ಹೊನ್ನಾವರ: ಹಿಂದೂ ಯುವಕ ಪರೇಶ್ ಮೆಸ್ತನ ಹತ್ಯೆಯ ತನಿಖೆ ವಿಳಂಬ ಅಪರಾಧಿಗಳನ್ನು ಬಂಧಿಸದೆ ಇರುವುದನ್ನು ಖಂಡಿಸಿ ಮತ್ತು ಅವರ ಕುಟುಂಬಕ್ಕೆ ನೀಡಬೇಕಾಗಿರುವ ಸರ್ಕಾರದ ಪರಿಹಾರ ಹಾಗೂ ಅನುಕಂಪ ಆಧಾರಿತ ಸರ್ಕಾರಿ ನೌಕರಿ ಇನ್ನೂ ಕೊಡದಿರುವ ಬಗ್ಗೆ ಶ್ರೀ ದುರ್ಗಾದೇವಿ ಮಹಿಳಾ ವಾಹಿನಿ ಹೊನ್ನಾವರದ ವತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.

RELATED ARTICLES  ಒಮ್ಮೆ ಹಳೆಯ ನೆನಪು ಮಾಡಿತ್ತೇ ಇಂದಿನ ಬರ್ಗಿ ಟ್ಯಾಂಕರ್ ಪಲ್ಟಿ?

ಹೊನ್ನಾವರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹೊನ್ನಾವರದ ಪೊಲೀಸ್ ಠಾಣೆಗೆ ಹೋಗಿ ತನಿಖೆ ವಿಳಂಬ ಆಗದಂತೆ ಹಾಗೂ ಆರೋಪಿಗಳನ್ನು ಶೀಘ್ರವೇ ಬಂದಿಸಿ ಎಂದು ಮನವಿ ಸಲ್ಲಿಸಿದರು.

RELATED ARTICLES  ಶಾಸಕರ‌ ಹಸ್ತಕ್ಷೇಪದಿಂದ ಕೂಲಿ ಕಾರ್ಮಿಕರ ಕಿಟ್ ವಿತರಣೆಯಲ್ಲಿ ಅವ್ಯವಹಾರ : ಜೆ.ಡಿ.ಎಸ್ ಆರೋಪ.

ಈ ಮಧ್ಯೆ ಪೋಲಿಸ್ ಅಧಿಕಾರಿಗಳು ಹಾಗೂ ಪ್ರತಿಭಟನಾಕರರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಕೂಡಾ ವರದಿಯಾಗಿದೆ.

ನಂತರ ತಹಶೀಲ್ದಾರ ಕಚೇರಿಗೆ ತೆರಳಿ ದಂಡಾಧಿಕಾರಿಗಳಾದ ವಿ.ಆರ್. ಗೌಡರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.