2018 ನೇ ಸಾಲಿನ ಮೊದಲನೇ ಸುತ್ತಿನ ಪಲ್ಸ ಪೋಲಿಯೋ ಉದ್ಘಾಟನಾ ಕಾರ್ಯಕ್ರಮವನ್ನು ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪಲ್ಸ ಪೋಲಿಯೋ ಲಸಿಕೆಯನ್ನು ಹಾಕುವುದರ ಮೂಲಕ ಶಾಸಕಿ ಶಾರದಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಅದೇ ರೀತಿ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪಲ್ಸ ಪೋಲಿಯೋ ಲಸಿಕೆ ಹಾಕಿಸಿ ಪೋಲಿಯೋ ಮರುಕಳಿಸದಂತೆ ಕ್ಷೇತ್ರದ ಸಮಸ್ತ ಜನತೆಯಲ್ಲಿ ಮನವಿ ಮಾಡಲಾಯಿತು.
ಪುರಸಭೆ ಅಧ್ಯಕ್ಷರಾದ ಮಧುಸೂಧನ ಶೇಟ್, ರೋಟರಿ ಅಧ್ಯಕ್ಷರಾದ ವಸಂತ ರಾವ್,ಡಾ.ಡಿ.ಡಿ ನಾಯ್ಕ ಇದ್ದರು.