ಶ್ರೀ ಮಹಾಸತಿ ಗೆಳೆಯರ ಬಳಗ ಹಳದಿಪುರ ಇವರ ಆಶ್ರಯದಲ್ಲಿ 5 ನೇ ವರ್ಷದ ಆಹ್ವಾನಿತ ವಾಲಿಬಾಲ್ ಪಂದ್ಯಾವಳಿ, ಡ್ಯಾನ್ಸ ಧಮಾಕಾ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ದಿನಾಂಕ 27/ 01 /2018 ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ರಾಜ್ಯ ಕಬಡ್ಡಿ ಅಸೋಸಿಯೇಶನ್ ನ ಉಪಾಧ್ಯಕ್ಷರಾಗಿರುವ ಸೂರಜ ನಾಯ್ಕ ಸೋನಿಯವರು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರೂ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶ ನೀಡಿ ಪ್ರತಿ ಊರಿನಲ್ಲಿ ಇಂತಹ ಕ್ರೀಡಾ, ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಬೇಕು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಕ್ರೀಡೆಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗ. ಕ್ರೀಡೆ ದೈಹಿಕ ಸದೃಢತೆಯೊಂದಿಗೆ ಮನರಂಜನೆಯನ್ನು ಕೂಡಾ ಒದಗಿಸುತ್ತದೆ. ಹಾಗೂ ಪರಸ್ಪರರಲ್ಲಿ ಸಾಮರಸ್ಯತೆ ಬೆಳೆಯುತ್ತದೆ. ಪ್ರತಿಯೊಬ್ಬರೂ ಶಿಕ್ಷಣದಷ್ಟೇ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೂ ಹೆಚ್ಚು ಆದ್ಯತೆಯನ್ನು ನೀಡಬೇಕು. ಇಂತಹ ಕಾರ್ಯಕ್ರಮಗಳಿಗೆ ತಮ್ಮ ಸಹಾಯ ಸಹಕಾರ ಸದಾ ಇರಲಿದೆ. ಕ್ರೀಡಾ ಪಟುಗಳು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಭಾಗವಹಿಸಿ ಎಂದು ಸಲಹೆ ನೀಡಿದರು.

RELATED ARTICLES  ನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ಬೃಹತ್ ಪ್ರತಿಭಟನೆ

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿ.ಪಂ. ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ, ದಿನಕರ ಶೆಟ್ಟಿ, ಉದ್ಯಮಿ ವೆಂಕಟ್ರಮಣ ಹೆಗಡೆ ಮುಂತಾದವರು ಮಾತನಾಡಿ ಸತತ 5 ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಎಲ್ಲಾ ಸ್ಪರ್ಧಾಳುಗಳು ಸ್ಪರ್ಧಾತ್ಮಕ ಮನೋಭಾವದೊಂದಿಗೆ ಭಾಗವಹಿಸುವಂತೆ ಕರೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ.ಪಂ.ಸದಸ್ಯರಾದ ಶಿವಾನಂದ ಹೆಗಡೆ ಕಡತೋಕ ಅವರು ಮಾತನಾಡಿ ಮುಂದಿನ ದಿನಗಳಲ್ಲೂ ಇಂತಹ ಸಂಘಟನೆ ನಿರಂತರವಾಗಿರಲಿ ಹಾಗೂ ಇಂತಹ ಕಾರ್ಯಕ್ರಮಗಳು ಕೂಡಾ ನಿರಂತರವಾಗಿ ಜರುಗುತ್ತಿರಲಿ ಎಂದು ಸಂಘಟಕರನ್ನು ಶ್ಲಾಘಿಸಿದರು.

RELATED ARTICLES  ರಾಷ್ಟ್ರೀಯ ಯೂತ್ ಪಾರ್ಲಿಮೆಂಟಿಗೆ ಶಿರಸಿಯ ಪ್ರಣವ್ ಭಾರದ್ವಾಜ್ ಆಯ್ಕೆ

ನಂತರ ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಮೊಳಗಿತು. ಎಲ್ಲರೂ ರಾಷ್ಟ್ರಗೀತೆಗೆ ಗೌರವ ಸೂಚಿಸಿದರು. ಬಳಿಕ ಸೂರಜ ನಾಯ್ಕ ಸೋನಿಯವರು ಕ್ರೀಡಾಂಗಣವನ್ನು ಉದ್ಘಾಟಿಸಿ ಪಂದ್ಯಾವಳಿಗೆ ಶುಭ ಹಾರೈಸಿದರು. ಅದೇ ಕ್ರೀಡಾಂಗಣದಲ್ಲಿ ಸಾಧಕರಾದ ಶಿವಾನಂದ ನಾಯ್ಕ, ಸೀತಾರಾಮ ಗಣಪತಿ ನಾಯ್ಕ, ಗಣಪತಿ ರಮೇಶ ನಾಯ್ಕ, ಪ್ರಭಾಕರ ಹೂಜಿಮುರಿ ಅವರುಗಳನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಿವಾನಂದ ಕೆ. ನಾಯ್ಕ, ರತ್ನಾಕರ ವಿ. ನಾಯ್ಕ, ಶಿವಾನಂದ ಎಮ್. ನಾಯ್ಕ, ರಾಮರಾಯ ಎಲ್. ನಾಯ್ಕ, ಅಜಿತ ಎಮ್. ನಾಯ್ಕ, ಉಜ್ವಲ್ ಎನ್. ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ದಿನೇಶ ನಾಯ್ಕ ಸ್ವಾಗತಿಸಿದರು. ಶೀಲಾ ಮೇಸ್ತ ನಿರೂಪಿಸಿದರು. ಪ್ರಮೋದ ಸಂಕೊಳ್ಳಿ ವಂದಿಸಿದರು.