ಮುಂಡಗೋಡ : ನಾವು ಪ್ರತಿಯೊಬ್ಬರು ನಮ್ಮದೇ ಆದ ಕನಸು ಕಾಣುವುದು ಅವಶ್ಯವಾಗಿದೆ. ನಾವು ಯಾರೋದೊ ಕಂಡ ಕನಸನ್ನು ನನಸು ಮಾಡಲಿಕ್ಕೆ ಹೋರಾಡುವುದು ಬಿಡಬೇಕು. ಎಂದು ಯುವ ಬ್ರೀಗೇಡ್ ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಪಟ್ಟಣದ ವಿವೇಕಾನಂದ ಬಯಲು ಮಂಟಪದಲ್ಲಿ ಯುವಬ್ರಿಗೇಡ್ ಆಯೋಜಿಸಿದ್ದ “ನಮ್ಮ ಕನಸಿನ ಮುಂಡಗೋಡ ವೇದಿಕೆ”ಯ ಶುಭಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ನಾವು ನಮ್ಮ ದೇಶ, ರಾಜ್ಯ, ಜಿಲ್ಲೆ, ನಮ್ಮ ತಾಲೂಕಿನ ರಾಜಕೀಯ ಸಮಾಜೀಕ, ಆರ್ಥಿಕ ಬೆಳವಣಿಗೆ ಗೋಸ್ಕರ ಕನಸು ಕಂಡು ಅದರ ಅಭಿವೃದ್ದಿ ಸಲುವಾಗಿ ನಾವು ಕಾರ್ಯಪ್ರವರ್ತರಾಗಬೇಕು.
ದಾನ ಪಡೆಯುವುದು ಬಡವರು, ದಾನ ನೀಡುವುರು ಶ್ರೀಮಂತರು, ನಮ್ಮ ಜನಪ್ರತಿನಿಧಿಗಳಿಗೆ ನಾವು ಮತ ದಾನ ಮಾಡುತ್ತೇವೆ ಹಾಗೂ ಅವರು ಸಹಿತ ಐದು ವರ್ಷಕ್ಕೊಮ್ಮೆ ಬಂದು ದಾನ ಪಡೆಯುತ್ತಾರೆ, ಅಂದರೆ ಯಾರು ಶ್ರೀಮಂತರು ಎಂಬುದು ನೀವೇ ಹೇಳಿ ಎಂದು ಪ್ರಶ್ನೆಸಿದರು.
ದಾನ ಪಡೆದು ಶ್ರೀಮಂತರಾದ ವರು ನಮ್ಮ ಕನಸುಗಳನ್ನು ತಿರಸ್ಕರಿಸಿ ತಮ್ಮ ಕನಸಗಳನ್ನು ಸಾಕಾರಮಾಡುವ ದಿಕ್ಕಿನಲ್ಲಿ ಸಾಗುತ್ತಾರೆ ನಮ್ಮ ಕನಸುಗಳು ತಿರಸ್ಕರಿಸಿ ಹೊಸಕು ಹಾಕುತ್ತಾರೆ.
