ಕೆರೆಮನೆ ಶಂಭು ಹೆಗಡೆ ರಾಷ್ಠ್ರೀಯ ನಾಟ್ಯೋತ್ಸವದ ಐದನೇ ದಿನ ದಿ: 31/01/2018 ಬುಧವಾರದಂದು ಬೆಳಿಗ್ಗೆ ಶಾಲಾ ಮಕ್ಕಳಿಗಾಗಿ ಕಿನ್ನರ ಮೇಳ, ತುಮರಿ, ಸಾಗರ ಇವರಿಂದ ’ಅದಲು ಬದಲು’ ನಾಟಕ ನಡೆಯಲಿದೆ.

ಸಂಜೆಯ ಕಾರ್ಯಕ್ರಮ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಎಂ. ಎನ್. ಮಂಜುನಾಥ, ಮಾನ್ಯ ಸಹಾಯಕ ಆಯುಕ್ತರು, ಭಟ್ಕಳ ಶ್ರೀ ಹೇಮಂತರಾಜು, ಮಾನ್ಯ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರವಾರ . ವರದೇಶ ಹಿರೆಗಂಗೆ, ನಿರ್ದೇಶಕರು, ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ, ಮಣಿಪಾಲ, ಶ್ರೀ ಸುರೇಂದ್ರ ವಾಗ್ಲೆ, ಸ್ಥಾನೀಯ ಸಂಪಾದಕರು, ‘ವಿಜಯವಾಣಿ’, ಮಂಗಳೂರು ಡಾ. ರವಿ ಹೆಗಡೆ ಹೂವಿನಮನೆ, ಸಿದ್ಧಾಪುರ, ನ್ಯಾಯವಾದಿಗಳು ಶ್ರೀ ಗಣಪಯ್ಯ ಗೌಡ ಮುಗಳಿ, ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ, ಕೆಳಗಿನೂರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ಶ್ರೀ ಗೋಡೆ ನಾರಾಯಣ ಹೆಗಡೆ, ಇವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

RELATED ARTICLES  ಸಂಪನ್ನವಾಯ್ತು ಹಾಲಕ್ಕಿ ಒಕ್ಕಿಗರ ಸಭಾಭವನದ ಶಿಲಾನ್ಯಾಸ ಮತ್ತು ಗುರುವಂದನಾ ಕಾರ್ಯಕ್ರಮ.

ಸಭಾ ಕಾರ್ಯಕ್ರಮದ ನಂತರ ಶ್ರೀಮತಿ ಭ್ರಮರಿ ಶಿವಪ್ರಕಾಶ್ ಇವರಿಂದ, ‘ಪಾಂಚಾಲಿ’-ಏಕವ್ಯಕ್ತಿ ಯಕ್ಷ-ಭರತನೃತ್ಯ ಸಂಗಮ ನೃತ್ಯ ಪ್ರಸ್ತುತಿ ನಡೆಯಲಿದೆ. ಸುಮನಸಾ ತಂಡ, ಉಡುಪಿ ಇವರಿಂದ ‘ರಥಯಾತ್ರೆ’ ನಾಟಕ. ಮತ್ತು ಯಕ್ಷ ಮಹಿಳಾ ಬಳಗ, ಕೋಟ ಇವರಿಂದ ‘ಸುಧನ್ವ ಮೋಕ್ಷ’ ಯಕ್ಷಗಾನ ನಡೆಯಲಿದೆ.

RELATED ARTICLES  ಕುಮಟಾ ಉದಯ ಬಜಾರ್ ನಲ್ಲಿ ಲಕ್ಕಿ ಡ್ರಾ ವಿಜೇತರಿಗೆ ಸಿಕ್ಕಿತು ಸ್ಕೂಟಿ.! ನಾಳೆಯವರೆಗೆ "ಉದಯ ಉತ್ಸವ"