ಯಲ್ಲಾಪುರ ; ರಾಷ್ಟ್ರೀಯ ಹೆದ್ದಾರಿ 63ರ ಪಟ್ಟಣ ವ್ಯಾಪ್ತಿಯ ಬಿಸ್ಗೋಡ ರಸ್ತೆ ಸಮೀಪ ಹಾದು ಹೋಗಿರುವ ತಳ್ಳಿರು ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿ ಸುಮಾರು 50 ವರ್ಷದ ವಯಸ್ಸಿನವನಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಜ.20 ರಿಂದ ಜ. 30 ರ ಮಧ್ಯದಲ್ಲಿ ಈತ ಮೀನು ಅಥವಾ ಕಲ್ಲೆಡಿ ಹಿಡಿಯಲು ತಳ್ಳಿರುಹಳ್ಳಕ್ಕೆ ಹೋಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

RELATED ARTICLES  ಉತ್ತರಕನ್ನಡದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಫಿಕ್ಸ.

ಹಳ್ಳದ ಪಕ್ಕದ ಗದ್ದೆ ಮಾಲೀಕರಾದ ಪ್ರಸಾದ ಬಸವರಾಜ ಜೋಗಾರಶೆಟ್ಟರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸ್ ಉಪ ನಿರೀಕ್ಷಕರಾದ ಲಕ್ಕಪ್ಪ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

RELATED ARTICLES  ನ 24ಕ್ಕೆ ಕುಮಟಾದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಸಮಾವೇಶ: ಐವನ್ ಡಿಸೋಜಾ.