▫ ▫ ▫ ▫ ▫ ▫ ▫ ▫

* ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರ ಆಶ್ರಯದಲ್ಲಿರುವ ಮುಳ್ಳೇರಿಯಾ ಹವ್ಯಕ ಮಂಡಲದ ಮಾಸಿಕ ಸಭೆಯು 30.01.2018 ಮಂಗಳವಾರ ಗುಂಪೆ ವಲಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರಾವಣಕೆರೆ ಮಠದಲ್ಲಿ ಜರಗಿತು.
* ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋವಂದನೆಯೊಂದಿಗೆ ಸಭೆ ಪ್ರಾರಂಭ ವಾಯಿತು. ಮಂಡಲ ಕಾರ್ಯದರ್ಶಿ ಬಾಲ ಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ಥಾವಿಕಮಾತುಗಳನ್ನಾಡಿ ಗತಸಭೆಯ ವರದಿ ವಾಚಿಸಿ ಮಹಾಮಂಡಲ ಸುತ್ತೋಲೆಯ ಮಾಹಿತಿಗಳನ್ನಿತ್ತರು.
ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಲೆಕ್ಕ ಪತ್ರ ಮಂಡಿಸಿದರು.
* ವಲಯದ ಪದಾಧಿಕಾರಿಗಳು ತಿಂಗಳ ವರದಿ, ಗುರುವಂದನೆ, ಬೇಳೆ ಸಮರ್ಪಣೆ, ಮಾಣಿಮಠ ದ ವಾರ್ಷಿಕೋತ್ಸವ, ಅಭಯಾಕ್ಷರ, ಅಭಯಗೋಯಾತ್ರೆ, #ರಕ್ತಾಕ್ಷರದ ವಿವರಗಳನ್ನು ಸಭೆ ನೀಡಿದರು.
ಶ್ರೀ ಚಂದ್ರಮೌಳೀಶ್ವರ ಅಷ್ಟಬಂಧ-ಬ್ರಹ್ಮಕಲೋತ್ಸಕ್ಕೆ ಮುಳ್ಳೇರಿಯ ಮಂಡಲ ವತಿಯಿಂದ ಗಂಗಾರಜತಕಲಶ ಸೇವೆಯನ್ನು ಮಾಡಲು ತೀರ್ಮಾನಿಸಲಾಯಿತು.
ಶ್ರೀ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿ 26-02-2018 ರಂದು ಜರಗಲಿರುವ ಶ್ರೀ ಗೋವರ್ಧನ ಗಿರಿಧರ ಗೋಪಾಲಕೃಷ್ಣ ದೇವಾಲಯ -ಬ್ರಹ್ಮಕಲೋತ್ಸವದ ಮಾಹಿತಿಯನ್ನು ಹೇಳ ಲಾಯಿತು.
ಮಾಣಿಮಠದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಯಲಿರುವ ವಿದ್ಯಾರ್ಥಿಗಳ ಚಿತ್ರ ಕಲಾಪ್ರದಶರ್ನನ ಮತ್ತು ಮಂಡಲದಲ್ಲಿ ಜರಗಿದ ಪರೀಕ್ಷೆ-ನಿರೀಕ್ಷೆ ತರಬೇತಿ ಶಿಬಿರ ಇವುಗಳ ಬಗ್ಗೆ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ ವಿವರಣೆಗಳನ್ನಿತ್ತರು. ಕನ್ಯಾಸಂಸ್ಕಾರ, ಶಿವಪಂಚಕ್ಪಾರಿ ಸ್ತೋತ್ರ ಪಠಣ, ಕುಂಕುಮಾಚನೆ, ಗಾಯತ್ರಿ ಜಪ, ಮುಷ್ಟಿ ಅಕ್ಕಿ, ಬಿಂದು-ಸಿಂಧು, ವೃತ್ತಿಪರ, ಸೇವಾ, ಸಹಾಯ ಈ ವಿವರಗಳನ್ನು ಆಯಾ ವಿಭಾಗದ ಪ್ರಧಾನರು ವಿಸ್ತರಿಸಿದರು.
ಮಂಡಲಾಧ್ಯಕ್ಷ ಪ್ರೊ // ಶ್ರೀಕೃಷ್ಣ ಭಟ್ಹ ಅವರು ಶ್ರೀ ಸಂಸ್ಥಾನದವರೊಂದಿಗೆ ಒಗ್ಗೂಡಿ ತಿರುಪತಿ ತಿರುಮಲ ದೇವಸ್ಥಾನ ದರ್ಶನ ಯಾತ್ರಾನುಭವ, ಅಭಯ ಯಾತ್ರೆ, #ರಕ್ತಾಕ್ಷರ ಇವುಗಳ ವಿವರಗಳನ್ನು ನೀಡಿದರು
ಮಂಡಲ ಪದಾಧಿಕಾರಿಗಳು, ವಲಯ ಪದಾಧಿಕಾರಿಗಳು, ಶ್ರಾವಣಕೆರೆ ಮಠದ ಪದಾಧಿಕಾರಿಗಳು, ಶ್ರೀ ಕಾರ್ಯಕರ್ತರು ಭಾಗವಹಿಸಿದ್ದರು, ದೇವಸ್ಥಾನದಲ್ಲಿ ಮಹಾಪೂಜೆ, ಪ್ರಸಾದ ಭೋಜನ, ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

RELATED ARTICLES  ರೆಡಿ ಆಗ್ತಿದೆ ಉಗ್ರರ ಹಿಟ್ ಲಿಸ್ಟ!!! ಕುತೂಹಲ ಮೂಡಿಸಿದೆ ಗ್ರಹ ಸಚಿವ ಅಮಿತ್ ಶಾ ನಡೆ

ವರದಿ:ಕೇಶವಪ್ರಸಾದ ಎಡಕ್ಕಾನ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