ಹೊನ್ನಾವರ: ಹನುಮಂತ ಕರಿಯಾ ಹರಿಕಂತ ಈರಪ್ಪನಹಿತ್ಲ ಹಳದಿಪುರ ಹೊನ್ನಾವರ ಇವರ ಮನೆ ಆಕಸ್ಮಿಕ ಬೆಂಕಿಗೆ ಆಹುತಿ ಆದ ಘಟನೆ ವರದಿಯಾಗಿದೆ.
ಅಕಸ್ಮಾತ್ ಬೆಂಕಿ ಮನೆಗೆ ತಗುಲಿ ಅಪಾರ ಹಾನಿ ಸಂಭವಿಸಿತ್ತು.
ವಿಷಯ ತಿಳಿದ ತಕ್ಷಣ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಸಾತ್ವನ ಹೇಳಿ ತಾತ್ಕಾಲಿಕ ಪರಿಹಾರ ನೀಡಿದರು.
ಕೂಡಲೇ ಮತ್ಸಾಶ್ರಯ ಯೊಜನೆಯಡಿ ಮನೆ ಮಂಜೂರಿ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ವಿನಾಯಕ ಶೇಟ,ಗಣಪತಿ ಹರಿಕಾಂತ, ನಾಗವೇಣಿ ಗೌಡ, ಮಂಜುಳಾ ನಾಯ್ಕ, ಪಂಚಾಯತ ಸದಸ್ಯರರು ಮುಖಂಡರಾದ ದಾಮೋದರ ನಾಯ್ಕ, ರಾಮ ಹರಿಕಾಂತ ಮುಂತಾದವರು ಉಪಸ್ಥಿತರಿದ್ದರು.