಯಾರಾಸ್, ಹೂಡಾರಾಸ್, ಅತಂಗರಾಸ್ ಮತ್ತು ಮಾಂಡವಿರಾಸ್ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮದ ನಂತರ ಕುಮಟಾದ ಶ್ರೀ ವಿಶ್ವೇಶ್ವರ ಪಟಗಾರ ಇವರು ಗಾನಕುಂಚದ ಮೂಲಕ ಆರು ನಿಮಿಷಗಳಲ್ಲಿ ಶಂಭು ಹೆಗಡೆಯವರನ್ನು ಚಿತ್ರಿಸಿದರು.

RELATED ARTICLES  ಪ್ರಕೃತಿ ವಿಕೋಪದಿಂದ ಬೆಳೆ ಹಾನಿ ಅನುಭವಿಸಿದ ಬೆಳೆಗಾರರಿಗೆ ಶಿರಸಿಯಲ್ಲಿ ಶೂನ್ಯ ಬಡ್ಡಿದರದಲ್ಲಿ ರೂ.18-20 ಲಕ್ಷಗಳ ಸಹಾಯ ಮಾಡಲು ಮುಂದಾದ ಸಂಸ್ಥೆ.

ಕೊನೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಮಾರಿಯಮ್ಮನ್ ತೆರಕುತ್ತು ನಾಟಕ ಸಭಾ, ಚೆನ್ನೈನ ಕಲೈಮಾಮಣಿ ಶ್ರೀ ವಿ. ದಕ್ಷಿಣಾ ಮೂರ್ತಿ, ಇವರ ತಂಡದಿಂದ ‘ಕೀಚಕ ವಧೆ’ ತೆರಕುತ್ತು ಪ್ರಸ್ತುತಪಡಿಸುವುದರ ಮೂಲಕ ಮುಕ್ತಾಯಗೊಳಿಸಿದರು.