ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ನಡೆಸಲಾಗುವ ರಾಜ್ಯ ಮಟ್ಟದ ಕದಂಬೋತ್ಸವದ ಮೆರಗು ಹೆಚ್ಚಿಸಲು ಖ್ಯಾತ ಗಾಯಕ ಗುರುಕಿರಣ್, ಅರ್ಚನಾ ಉಡುಪ ಆಗಮಿಸಲಿದ್ದಾರೆ. ಸ್ಥಳೀಯ ಕಲಾವಿದರ ಜೊತೆ ರಾಜ್ಯ, ಹೊರ ರಾಜ್ಯದ ಕಲಾ ತಂಡಗಳು ಆಗಮಿಸಲಿವೆ.
ರವಿವಾರ ಕದಂಬೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿದ ಶಾಸಕ ಶಿವರಾಮ ಹೆಬ್ಟಾರ, ಬನವಾಸಿಯಲ್ಲಿ ಫೆ.2ರ ಮಧ್ಯಾಹ್ನ 2:30ಕ್ಕೆ ಮಧುಕೇಶ್ವರ ದೇವಾಲಯದಿಂದ ಕದಂಬ ಜ್ಯೋತಿ ಮೆರವಣಿಗೆ ನಡೆಸಲಾಗುತ್ತದೆ. ಮುಖ್ಯ ವೇದಿಕೆಯಲ್ಲಿ ಸಂಜೆ 4 ರಿಂದ
ಸುಮಾ ಹೆಗಡೆ ಮಂಚಿಕೇರಿ, ಬೆಂಗಳೂರಿನ ಪ್ರತಿಭಾ ಹೆಗಡೆ, ಅನಿತಾ ಕುಲಕರ್ಣಿ ಸಿತಾರ ವಾದನ, ಮಾಧವಿ ಗೌಡ ತಂಡದಿಂದ ಡೊಳ್ಳು ಕುಣಿತ, ನಂದಿನಿರಾವ್ ಗುಜ್ಜಾರ ತಂಡ ಇನಿ ದನಿ ಕಾರ್ಯಕ್ರಮ ಜರುಗಲಿದೆ.
ಸಂಜೆ 7ಕ್ಕೆ ಖ್ಯಾತ ಸಾಹಿತಿ ಡಾ| ಕೆ.ಎಸ್. ನಿಸಾರ ಅಹಮದ್ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಚಿವರಾದ
ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ಉಮಾಶ್ರೀ, ಪ್ರಿಯಾಂಕ ಖರ್ಗೆ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ
ಪಾಲ್ಗೊಳ್ಳಲಿದ್ದಾರೆ. ಬಳಿಕ ಅನುರಾಧಾ ಹೆಗಡೆ ತಂಡದಿಂದ ನೃತ್ಯ ರೂಪಕ, ಗುರುಕಿರಣ್, ಚೈತ್ರಾ ಸಂಗಡಿಗರಿಂದ ಸಂಗೀತ ಸಂಜೆ ನಡೆಯಲಿದೆ.