ಆದ್ದರಿಂದ ನಾವು ಜನಪ್ರತಿನಿಧಿಗಳು ಆಗಬಯಸುವರಿಂದ ಹಣ ಪಡೆಯದೇ ನಮ್ಮ ಕ್ಷೇತ್ರಕ್ಕೆ ಯಾರೂ ಒಳ್ಳೆ ಜನಪ್ರತಿನಿಧಿ ಯಾಗಲು ಯೋಗ್ಯ ಎಂಬುದನ್ನು ಯೋಚಿಸಿ ನಾವು ನಮ್ಮ ಮತ ಮಾರಾಟಾ ಮಾಡಿಕೊಳ್ಳದೆ ಮತದಾನ ಮಾಡಬೇಕು. ಅವನು ನೀಡುವ ಜುಜಬಿ ಕಾಸಿಗೆ ನಮ್ಮ ಮತ ಮಾರಾಟ ಮಾಡಿದರೆ ಅವನು ನಮ್ಮಿಂದ ಲಕ್ಷ ಲಕ್ಷ ಪಡೆಯುತ್ತಾನೆ ಸರಕಾರದಿಂದ ಬಂದಂತಹ ಯೋಜನೆಗಳ ಕೋಟಿ ಕೋಟಿ ತಿಂದು ತೇಗುತ್ತಾನೆ ಹೀಗಾದರೆ ನಮ್ಮ ನಮ್ಮ ಕ್ಷೇತ್ರದ ಅಭಿವೃದ್ದಿ ಯಾಗುವುದು ಯಾವಾಗ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮುಂಡಗೋಡ ತಾಲೂಕಿನ ಯುವ ಬ್ರಿಗೇಡ್ ತಂಡ ವಿವಿಧ ಕ್ಷೇತ್ರ ಕಾರ್ಯದಲ್ಲಿ ತೋಡಗಿದ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುವುದೊಸ್ಕರ ನಮ್ಮ “ಕನಸಿನ ಮುಂಡಗೋಡ ವೇದಿಕೆಯನ್ನು ಕಟ್ಟಿಕೊಂಡು” ಮುಂಡಗೋಡ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿಹೊಂದುವಂತೆ ಮಾಡುವುದು ಧ್ಯೇಯಗಳನ್ನು ಇಟ್ಟುಕೊಂಡು ಅಲ್ಲದೆ ಜನರಲ್ಲಿ ಮೂಡನಂಬಿಕೆ ಯನ್ನು ದೂರ ಮಾಡುವದೊಸ್ಕರ ಶಿವರಾತ್ರಿ ದಿನದೊಂದು ಸ್ಮಶಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘೀನಿಯ ಇದರಿಂದ ಶಿವನು ಪ್ರಸನ್ನಗೊಳ್ಳುತ್ತಾನೆ. ನಮ್ಮ ಕನಸಿನ ಮುಂಡಗೋಡ ವೇದಿಕೆಯಲ್ಲಿ 21 ಜನರು ಇದ್ದಾರೆ ಇವರಿಗೆ ಸಹಕಾರ ನೀಡಲು 2000 ಕ್ಕಿಂತ ಅಧಿಕವಾಗಲಿ ಹಾಗೂ ಇವರ ಕೆಲಸ ಕಾರ್ಯಗಳು ಕರ್ನಾಟಕದ ಮೂಲೆ ಮೂಲೆಗೆ ಕನಸಿನ ಮುಂಡಗೋಡ ವೇದಿಕೆ ಮಾದರಿಯಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಎ.ಎಸ್ ನಾರಾಯಣ ರಾವ ಮಾತನಾಡಿ ಮಾನವ ಜೀವಿತ ವಿದ್ದಾಗ ಜನಪಯೋಗಿ ಕೆಲಸ ಮಾಡಬೇಕು ಹಾಗೂ ಸತ್ತ ನಂತರ ದೇಹವು ಜನಪಯೋಗಿ ಕೆಲಸಕ್ಕೆ ಬರಬೇಕು ಆದ್ದರಿಂದ ದೇಹದಾನವನ್ನು ಮಾಡುವುದು ಶ್ರೇಷ್ಠದಾನ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಸಿ.ಎಸ್.ಗಾಣಗೇರ ವಹಿಸಿದ್ದರು
ಯುವ ಬ್ರಿಗೇಡ್ ನ ಕಾರ್ಯಕರ್ತರು ನಮ್ಮ ಕನಸಿನ ಮುಂಡಗೋಡ ವೇದಿಕೆಯ ಸದಸ್ಯರು ಹಾಗೂ ಚಕ್ರವರ್ತಿ ಸೂಲಿಬೆಲೆಯವರ ಅಭಿಮಾನಿಗಳು ಸಾರ್ವಜನಿಕರು ಉಪಸ್ಥಿತರಿದ್ದರು
ಕಾರ್ಯಕ್ರಮ ಮಹನಿಯರ ಪರಿಚಯವನ್ನು ಸುಮಾ ಕಡಗಿ ಮಾಡಿದರು ಹಾಗೂ
ಕಾರ್ಯಕ್ರಮದ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಶೃತಿ ಕಡಗಿ ನೇರವೇರಿಸಿದರು
#NAMMAUK

RELATED ARTICLES  ಉಡುಪಿ : ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಯ ವಿಭಾಗ ಮುಖ್ಯಸ್ಥರಿಗೆ ಉದ್ಯಾವರದಲ್ಲಿ ಸನ್ಮಾನ