ಭಟ್ಕಳ: ಜಿಲ್ಲೆಯ ಸುಪ್ರಸಿದ್ಧ ಸೊಡಿಗದ್ದೆ ಮಹಾಸತಿ ಅಮ್ಮನವರ ಜಾತ್ರೆ ಪ್ರಯುಕ್ತ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರಿಂದ ಸೋಮವಾರ ನಿನಾದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ಶ್ರೀ ಮಹಾಸತಿ ಅಮ್ಮನವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ನಿನಾದ ಭಕ್ತಿ ಸಂಗೀತ ಕಾರ್ಯಕ್ರಮವನ್ನು ರಾಜ್ಯ ಪ್ರಶಸ್ತಿ ಪುರಸ್ಕøತ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಹಾಗೂ ತಂಡದವರು ನಡೆಸಿಕೊಟ್ಟರು.

RELATED ARTICLES  ಪ್ರತಿಯೊಬ್ಬರಲ್ಲೂ ಪ್ರತಿಭೆ ಅಂತರ್ಗತವಾಗಿರುತ್ತದೆ. ನಾಗರಾಜ ನಾಯಕ ತೊರ್ಕೆ

ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗಾಯಕ ಉಮೇಶ ಮುಂಡಳ್ಳಿ, ಅಣ್ಣಪ್ಪ ದೇವಾಡಿಗ ,ಪರಮೇಶ್ವರ ಹೆಗಡೆ ಹೊನ್ನಾವರ ಹಾಗೂ ವಿನಾಯಕ ಅಂಬಿಗ ರವರು ಅನೇಕ ದಾಸರ ಪದಗಳು ಭಕ್ತಿಗೀತೆಗಳು ಹಾಡಿ ಎಲ್ಲರ ಮನೆಸೂರೆಗೊಂಡರು.

RELATED ARTICLES  ಯಲ್ಲಾಪುರದಲ್ಲಿ ನಡೆದ ಆಜಾದ್ ಟ್ರೋಫಿ.

ವಿನಾಯಕ ಭಂಡಾರಿ ಕೊಳಲು, ನವೀನ್ ಶೇಟ್ ತಬಲ, ಪರಮೇಶ್ವರ ಹೆಗಡೆ ಹೊನ್ನಾವರ ಹಾರ್ಮೋನಿಯಂ ಮತ್ತು ಕಿಂಜರದಲ್ಲಿ ಗೋಪಾಲ ನಾಯ್ಕ ಸಹಕರಿಸಿದರು.