ಸೋಮಾನಿ ವೃತ್ತದ ಬಳಿ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ, ಮಹಾತ್ಮಾ ಗಾಂಧಿಜೀಯವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾನವ ಸರಪಳಿಗೆ ಚಾಲನೆ ನೀಡಿದರು.

ಬಂಗೂರನಗರ ಪದವಿ ಕಾಲೇಜಿನಿಂದ ಆರಂಭಗೊಂಡ ಮಾನವ ಸರಪಳಿ, ಬರ್ಚಿ ರಸ್ತೆ, ಸೋಮಾನಿ ವೃತ್ತ, ಜೆ.ಎನ್. ರಸ್ತೆ, ಲಿಂಕ್ ರಸ್ತೆಯ ಮೂಲಕ ಹಾದು ಕಿತ್ತೂರ ಚನ್ನಮ್ಮ ವೃತ್ತದ ಬಳಿ ಸಮಾವೇಶಗೊಂಡಿತು.

ಕಿತ್ತೂರ ಚನ್ನಮ್ಮ ವೃತ್ತದ ಸುತ್ತ ಮತ್ತ ಎರಡು ಮೂರು ಸುತ್ತಿನಲ್ಲಿ ಮಾನವ ಸರಪಳಿ ನಡೆಸಿದ ವಿದ್ಯಾರ್ಥಿಗಳು ಸೌಹಾರ್ದ ಕರ್ನಾಟಕವನ್ನು ಗಟ್ಟಿಗೊಳಿಸುವ ಹಾಗೂ ಸರ್ವ ಜನಾಂಗದ ಶಾಂತಿಯ ತೋಟದ ಆಶಯವನ್ನು ಪಾಲಿಸುವ, ಶಾಂತಿ ಸೌಹಾರ್ದತೆ ಕಾಪಾಡುವ ಪ್ರತಿಜ್ಞೆ ಮಾಡಿದರು.

ಬೃಹತ್ ಮಾನವ ಸರಪಳಿಯಲ್ಲಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ, ಬಂಗೂರನಗರ ಪದವಿ ಮಹಾ ವಿದ್ಯಾಲಯ, ಬಂಗೂರನಗರ ಪ.ಪೂ ಮಹಾ ವಿದ್ಯಾಲಯ, ಉಳವಿ ಚನ್ನಬಸವೇಶ್ವರ ಪಾಲಿಟೆಕ್ನಿಕ್ ಕಾಲೇಜು, ಜನತಾ ವಿದ್ಯಾಲಯ, ಸೆಂಟ್ ಮೈಕಲ್ ಪ್ರೌಢ ಶಾಲೆ, ರೋಟರಿ ಪ್ರೌಢ ಶಾಲೆ, ಆಂಗ್ಲೋ ಉರ್ದು ಪ್ರೌಢ ಶಾಲೆ, ಹಳೆದಾಂಡೇಲಿ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ತೌಹಿದ್ ಪ್ರೌಢ ಶಾಲೆ, ಕನ್ಯಾ ವಿದ್ಯಾಲಯ ಸೇರಿದಂತೆ ಹಲವು ಶಾಲಾ ಕಾಲೇಜುಗಳ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES  ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ಯಶಸ್ವಿಯಾಯ್ತು ಕ್ರೀಡಾ ಕಲೋತ್ಸವ

ಸೌಹಾರ್ದ ಕರ್ನಾಟಕ ಸಿದ್ದತಾ ಸಮಿತಿಯ ಹರೀಶ್ ನಾಯ್ಕ, ಯು.ಎಸ್.ಪಾಟೀಲ್, ಐ.ಪಿ. ಘಟಕಾಂಬಳೆ, ಬಿ.ಎನ್. ವಾಸರೆ, ಡಿ. ಸ್ಯಾಮಸನ್, ಅಕ್ರಮ ಖಾನ್, ಎಸ್.ಎಸ್. ಪೂಜಾರ್, ನಗರಸಭೆ ಮಾಜಿ ಅಧ್ಯಕ್ಷ ತಸ್ವರ ಸೌದಾಗರ್ ನಗರಸಭಾ ಸದಸ್ಯರಾದ ಅನಿಲ್ ದಂಡಗಲ್, ಕೀರ್ತಿ ಗಾಂವಕರ, ಅಷ್ಪಾಕ ಶೇಖ, ರಿಯಾಜ ಶೇಖ, ರೋಶನ್ ಬಾವಾಜಿ, ಲಿಯಾಖತ್ ಖಾನಾಪುರಿ, ಸುಶೀಲಾ ಕಾಸರ್‍ಕೋಡ, ನಮಿತಾ ಹಳದನಕರ್ ಪತ್ರಕರ್ತ ಬಿ.ಪಿ.ಮಹೇಂದ್ರಕುಮಾರ್, ಪ್ರಮುಖರಾದ ದಾದಾಫೀರ್ ಮುಲ್ಲಾ, ಅಬ್ದುಲ್ ಮಜೀದ್ ಸನದಿ, ಹನುಮಂತ ಕುಂಬಾರ, ಬಿಜು ನಾಯ್ಕ, ಉದ್ದಂಡಿ, ಎ.ಎಂ.ಜಾಫರ್, ರಾಹುಲ್ ಬಾವಾಜಿ, ಎಸ್.ಎಸ್.ಕುರ್ಡೆಕರ, ಡುಮೆಲ್ಲೋ ಫರ್ನಾಂಡೀಸ್, ಸೇರಿದಂತೆ ನಗರದ ಹಲವು ಸಂಘ ಸಂಸ್ಥೆಗಳ ಪ್ರಮುಖರು, ಸಾಹಿತಿಗಳು, ಉಪನ್ಯಾಸಕರು, ಶಿಕ್ಷಕ, ಶಿಕ್ಷಕಿಯರು, ಜೀವ ವಿಮಾ ನಿಗಮ ಹಾಗೂ ಬ್ಯಾಂಕ್ ನೌಕರರು, ವ್ಯಾಪಾರಸ್ಥರು, ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

RELATED ARTICLES  ಶಿರಸಿಯಲ್ಲಿಂದು 11 ಮಂದಿಗೆ ಕೊರೊನಾ..!