ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಸೇರಿ ದೇಶ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದು ಬಿಜೆಪಿ ಮುಖಂಡ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ಕುಮಟಾದ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಹೇಳಿದರು. ಪಕ್ಷ ಸಂಘಟನೆಯ ಸದುದ್ದೇಶದಿಂದ ಹೊನ್ನಾವರ ತಾಲೂಕಿನ ವಂದೂರಿನ ಜಾಗೃತ ಯುವ ಪಡೆಯೊಂದಿಗೆ ಸೇರಿ ಅವರು ಕಾರ್ಯ ಚಟುವಟಿಕೆ ನಡೆಸಿ ಸಂತಸವನ್ನು ಹಂಚಿಕೊಂಡರು.

ಸದಾ ಕ್ರಿಯಾಶೀಲ ಹಾಗೂ ಬಿಜೆಪಿಯಲ್ಲಿ ಪಕ್ಷಸಂಘಟನೆ ಹಾಗೂ ಇನ್ನಿತರ ಕಾರ್ಯಗಳಲ್ಲಿ ಕಾಣೀಸಿಕೊಂಡಿರು ನಾಗರಾಜ ನಾಯಕ ಯುವ ಜನತೆಯ ಜೊತೆ ಉತ್ಸಾಹದಿಂದ ಪಾಲ್ಗೊಂಡು ಸಂಘಟನೆಯಲ್ಲಿ ಹೊಸ ಹುರುಪು ತುಂಬಿದ್ದಾರೆ. ಯುವ ಜನತೆ ಕೂಡಾ ನಾಗರಾಜ ನಾಯಕರ ಜೊತೆಗೆ ಸೇರುವ ಭರವಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

RELATED ARTICLES  ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಮುಳುಗಿದ ಬೋಟ್ : ಭಟ್ಕಳ ಸಮೀಪ ಘಟನೆ

ಈ ಸಂದರ್ಭದಲ್ಲಿ ನಾಗರಾಜ ನಾಯಕ ತೊರ್ಕೆ ಮುಖವಾಡದ ಆಡಳಿಕ್ಕೆ ಎಷ್ಟೇ ಭಾಗ್ಯಗಳ ಬಣ್ಣ ಬಳಿದರೂ, ಜನರ ಕಣ್ಣಿಗೆ ಮಣ್ಣೆರುಚುವುದು ಸುಲಭವಲ್ಲ. ಕಾಂಗ್ರೆಸ್ ನ ದುರಾಡಳಿತದಿಂದ ಬೇಸತ್ತಿರುವ ಪ್ರಜ್ನಾವಂತ ಮತದಾರ ಬಯಸುತ್ತಿರುವುದು ಬದಲಾವಣೆಯನ್ನೇ ಹೊರತು..ಇಲೆಕ್ಷನ್ ಹೊತ್ತಿಗೆ ಬಣ್ಣ ಬದಲಾಯಿಸುವ ಗೋಸುಂಬೆಗಳನ್ನಲ್ಲ ಎಂದ ಅವರು ಯುವಕರ ಜೊತೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿದರು.

ನಿರಂತರ ಪಕ್ಷ ಸಂಘಟನೆಯ ಕಾರ್ಯದಲ್ಲಿ ಜೊತೆಗಾದ ಹೊನ್ನಾವರ ತಾಲೂಕಿನ ವಂದೂರಿನ ಜಾಗೃತ ಯುವ ಪಡೆಯೊಂದಿಗೆ ಸಂತಸದಿಂದ ಸಮಯ ಕಳೆದ ಅವರು. ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಹಾಗೂ ಕೇಂದ್ರ ಸರಕಾರದ ಸಾಧನೆಗಳನ್ನು ತಿಳಿಸುವ ಕಾರ್ಯ ಮಾಡಿದರು.

RELATED ARTICLES  ಕುಮಟಾದಲ್ಲಿ ಜುಲೈ 30ರ ವರೆಗೆ ಹಾಫ್ ಡೇ ಲಾಕ್‌ಡೌನ್...!

ಇಂದಿನ ಜಗತ್ತು ಯುವಕರ ಜಗತ್ತಾಗಿದೆ. ಯುವಕರು ತಮ್ಮಲ್ಲಿನ ಸಂಕುಚಿತ ಭಾವನೆಗಳನ್ನು ಬದಿಗಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮ ಸೇವೆಯನ್ನು ಸಲ್ಲಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ಅದಕ್ಕಾಗಿ ಅವರು ಸ್ವಾಮಿ ವಿವೇಕಾನಂದರ ಜೀವನ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿಯನ್ನೇ ಮರೆಯುತ್ತಿದ್ದೇವೆ. ಯುವಜನಾಂಗ ದೇಶದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಿಕೊಳ್ಳಲು ಪಣ ತೊಡಬೇಕಿದೆ. ರಾಷ್ಟ್ರ ಹಾಗೂ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕಿದೆ ಎಂದರು.

ಯುವ ಜನತೆ ನಾಗರಾಜ ನಾಯಕರ ಜೊತೆ ಒಂದಾಗಿದ್ದು ಈ ಎಲ್ಲಾ ಯುವಕರ ಬೆಂಬಲ ಹೊಸ ಚೈತನ್ಯ ನೀಡಿದೆ ಹಾಗೂ ಹೊಸ ಬರವಸೆ ಮೂಡಿಸಿದೆ.