ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾ ಸ್ವಾಮಿಗಳವರ ಅನುಗ್ರಹದಿಂದ ಉಪ್ಪಿನಂಗಡಿ ಮಂಡಲ ವ್ಯಾಪ್ತಿಯ ಎಲ್ಲಾ ವಲಯಗಳ ಹವ್ಯಕ ವಿದ್ಯಾರ್ಥಿಗಳಿಗೆ ಆಯೋಜಿಸಲ್ಪಟ್ಟ “ಕ್ರೀಡೋತ್ಸವ – 2018 ” ಶ್ರೀ ರಾಮಚಂದ್ರಾಪುರ ಮಠ, ಪೆರಾಜೆ ಇಲ್ಲಿ ಯಶಸ್ವಿಯಾಗಿ ನೆರವೇರಿತು.
ಶ್ರೀ ರಾಮಚಂದ್ರಾಪುರ ಮಠ, ಪೆರಾಜೆ ಇಲ್ಲಿನ ಸೇವಾ ಸಮಿತಿ ಅಧ್ಯಕ್ಷರು ಆದ ಹಾರಕೆರೆ ನಾರಾಯಣ ಭಟ್ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.
ಉಪ್ಪಿನಂಗಡಿ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನರು ಆದ ಶ್ರೀ ವಿ. ಜಿ ಭಟ್ ಇವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
ಕಾರ್ಯದರ್ಶಿಯಾದ ಶ್ರೀಧರ ಭಟ್ ಕೂವೆತಂಡ ಇವರು ಶುಭ ಹಾರೈಸಿದರು. ಮಂಡಲಾಧ್ಯಕ್ಷ ಶ್ರೀ ಅಶೋಕ ಕೆದ್ಲಾ ಇವರು ಸಂಘಟನೆಯ ಮಹತ್ವವನ್ನು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿ ಹೇಳಿದರು.
ಕ್ರೀಡೋತ್ಸವದಲ್ಲಿ ಸುಮಾರು 70 ಜನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗು ಹೆತ್ತವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲರಿಗೂ ಮುಳ್ಳೇರಿಯಾ ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಶ್ರೀ ಕೇಶವ ಪ್ರಸಾದ ಎಡಕ್ಕಾನ ಇವರು ಬಹುಮಾನ ವಿತರಿಸಿದರು.
ಉಪ್ಪಿನಂಗಡಿ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಧಾನರು ಶ್ರೀ ವಿ. ಜಿ ಭಟ್ ಇವರು ವಂದನಾರ್ಪಣೆಗೈದರು.