ಕುಮಟಾ : ಜಿಲ್ಲೆಯ ಸಾಂಸ್ಕೃತಿಕ ಪ್ರತಿಬಿಂಬ ಎಂದೇ ಬಿಂಬಿತವಾಗಿರುವ ಕುಮಟಾ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

ಫೆ ೧ ರಿಂದ  ಐದು ದಿನಗಳ ಕಾಲ ನಡೆಯುವ ಈ ಉತ್ಸವ ಜನತೆಗೆ ಸಾಂಸ್ಕೃತಿಕ ಹಾಗೂ ಮನರಂಜನೆಯ ರಸದೌತಣವನ್ನೇ ನೀಡಲಿದೆ.

ಈ ಬಗ್ಗೆ ಎಲ್ಲ ಪೂರ್ವ ಸಿದ್ಧತೆಗಳು ನಡೆದಿದ್ದು ಇಂದು ಕುಮಟಾ ಉತ್ಸವದ ಅಧ್ಯಕ್ಷರಾದ ರವಿಕುಮಾರ ಶೆಟ್ಟಿಯವರು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ಫೆ.೧ ರ ಸಂಜೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಆರ್.ವಿ ದೇಶಪಾಡೆಯವರು ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖಾ ಸಚಿವರಾದ ಶ್ರೀಮತಿ ಉಮಾಶ್ರೀಯವರು ಘನ ಆತಿಥ್ಯ ವಹಿಸುವರು. ಸ್ಟಾಲ್ ಹಾಗೂ ಅಮ್ಯೂಸ್ಮೆಂಟ್ ಪಾರ್ಕ ಗಳನ್ನು ಜಿ.ಪಂ ಅಧ್ಯಕ್ಷರಾದ ಜಯಶ್ರೀ ಮೊಗೇರ ಉದ್ಘಾಟಿಸುವರು. ಕುಮಟಾ ಹೊನ್ನಾವರ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

RELATED ARTICLES  ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ

ನಂತರ ಮಾತನಾಡಿದ ಕುಮಟಾ ಉತ್ಸವ ಸಮಿತಿ ಕಾರ್ಯದರ್ಶಿ ಗಣಪತಿ ಶೆಟ್ಟಿ ಕಾರ್ಯಕ್ರಮದಲ್ಲಿ ವೇದಿಕೆಯ ಕಾರ್ಯಕ್ರಮ ಮೊಟಕುಗೊಳಿಸಿ ಮನರಂಜನೆಗೆ ಪ್ರಾಧಾನ್ಯತೆ ನೀಡಲಾಗುವುದು ಹಾಗೂ ಸಮಯ ಪಾಲನೆ ಬಗೆಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ತಿಳಿಸಿದರು.

RELATED ARTICLES  ಗೋಕರ್ಣದಲ್ಲಿ ಅಧಿಕೃತ ಹಾಗೂ ಅನಧಿಕೃತ ವಸತಿಗ್ರಹಗಳ ವಿವರ ಸಲ್ಲಿಸಲು ಸೂಚಿಸಿದ ಜಿ. ಪಂ. ಮುಖ್ಯಕಾರ್ಯದರ್ಶಿ ರೋಷನ್.

ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮ‌ನಡೆಯಲಿದ್ದು ಶ್ರೀ ಅಂಜನ ನೃತ್ಯ ತಂಡದಿಂದ ನೃತ್ಯ, ಓಂ ಡಾನ್ಸ ಅವರಿಂದ ಫೈರ್ ಡಾನ್ಸ, ಹಾಗೂ ಮೂರು ಮುತ್ತು ತಂಡದಿಂದ  “ಮಿಸ್ಟರ್ ಪಾಪ ಪಾಂಡು” ಮೊದಲ ‌ದಿನ ಜನತೆಯನ್ನು ರಂಜಿಸಲಿದೆ.

ದಾರಾವಾಹಿ ಹಾಗೂ ಚಲನಚಿತ್ರ ಕಲಾವಿಧರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು.

ಈ ಸಂದರ್ಭದಲ್ಲಿ ಯೋಗೀಶ್ ಕಾಮತ್,ಸಚಿನ್ ನಾಯ್ಕ ,  ಹಾಗೂ ಇನ್ನಿತರರು ಹಾಜರಿದ್ದರು.