ಹೊಸಾಕುಳಿ ಜಾತ್ರೆಯ ಪ್ರಯುಕ್ತ ಶ್ರೀ ಉಮಾಮಹೇಶ್ವರ ದೇವಸ್ಥಾನದ ಹತ್ತಿರ ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರಪ್ರಶಸ್ತಿ ಪುರಸ್ಕøತರಾದ ವೇದಮೂರ್ತಿ ಶಿವರಾಮ ಶಂಭು ಭಟ್ಟ, ಯಕ್ಷಗಾನ ಕಲೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಕೃಷ್ಣ ಯಾಜಿ ಬಳ್ಕೂರು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಯಕ್ಷಗಾನವು ಕರಾವಳಿಯ ಗಂಡುಮೆಟ್ಟಿನ ವಿಶೇಷ ಕಲೆಯಾಗಿದೆ. ಹೊನ್ನಾವರದ ದಿ| ಪದ್ಮಶ್ರೀ ಪುರಸ್ಕøತ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀ ಕೃಷ್ಣ ಯಾಜಿ ಬಳ್ಕೂರು, ದಿ| ಕೆರೆಮನೆ ಶಂಭು ಹೆಗಡೆ ಅವರುಗಳಂತಹ ಯಕ್ಷರತ್ನಗಳ ಜನ್ಮಭೂಮಿಯಾಗಿದೆ. ಯಕ್ಷಗಾನವು ಒಂದು ನವರಸಗಳ ಕಲೆಯಾಗಿದೆ. ನಮ್ಮ ಕನ್ನಡ ಭಾಷೆ ಈ ಕಲೆಯಲ್ಲಿ ಸುಲಲಿತವಾಗಿ ಬಳಕೆಯಾಗುತ್ತಿದ್ದು ಕನ್ನಡ ಭಾಷೆ ಈ ಕಲೆಯಲ್ಲಿ ಇನ್ನೂ ಜೀವಂತಿಕೆ ಪಡೆದುಕೊಂಡಿದೆ. ಶ್ರೀ ಕೃಷ್ಣ ಯಾಜಿಯವರಂತಹ ಕಲಾವಿದರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿರುವುದು ಅತ್ಯಂತ ಖುಷಿ ತಂದಿದೆ. ನಮ್ಮ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಕೈ ಜೋಡಿಸೋಣ ಎಂದು ಕರೆ ನೀಡಿದರು.

RELATED ARTICLES  ಮತ್ತೆ ಪ್ರಾಂರಂಭವಾದ ಜಿ.ಟಿ ಮಳೆ : ಅಡಿಕೆ ಬೆಳೆಗೆ ಕೊಳೆಯ ರೋಗದ ಚಿಂತೆ.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ದಿನಕರ ಶೆಟ್ಟಿಯವರು ಮಾತನಾಡಿ ಈ ನೆಲ ಪುಣ್ಯ ಭೂಮಿ.ಇದು ಯಕ್ಷಗಾನ ಹಾಗೂ ಕಲೆಗಳ ಉಸಿರು. ಚಿಟ್ಟಾಣಿಯವರಂಥವರು ಕುಣಿದು ಮೆರೆದ ಸ್ಥಳ ಇದು .ಇಂತಹ ಪುಣ್ಯಭೂಮಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸವಾಗುತ್ತಿದೆ ಎಂದರು. ಸನ್ಮಾನ ಹಾಗೂ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಇವರು ಶ್ಲಾಘಿಸಿದರು.

RELATED ARTICLES  ಅಂಗಡಿ ಕಬ್ಜಾ ಪ್ರಕರಣ ಇಬ್ಬರಿಗೆ ಸಿಕ್ಕಿತು ಜಾಮೀನು!

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಾಕುಳಿ ಗ್ರಾಮ ಪಂಚಾಯತದ ಅಧ್ಯಕ್ಷರಾದ ಶ್ರೀ ಸುರೇಶ ಶೆಟ್ಟಿ ಅವರು ವಹಿಸಿದ್ದು ಅಧ್ಯಕ್ಷೀಯ ಭಾಷಣ ಮಾಡಿದರು. ಶ್ರೀ ನಾರಾಯಣ ಮಹಾಬಲೇಶ್ವರ ಭಟ್ಟ ಅವರು ಅಭಿನಂದನಾ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ, ಉದ್ಯಮಿ ವೆಂಕಟ್ರಮಣ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.