ನವದೆಹಲಿ:ನೀವು ದಂಪತಿಗಳಾಗಿದ್ದರೆ ಈ ಜೈವಿಕ ಉದ್ಯಾನವನಕ್ಕೆ (ಬೊಟಾನಿಕಲ್ ಗಾರ್ಡನ್) ಹೋಗುವುದಾದರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರಷ್ಟೇ ಸಾಲದು, ಜೊತೆಗೆ ಗಂಡ, ಹೆಂಡತಿ ಎಂಬುದಕ್ಕೆ ಮದುವೆ ಪ್ರಮಾಣಪತ್ರವೂ ಬೇಕು!
ಹೌದು ಕೊಯಮತ್ತೂರಿನ ರ್ಮುಧಾಮಾಲಿಯಾ ರಸ್ತೆ ಸಮೀಪ ಇರುವ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವ ಗಂಡ, ಹೆಂಡತಿಗೆ ಮ್ಯಾರೇಜ್ ಸರ್ಟಿಫಿಕೇಟ್ ಅತ್ಯಗತ್ಯ. ಆವರಣ ಪ್ರವೇಶಿಸುವ ಮುನ್ನ ಭದ್ರತಾ ಅಧಿಕಾರಿಗಳು ಮದುವೆ ಪ್ರಮಾಣಪತ್ರವನ್ನು ತೋರಿಸುವಂತೆ ಕೇಳುತ್ತಾರೆಂದು ನ್ಯೂಸ್ ಮಿನಿಟ್ ವರದಿ ತಿಳಿಸಿದೆ.
ಪಾರ್ಕ್ ನಲ್ಲಿ ಜೋಡಿಗಳು ಅಶ್ಲೀಲವಾಗಿ ನಡೆದುಕೊಳ್ಳುತ್ತಿರುವುದಕ್ಕೆ ಉಪಯೋಗಿಸುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಈ ಹೊಸ ನಿಯಮ ಜಾರಿಗೆ ತಂದಿದೆ ಎಂದು ಪ್ರೊ.ಎಂ.ಕಣ್ಣನ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಗಂಡ, ಹೆಂಡತಿ ಪಾರ್ಕ್ ಒಳ ಹೋಗಬೇಕಿದ್ದರೆ ಅವರು ಮದುವೆ ಪ್ರಮಾಣಪತ್ರ ತೋರಿಸುವುದು ಕಡ್ಡಾಯ.ಅಷ್ಟೇ ಅಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಈ ಪಾರ್ಕ್ ನೊಳಗೆ ಪ್ರವೇಶ ನಿಷೇಧಿಸಲಾಗಿದೆ.