ಬೆಂಗಳೂರು: ಕೇರಳ ಮೂಲದ ಮಹಿಳೆಯೊಬ್ಬರನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಗೆ ಮಾರಾಟ ಮಾಡಲು ಯತ್ನ ನಡೆಸಿದ್ದ ಹಿನ್ನಲೆಯಲ್ಲಿ ಬೆಂಗಳೂರಿನ ಮೂವರು ಸೇರಿದಂತೆ ಒಟ್ಟು 9 ಮಂದಿ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಮೂವರು ನಿವಾಸಿಗಳಾದ ದಾನೀಶ್ ನಜೀಬ್, ಇಲಿಯಾಸ್ ಮೊಹಮ್ಮದ್
ಮತ್ತು ಗಾಜಿಲಾ ಸೇರಿದಂತೆ ಮೊಹಮ್ಮದ್ ರಿಯಾಸ್ ರಶೀದ್, ನಹಾಸ್ ಅಬ್ದುಲ್ ಖಾದರ್, ಮೊಹಮ್ಮದ್ ನಾಜೀಶ್ ಟಿ.ಕೆ, ಅಬ್ದುಲ್ ಮುಹಾಸಿನ್ ಕೆ. ಫವಾಸ್ ಜಮಾಲ್, ಮೊಯಿನ್ ಪಟೇಲ್ ವಿರುದ್ಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  “ಜನ ಮಾನಸದಲ್ಲಿ ಸೇವೆಯ ದೀಪ ಬೆಳೆಗಿಸಿದ ಪ್ರದೀಪ ನಾಯಕ”.

ಕೇರಳ ಮೂಲದ ಮಹಿಳೆ ಪತಿ ಮೊಹಮ್ಮದ್ ರಿಯಾಸ್ ರಶೀದ್ ಎಂಬುವವರನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದರು.

ಮಹಿಳೆ ಆರೋಪ ಮಾಡಿರುವುಂತೆ ಪತಿ ರಶೀದ್ ಮದುವೆಯಾದ ಬಳಿಕ ಸೌದಿ ಅರೇಬಿಯಾಗೆ ಹೋಗುವಂತೆ ಹಿಂಸೆ ನೀಡುತ್ತಿದ್ದರು. ಸೌದಿಗೆ ತೆರಳಿದ ಬಳಿಕ ಅಲ್ಲಿ ವೇಶ್ಯಾವಾಟಿಕೆ ಜಾಲಕ್ಕೆ ನನ್ನನ್ನು ಮಾರಾಟ ಮಾಡಲು ಯೋಜನೆ ರೂಪಿಸಿದ್ದರು. ಬಳಿಕ ತಂದೆಯ ಸಹಾಯದೊಂದಿಗೆ ನಾನು ಆತನಿಂದ ತಪ್ಪಿಸಿಕೊಂಡು ಬಂದಿದ್ದೆ. ಇದಾದ ಬಳಿಕ ವಿಚ್ಛೇದನ ನೀಡುವಂತೆ ಕೇರಳ ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಿದಂತೆಯೇ ಕೇಂದ್ರ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎನ್ಐಎ ಅಧಿಕಾರಿಗಳು, ಮುಹಮ್ಮದ್ ರಿಯಾಸ್ ರಶೀದ್ ಮಹಿಳೆ ಮೇಲೆ ದೌರ್ಜನ್ಯವೆಸಗಿದ್ದು, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ, ಆಕೆಯ ಆಕ್ಷೇಪಾರ್ಹ ಫೋಟೋಗಳು ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು ಜಾಕೀರ್ ನಾಯ್ಕ್ ಅವರ ಶಿಷ್ಯೆಯಾಗಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಹಿಂಸೆ ನೀಡಿದ್ದಾನೆ. ನಕಲಿ ದಾಖಲೆಗಳ ಮೂಲಕ ಆಕೆಯನ್ನು ವಿವಾಹಾದ ಬಳಿಕ ಇಸಿಸ್’ಗೆ ಸೇರ್ಪಡೆಗೊಳಿಸಲು ಯತ್ನ ನಡೆಸಿದ್ದಾನೆಂದು ಹೇಳಿದ್ದಾರೆ.

RELATED ARTICLES  5, 8, 9 ಮತ್ತು 11ನೇ ತರಗತಿಯ ಬೋರ್ಡ ಎಕ್ಸಾಂ ರದ್ದು.