ಹೊನ್ನಾವರ: ದಿ: 30/01/2018 ಮಂಗಳವಾರದಂದು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇ ದಿನದ ಸಭಾ ಕಾರ್ಯಕ್ರಮ ಗಣಪತಿ ಪೂಜೆಯೊಂದಿಗೆ, ದೀಪ ಬೆಳಗುವುದರ ಮೂಲಕ ಶುಭಾರಂಭಗೊಂಡಿತು.

ಶ್ರೀ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನವನ್ನು ಯಕ್ಷಗಾನ ಕಲಾವಿದರು ಹಾಗೂ ವಿದ್ವಾಂಸರಾದ ಶ್ರೀ ಅತ್ತಿಮುರುಡು ವಿಶ್ವೇಶ್ವರ ಹೆಗಡೆ, ಪ್ರಸಿದ್ಧ ಚಂಡೆವಾದಕರಾದ ಶ್ರೀ ವೆಂಕಪ್ಪ ಭಂಡಾರಿ ಮತ್ತು ಯಕ್ಷಗಾನ ಕಲಾವಿದರಾದ ಶ್ರೀ ಮೂರೂರು ವಿಷ್ಣು ಭಟ್ಟರಿಗೆ ನೀಡಿ ಗೌರವಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಅತ್ತಿಮುರುಡು ವಿಶ್ವೇಶ್ವರ ಹೆಗಡೆಯವರು ಅನಿಸಿಕೆ ವ್ಯಕ್ತಪಡಿಸಿ ಜವಾಬ್ದಾರಿಯುತ ಮಾಧ್ಯಮವಾದ ಯಕ್ಷಗಾನ ಕಲೆಯ ಮೌಲ್ಯವನ್ನು ಅಪಮೌಲ್ಯಗೊಳಿಸದೇ ನಿರಂತತೆಯನ್ನು ಕಾಯ್ದುಕೊಂಡದ್ದಕ್ಕೆ ಕಾರಣೀಕರ್ತರಾದವರು ಶ್ರೀ ಶಂಭು ಹೆಗಡೆಯವರು ಎಂದು ಹೇಳಿದರು. ಶ್ರೀ ಮೂರೂರು ವಿಷ್ಣು ಭಟ್‍ರವರು ಮಾತನಾಡಿ ಯಕ್ಷಗಾನದ ಉಳಿವು ಬೆಳವಣಿಗೆಗಾಗಿ ಮಾಡುತ್ತಿರುವ ಸೃಜನಾತ್ಮಕ ಕಾರ್ಯ ಕಲೆ ಮನೆಯಾದ ಕೆರೆಮನೆಯ ಶ್ರೀಮಯದಲ್ಲಿ ಸಾಕಾರಗೊಳ್ಳುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ವಸಂತಕುಮಾರ ಪೆರ್ಲ ಮಾತನಾಡಿ ಯಕ್ಷಗಾನ ಶಿಷ್ಠ ಕಲೆ ಮತ್ತು ಜಾನಪದ ಕಲೆಗಳ ಮಧ್ಯದಲ್ಲಿದ್ದು, ಪ್ರಸ್ತುತ ದಾಖಲೀಕರಣ, ಸಾಂಪ್ರದಾಯೀಕರಣ ಮತ್ತು ಶಿಸ್ತುಬದ್ಧತೆಯಿಂದ ಶಿಷ್ಠ ಕಲೆಯ ಕಡೆಗೆ ಬಾಗುತ್ತಿದೆ ಎಂದರು. ಶೃಂಗೇರಿಯ ಬರಹಗಾರರಾದ ಶ್ರೀ ಎಂ. ಎಂ. ಪ್ರಭಾಕರ ಮಾತನಾಡಿ ಪರಂಪರಾಗತವಾಗಿ ಕುಟುಂಬದಲ್ಲಿ ಬಂದ ಕಲೆಯನ್ನು ನಿರಂತರವಾಗಿ ಮುಂದುವರೆಸಿದ ಖ್ಯಾತಿ ಕೆರೆಮನೆ ಕುಟುಂಬದ್ದು ಎಂದು ಶ್ಲಾಘಿಸಿದರು.

RELATED ARTICLES  ಐ.ಐ.ಎಸ್.ಇ.ಆರ್. ಗೆ ಆಯ್ಕೆಯಾದ ಸರಸ್ವತಿ ಪಿಯು ವಿದ್ಯಾರ್ಥಿ

‘ಜನಮಾಧ್ಯಮ’ದ ಗೌರವ ಸಂಪಾದಕರಾದ ಶ್ರೀ ಜಯರಾಮ ಹೆಗಡೆಯವರು ಅಭಿಪ್ರಾಯ ವ್ಯಕ್ತಪಡಿಸಿ ಗೋಷ್ಠಿ, ಸಂವಾದ ಮತ್ತು ಪ್ತಾತ್ಯಕ್ಷಿಕೆಗಿಂತ ಕಲಾಪ್ರದರ್ಶನ ಜನಮಾನಸದ ಎಲ್ಲಾ ವರ್ಗಗಳಿಗೂ ತಲುಪುತ್ತದೆ. ಇಂತಹ ಕಾರ್ಯ ಸೃಜನಶೀಲತೆಯಿಂದ ಈ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವುದು ಒಳ್ಳೆಯ ಕಾರ್ಯ ಎಂದರು. ಕೆಳಗಿನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಿ ಮಹಾಬಲ ಗೌಡ ಇವರು ಶುಭ ಹಾರೈಸಿದರು.

