ಕಾರವಾರ: ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ತಮ್ಮನ್ನು ಆಹ್ವಾನಿಸದೆ, ಮೇಳದ ಬಗ್ಗೆ ಸೂಕ್ತ ಪ್ರಚಾರವನ್ನೂ ನೀಡದಿರುವುದಕ್ಕೆ ಶಾಸಕ ಸತೀಶ್ ಸೈಲ್ ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಯುವಕರು ಉದ್ಯೋಗ ಅರಸುತ್ತಿದ್ದಾರೆ. ಇಂತಹ ಮೇಳದ ಬಗ್ಗೆ ಹೆಚ್ಚು ಜನರಿಗೆ ತಿಳಿಯುವಂತೆ ಪ್ರಚಾರ ಮಾಡಬೇಕಿತ್ತು. ಕಾಟಾಚಾರಕ್ಕೆ ಮೇಳ ಆಯೋಜಿಸಿದರೆ ಪ್ರಯೋಜನವಾಗಲ್ಲ. ಯಾವುದೇ ಕಾರ್ಯಕ್ರಮವಿರಲಿ ಜನರಿಗೆ ಪ್ರಯೋಜನವಾಗುವಂತಿರಬೇಕು ಎಂದು ಶಾಸಕರು ಹೇಳಿದರು.
ಕಾಲೇಜ್‍ನಲ್ಲಿ ಮೇಳ ನಡೆದರೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾದ ನನಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಕನಿಷ್ಠ ಪಕ್ಷ ಆಹ್ವಾನಿಸುವ ವ್ಯವಧಾನವನ್ನೂ ತೋರಿಲ್ಲ ಎಂದ ಅವರು, ಉದ್ಯೋಗ ಮೇಳಕ್ಕೆ ಪ್ರಚಾರ ನೀಡದೆ ಬೇಕಾಬಿಟ್ಟಿ ಮೇಳ ನಡೆಸಿ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವೆಸಗುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ಪಡೆದರು.
ನಗರಸಭೆ ಸದಸ್ಯ ರತ್ನಾಕರ ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಶಂಭು ಶೆಟ್ಟಿ, ರಘುವೀರ ನಾಯ್ಕ ಮತ್ತು ಇನ್ನಿತರರು ಶಾಸಕರ ಜೊತೆಗಿದ್ದರು.

RELATED ARTICLES  ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ಪಕ್ಷ ನಿಷ್ಟೆ ಮೆರೆದ ನಾಗರಾಜ ನಾಯಕ ತೊರ್ಕೆ