ಕುಮಟಾ: ಸರ್ಕಾರವು 2013 ರ ಪ್ರಣಾಳಿಕೆಯಲ್ಲಿ ಅಂಗವಿಕಲರಿಗೆ ಹಲವಾರು ಬೇಡಿಕೆಯನ್ನು ಪೂರೈಸುವ ಭರವಸೆಯನ್ನು ನೀಡಿತ್ತು. ಆದರೆ ಈಗ ತಮ್ಮ 5 ವರ್ಷ ಪೂರೈಸಿದರೂ ಸಹ ಅಂಗವಿಕಲರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ. ಮತ್ತು ಕಳೆದ 5 ವರ್ಷದಿಂದ ಕಾಂಗ್ರೆಸ್ ಸರ್ಕಾರ ಹಲವಾರು ಭಾಗ್ಯ ಸಮಾಜಕ್ಕೆ ನೀಡಿದ್ದು ಆದರೆ ಮಾನ್ಯ ಮುಖ್ಯಮಂತ್ರಿಗಳು ಅಂಗವಿಕಲರ ಭಾಗ್ಯ ಏಕೆ ಅನುಷ್ಠಾನ ಮಾಡಿಲ್ಲ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಅದೆ ಪ್ರಕಾರವಾಗಿ ಅಂಗವಿಕಲಿರಿಗೆ ಅನೇಕ ಬೇಡಿಕೆಯನ್ನು ಪೂರೈಸಿಕೊಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದವರು ಕುಮಟಾದ ತಹಶೀಲ್ದಾರಿಗೆ ಮನವಿ ಪತ್ರವನ್ನು ನೀಡಿದರು.

RELATED ARTICLES  ಶ್ರೀ ಶ್ರೀ ಮಹೇಶ್ವರ ತಾತನವರಿಗೆ ಗೋಕರ್ಣ ಗೌರವ

ನಂತರ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ. ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಪ್ರವೀಣ ಶೆಟ್ಟಿ ಮಾತನಾಡಿ 2013 ರಲ್ಲಿ ಅನುಷ್ಠಾನಗೊಂಡ ನಿಯಮಗಳನ್ನು ಘೋಷಣೆ ಮಾಡಬೇಕು ಮತ್ತು ಫೆಬ್ರವರಿಯಲ್ಲಿ ಬಜೆಟ್ ಮಂಡನೆಯ ಸಂದರ್ಭದಲ್ಲಿ ಅಂಗವಿಕಲಿರಿಗೆ ಪ್ರತ್ಯೇಕ ಹಣವನ್ನು ಬಳಸಬೇಕು ಮತ್ತು ಪ್ರತಿ ತಾಲೂಕಿನಲ್ಲಿ ಅಂಗವಿಕಲರ ಬವನ ಆಗಬೇಕು ಅದೆ ಪ್ರಕಾರವಾಗಿ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರವು ಸಮಾನ ಜನರಿಗೆ ಯಾವ ರೀತಿಯ ಸೌಲಭ್ಯವನ್ನು ಕೊಡುತ್ತಿದೆಯೋ ಅದೆ ಪ್ರಕಾರವಾಗಿ ಅಂಗವಿಕಲರಿಗೂ ಅಂತಹ ಸೌಲಭ್ಯವನ್ನ ನೀಡಬೇಕು ಎಂದರು.

RELATED ARTICLES  ಎಲ್ಲರಿಗೂ ಮಾದರಿಯಾದ ಯುವಸೇನಾ ಗೆಳೆಯರ ಬಳಗ ಬಗ್ಗೋಣ ಸಂಘಟನೆ.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಪ್ರವೀಣಕುಮಾರ ಶೆಟ್ಟಿ,ಉಪಾಧ್ಯಕ್ಷರಾದ ಪ್ರಕಾಶ ವಿ ನಾಯ್ಕ,ರಮೇಶ ಪಟಗಾರ,ಪುಟ್ಟು ಗೌಡ,ಸದಾಶಿವ ಗಾವಡಿ, ಗಜಾನನ ಶೆಟ್ಟಿ ಇನ್ನಿತರರು ಹಾಜರಿದ್ದರು.