ಧರ್ಮದರ್ಶಿಗಳಾದ ಶ್ರೀ ಹರಿಕೃಷ್ಣ ಪುನರೂರುರವರು ಮಾತನಾಡಿ ಪ್ರಸ್ತುತ ಯಕ್ಷಗಾನದ ಮೂಲ ಸತ್ವಕ್ಕೆ ಧಕ್ಕೆಯಾಗಿ ನಾಟಕದ ಶೈಲಿಗೆ ಪರಿವರ್ತನೆಯಾಗುತ್ತಿರುವದರ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ನಾಟ್ಯಾಯಣದ ನಿರ್ದೇಶಕರಾದ ಶ್ರೀ ಕೆ. ವಿ. ರಮಣ ಇವರು ಮಾತನಾಡಿ ಯಕ್ಷಗಾನ ಇದು ಸ್ವಯಂಭು ಕಲ್ಪನೆಯ ಪರಿಪೂರ್ಣವಾದ ಕಲೆ ಎಂದರು. ಕಲಾಪೆÇೀಷಕರಾದ ಶ್ರೀ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ ಎರಡು ದಶಕಗಳ ಹಿಂದೆಯೇ ಮುನ್ನೋಟವನ್ನು ಕಲ್ಪನೆ ಮಾಡಿ ಕಾಲಮಿತಿ ಯಕ್ಷಗಾನವನ್ನು ಪರಿಚಯಿಸಿದವರು ಶ್ರೀ ಶಂಭು ಹೆಗಡೆಯವರು ಎಂದು ಅಭಿಪ್ರಾಯಪಟ್ಟರು.

ಕಾರ್ಯನಿರ್ವಾಹಕ ಇಂಜಿನಿಯರ್ ಹೆಸ್ಕಾಂ ಶ್ರೀ ನರಸಿಂಹ ಪಂಡಿತ ಮಾತನಾಡಿ ‘ಆಡುವ ಮಕ್ಕಳು ಮನೆ ಕಟ್ಟಿದರು. ಆಡಿದ ನಂತರ ಮನೆ ಕೆಡಿಸಿದರು.’ ಎಂಬ ಪದ್ಯದೊಂದಿಗೆ ಮಾರ್ಮಿಕವಾಗಿ ‘ಆಟ’ದ ಬಗ್ಗೆ ವಿಮರ್ಶಿಸಿ ರಾಷ್ಟ್ರೀಯ ಮಟ್ಟದ ಆಟ ಈ ವೇದಿಕೆಯಲ್ಲಿ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು. ಶ್ರೀ ಗಣಪಯ್ಯ ಗೌಡ ಹೆಬ್ಬಾರಹಿತ್ಲ ಮಾತನಾಡಿ ದೈವಿಕ ಶಕ್ತಿಯ ಕೃಪೆಯೊಂದಿಗೆ ಪರಂಪರೆಯನ್ನು ಮರೆಯದೇ ಮತ್ತು ಸೃಜನಶೀಲತೆಯನ್ನು ಕಾಪಾಡಿಕೊಂಡು ಮುಂದುವರೆಯುತ್ತಿರುವ ಯಕ್ಷಗಾನ ಕಲೆ ಉತ್ಕರ್ಷ ಹೊಂದಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ ವಿಮರ್ಶಕರು, ಸಂಘಟಕರು ಮತ್ತು ಸಾಹಿತಿಗಳಾದ ಶ್ರೀ ಜಿ. ಎಸ್. ಭಟ್ ಅಭಿಪ್ರಾಯ ವ್ಯಕ್ತಪಡಿಸಿ ಕರ್ನಾಟಕದ ಎಲ್ಲಾ ಕಲಾ ಅಕಾಡೆಮಿಗಳು ಪುನರ್ ರಚಿಸಿದರು. ಯಕ್ಷಗಾನ ಅಕಾಡೆಮಿ ಪುನರ್ ರಚಿತವಾಗದಿರುವುದನ್ನು ವ್ಯಕ್ತಪಡಿಸಿ ಯಕ್ಷಗಾನ ಕಲಾಕಾರರಿಗೆ ಉತ್ತೇಜಿಸಲು ಯಕ್ಷಗಾನದಲ್ಲಿ ಗೌರವಯುತ ಪ್ರಶಸ್ತಿ ಕೊಡುವಂತಾಗಬೇಕು ಎಂದರು.

RELATED ARTICLES  ಅಕ್ರಮ ಜಾನುವಾರು ಸಾಗಾಟ : ಇಬ್ಬರ ಬಂಧನ.

ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ ರಾಷ್ಟ್ರೀಯ ನಾಟ್ಯೋತ್ಸವದ ಈ ಕಾರ್ಯಕ್ರಮಕ್ಕೆ 1 ಕೋಟಿ ಅನುದಾನ ನೀಡುವಂತಾಗಲು ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದರು. ಇಂತಹ ಮಹತ್ವಪೂರ್ಣ ಉತ್ಸವಗಳು ಜನೋತ್ಸವವಾಗಿ ಪರಿವರ್ತನೆಯಾಗಬೇಕು ಎಂದರು. ಯಕ್ಷಗಾನಕ್ಕೆ ಪ್ರತ್ಯೇಕ ಪತ್ರಿಕೆಗಳು ಬರುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯಕ್ಷಗಾನ ಕಲಾವಿದರಿಗೆ ಗೌರವ ಡಾಕ್ಟರೇಟ್ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತಾಗಲು ವಿಶ್ವವಿದ್ಯಾಲಯಗಳು ಮುಂದಾಗಬೇಕು ಎಂದರು.
ಶ್ರೀ ಶಿವಾನಂದ ಹೆಗಡೆಯವರು ಸರ್ವರನ್ನೂ ವಂದಿಸಿದರು. ಶ್ರೀ ಕೆ.ಎಸ್. ಹೆಗಡೆ ಮತ್ತು ಶ್ರೀ ಎಲ್. ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.