ಫೆ.3ರ ಬೆಳಗ್ಗೆ 10ಕ್ಕೆ ಪಂಪ ಕಾವ್ಯದ ಮರು ಓದಿನ ಕುರಿತು ಪ್ರೊ|ಡಾ| ಕೇಶವ ಶರ್ಮಾ ಅಧ್ಯಕ್ಷತೆಯಲ್ಲಿ ಸಾಹಿತಿಗಳಾದ
ಡಾ| ಮೋಹನ ಚಂದ್ರಗುತ್ತಿ, ಸುಬ್ರಾಯ ಮತ್ತೀಹಳ್ಳಿ ಮಾತನಾಡಲಿದ್ದಾರೆ. ಬನವಾಸಿ ಕದಂಬರ ಕುರಿತು ಡಾ| ಎ.ಕೆ.ಶಾಸ್ತ್ರಿ
ಅಧ್ಯಕ್ಷತೆಯಲ್ಲಿ ಇತಿಹಾಸ ತಜ್ಞರಾದ ಡಾ| ಶ್ರೀನಿವಾಸ ಪಾಡಿಗಾರ, ಎಸ್.ಎಸ್. ನಾಯಕ ಮಾತನಾಡಲಿದ್ದಾರೆ. ಸಂಜೆ 4ಕ್ಕೆ ಬ್ರಹ್ಮಾವರದ ಯಕ್ಷಸಿರಿ ಮಹಿಳಾ ಯಕ್ಷಕಲಾ ಪ್ರದರ್ಶನ, ಶಶಿಕಲಾ ದಾನಿ ಜಲ ತರಂಗ, ಕವಿತಾ ಹೆಬ್ಟಾರ ತಂಡದಿಂದ ಜನಪದ ನೃತ್ಯ, ಸುಮಾ ರಾಜಕುಮಾರ ತಂಡದಿಂದ ಮಾತನಾಡುವ ಗೊಂಬೆ, ಸೃಷ್ಟಿ ಬೆಂಗಳೂರು ತಂಡದಿಂದ ನೃತ್ಯ ರೂಪಕ, ಟಿಬೇಟಿಯನ್ ನೃತ್ಯ ನಡೆಯಲಿದೆ.
ಸಮಾರೋಪ ಸಮಾರಂಭ ಸಂಜೆ 7ಕ್ಕೆ ನಡೆಯಲಿದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸ್ಮಾರ್ಟ್ ಗ್ರುಪ್ ತಂಡದಿಂದ ಆಧುನಿಕ ನೃತ್ಯ, ಅರ್ಚನಾ ಉಡುಪ ತಂಡದಿಂದ ಸುಮಧುರ ಸಂಗೀತ ಜರುಗಲಿದೆ. ಗುಡ್ನಾಪುರದಲ್ಲಿ ಕದಂಬ ಜ್ಯೋತಿ ಉದ್ಘಾಟನಾ ಸಮಾರಂಭದ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ
ನಡೆಯವಲಿವೆ ಎಂದರು.
ಸಹಾಯಕ ಆಯುಕ್ತ ರಾಜು ಮೊಗವೀರ, ಸಾಕ್ಷ ಚಿತ್ರ ಸ್ಪರ್ಧೆ ನಡೆಸಲಾಗಿದೆ. ಅನಾನಸ್ ಮೇಳದ ಜೊತೆ, ಕಾರ್ಟೂನ್ ಉತ್ಸವ
ನಡೆಯಲಿದೆ. ಎರಡು ವಾಹನ ಮೂರು ಜಿಲ್ಲೆಗೆ ಕದಂಬಜ್ಯೋತಿ ಸಂಚಾರ ಮಾಡುತ್ತಿದೆ. ಕದಂಬ ಕಂಠ ಸಿರಿ ಸ್ಪರ್ಧೆ ನಡೆಯಲಿದೆ
ಎಂದೂ ತಿಳಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ್ ದೊಡ್ಡಮನಿ, ಜಿಪಂ ಸದಸ್ಯೆ ಉಷಾ ಹೆಗಡೆ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ,
ಗ್ರಾಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣವರ್, ತಹಶೀಲ್ದಾರ ಬಸಪ್ಪ ಪೂಜಾರ್ ಇತರರು ಇದ್ದರು.
ವಿಶೇಷ ಆಕರ್ಷಣೆ
ಅನಾನಸ್ ಮೇಳ, ಆಹಾರ ಸ್ಪರ್ಧೆ
ಕಾರ್ಟೂನ್ ಉತ್ಸವ
ಬನವಾಸಿ ಸಾಕ್ಷ್ಯಚಿತ್ರ ಸ್ಪರ್ಧೆ
ಕದಂಬ ಜ್ಯೋತಿ ಮೆರವಣಿಗೆ,
ಮೆರವಣಿಗೆಯಲ್ಲಿ ಆಕರ್ಷಕ ಕಲಾ ತಂಡಗಳು ಭಾಗಿ