ಕಾರವಾರ: ಗೋವಾ ಗಡಿ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಸ್ಪಿರಿಟ್ ವಶ ಪಡಿಸಿಕೊಳ್ಳಲಾಗಿದೆ.
ಅಬಕಾರಿ ಇಲಾಖೆ ಸಿಬ್ಬಂದಿಗಳು ಸುಮಾರು ೭.೫ ಲಕ್ಷ ಮೌಲ್ಯದ ೩೬೦೦ ಲೀಟರ್ ಸ್ಪಿರಿಟ್ ವಶ ಪಡಿಸಿಕೊಂಡಿದ್ದಾರೆ.
ಮೀನಿನ ಲಾರಿಯಲ್ಲಿ ಗೋವಾದಿಂದ ಸುಮಾರು ೧೦೪ ಕ್ಯಾನ್ ಗಳಲ್ಲಿ ಸ್ಪಿರಿಟ್ ಸಾಗಿಸುತ್ತಿದ್ದು ಅಬಕಾರಿ ಇಲಾಖೆ ಸಿಬ್ಬಂದಿಗಳು ತನಿಖೆ ನಡೆಸಿದ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಕೇರಳ ಮೂಲದ ಜಿತೀನ್ ಜೋಶ್ ಎನ್ನುವ ಆರೋಪಿ ಹಾಗೂ ಲಾರಿಯನ್ನ ಅಬಕಾರಿ ಇಲಾಖೆ ಸಿಬ್ಬಂದಿಗಳು ವಶ ಪಡಿಸಿಕೊಂಡಿದ್ದಾರೆ.