ಮಾರುತಿ ಸುಜೂಕಿ ಸಂಸ್ಥೆ ಹೊಚ್ಚ ಹೊಸ ಕಾರು ಮಾರುತಿ ಸುಜೂಕಿ ಡಿಸೈರ್ ನ್ನು ಬಿಡುಗಡೆ ಮಾಡಿದ್ದು, ಬೆಲೆಯನ್ನು 5.45 ರಿಂದ ಗರಿಷ್ಠ 9.4 ಲಕ್ಷದ ವರೆಗೆ ನಿಗದಿಪಡಿಸಿದೆ.
ತಿಂಗಳ ಪ್ರಾರಂಭದಲ್ಲೇ ಡಿಸೈರ್ ಗೆ ಬುಕಿಂಗ್ ಪ್ರಾರಂಭವಾಗಿದೆ. ಸ್ವಿಫ್ಟ್ ಡಿಸೈರ್ ಹೆಚ್ಚು ಸತತವಾಗಿ ಮಾರಾಟವಾಗುತ್ತಿರುವ ಮಾದರಿಯಾಗಿದ್ದು, ಹೊಸ ಕಾರು ಸ್ವಿಫ್ಟ್ ಬ್ಯಾಡ್ಜ್ ಇಲ್ಲದೇ ಬಿಡುಗಡೆಯಾಗಿದೆ. ವಿ ಮಾಡಲ್, ಅದಕ್ಕಿಂತ ಮೇಲ್ಮಟ್ಟದ ಮಾಡೆಲ್ ಗಳಲ್ಲಿ ಹಾಗೂ ಪೆಟ್ರೋಲ್, ಡೀಸೆಲ್ ಆವೃತ್ತಿಗಳಲ್ಲಿ ಎಜಿಎಸ್(ಆಟೋ ಗೇರ್ ಶಿಫ್ಟ್) ಟೆಕ್ನಾಲಜಿ ಲಭ್ಯವಿದೆ.
ಹೊಸ ಡಿಸೈರ್ ಕಾರು ಆಕರ್ಷಕ ಹೊರ ಹಾಗೂ ಒಳ ವಿನ್ಯಾಸಗಳನ್ನು ಹೊಂದಿದ್ದು, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸೌಲಭ್ಯಗಳನ್ನೂ ಒದಗಿಸಲಾಗಿದೆ.
RELATED ARTICLES  ಅವಲೋಕನ ಪುಸ್ತಕಕ್ಕೆ ರಾಘವೇಶ್ವರ ಶ್ರೀಗಳಿಂದ ದಿವ್ಯಾಶೀರ್ವಾದ.