ಕಾರವಾರ: ಸಾಧು ವಾಸ್ವಾನಿ ಟ್ರಸ್ಟ್ ನ ನುರಿತ ವೈದ್ಯರು ಕೃತಕ ಕೈ-ಕಾಲು ಜೋಡಣಾ ಫಲಾನುಭವಿಗಳ ತಪಾಸಣೆ ಹಾಗೂ ಅಳತೆಯನ್ನು ಮಾಡಿ ಅರ್ಹರಿಗೆ ಕೃತಕ ಕೈ-ಕಾಲುಗಳನ್ನು ಜೋಡಿಸಲು ಪರಿಗಣಿಸಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಊಟದ ಸೌಲಭ್ಯವನ್ನು ನೀಡಲಾಗುವುದು. ಈ ಉಚಿತ ಶಿಬಿರ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಲ್ಲದೆ ನೆರೆಯ ಜಿಲ್ಲೆ ಹಾಗೂ ರಾಜ್ಯಗಳ ಆಕಾಂಕ್ಷಿಗಳು ಇದರ ಲಾಭವನ್ನು ಪಡೆಯಬಹುದು.
ಈ ಕೈ-ಕಾಲು ಜೋಡಣಾ ಶಿಬಿರ ರೋಟರಿ ಕ್ಲಬ್‍ನ ಆಡಳಿತ ಡಿಸ್ಟ್ರಿಕ್ಟ್ 3170 ಪ್ರಾಂತದ ಸಮುದಾಯ ಸೇವೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಈ ಶಿಬಿರದಲ್ಲಿ 200 ಕ್ಕೂ ಹೆಚ್ಚು ಫಲಾನುಭವಿಗಳನ್ನು ಚಿಕಿತ್ಸೆ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಈ ಶಿಬಿರ ಎರಡು ಹಂತದಲ್ಲಿ ನಡೆಯುವುದು.
ಪ್ರತಿಯೊಬ್ಬ ಫಲಾನುಭವಿಗಳಿಗಾಗಿ ರೂ. 10,000/- ರೂ. 15,000/- ವರೆಗೆ ಖರ್ಚು ತಗಲುವ ಜೈಪುರ್ ಲಿಂಬ್ಸನ್ನು ಉಚಿತವಾಗಿ ನೀಡಲಾಗುವುದು. ಈ ಶಿಬಿರಕ್ಕೆ ಪುಣೆಯ ಸಾಧು ವಾಸ್ವಾನಿ ಸಂಸ್ಥೆ ರೂ.10 ಲಕ್ಷ ಹಣವನ್ನು ದಾನದ ರೂಪದಲ್ಲಿ ವಿನಿಯೋಗ ಮಾಡುವುದು. ಈ ಶಿಬಿರದಲ್ಲಿ ಕೇವಲ ಕೈ-ಕಾಲು ಜೋಡಣೆ ಇದ್ದವರಿಗೆ ಮಾತ್ರ ಅವಕಾಶವಿದ್ದು ಪೋಲಿಯೋ ಪೀಡಿತ ಅಥವಾ ಇನ್ನಿತರ ಅಂಗಾಂಗಗಳ ತಪಾಸಣೆಗೆ ಅವಕಾಶವಿರುವುದಿಲ್ಲ. ಈ ಶಿಬಿರಕ್ಕೆ ಯಾವುದೇ ಆದಾಯ ಮಿತಿ ಇರುವುದಿಲ್ಲ.
ಸಾರ್ವಜನಿಕರು ತಮ್ಮ ತಾಲೂಕಿನ ಅಥವಾ ಜಿಲ್ಲಾ ರೋಟರಿ ಕೇಂದ್ರ ಕಚೇರಿಗಳಿಗೆ ಇತರ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್‍ಗಳಿಗೆ ಸಂಪರ್ಕಿಸಬಹುದು.
ಕಾರವಾರ : ರಾಜೇಶ ವೆರ್ಣೇಕರ – 9343834607, ಸಾತಪ್ಪಾ ತಾಂಡೇಲ – 9448302482, ಎಮ್. ಪಿ. ಕಾಮತ – 9945958401, ಪ್ರದೀಪ ನಾಯ್ಕ – 9448236745, ಡಾ. ಮಲ್ಲಿಕಾರ್ಜುನ ಹಿರೇಮಠ – 9481885134, ಪರಷುರಾಮ ಕೊಲ್ವೆಕರ – 9901929768, ಬಿ. ಎಸ್. ಪೈ – 9448896942, ಚಂದ್ರಶೇಖರ ನಾಯರ – 9448126070, ಅಂಕೋಲಾ: ವಸಂತ ನಾಯ್ಕ – 9448514625, ವಿನೋದ ಶಾನಭಾಗ – 9900131619, ಕುಮಟಾ : ವಸಂತ ರಾವ್ – 9341666977, ಚೇತನ ಶೇಟ – 9886658907. ಗೋಕರ್ಣ : ಶ್ರೀಮತಿ. ಭಾರತಿ ದೇವತೆ – 9916340515, ಅನಂತ ನಾಯ್ಕ – 9448223111. ಹೊನ್ನಾವರ : ಡಾ. ಅನಂತಮೂರ್ತಿ ಶಾಸ್ತ್ರಿ – 9448321671, ಮೆನವೆಲ್ ಸ್ಟೀಫನ್ – 9886602107, ಭಟ್ಕಳ : ಪ್ರಶಾಂತ ಕಾಮತ – 9379572567, ರಾಘವೇಂದ್ರ ನಾಯ್ಕ – 9620111625. ಶಿರ್ಶಿ : ಪ್ರವೀಣ ಕಾಮತ – 9845189039, ಡಾ. ಶಿವರಾಮ – 9241268233. ಮುಂಡಗೋಡ : ಸೀತಾರಾಮ ಬೋರಕರ – 9481206727, ವಸಂತ ಕೊಣಸಾಲಿ – 9845272349. ದಾಂಡೇಲಿ : ರವಿಕುಮಾರ ನಾಯಕ – 9880131762, ಪುರುಷೋತ್ತಮ ಮಲ್ಯಾ – 9945528803