ಹೊನ್ನಾವರ : ಸಂತೆಗುಳಿ ಮಹಾಸತಿ ಕ್ರೀಡಾಂಗಣದಲ್ಲಿ ಹವ್ಯಕ ವಿಕಾಸವೇದಿಕೆ (ರಿ) ಏರ್ಪಡಿಸಿದ್ದ ಹವ್ಯಕ ಕ್ರಿಕೆಟ್ ಪಂದ್ಯಾವಳಿಯ ಸಮಾರೂಪ ಸಮಾರಂಭ ಸಂಪನ್ನಗೊಂಡಿತು.ಹೊನ್ನಾವರ ಸಂತೆಗುಳಿ ಮಹಾಸತಿ ಕ್ರೀಡಾಂಗಣದಲ್ಲಿ ಹವ್ಯಕ ವಿಕಾಸವೇದಿಕೆ (ರಿ) ಏರ್ಪಡಿಸಿದ್ದ ಹವ್ಯಕ ಕ್ರಿಕೆಟ್ ಪಂದ್ಯಾವಳಿಯ ಸಮಾರೂಪ ಸಮಾರಂಭ ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ|| ಜಿ. ಎಲ್. ಹೆಗಡೆ ಮಾತನಾಡಿ ಒಂದು ಕಾಲಕ್ಕೆ ಹವ್ಯಕರಾದ ನಮಗೆ ಬಡತನ ಇತ್ಯಾದಿ ಕಾರಣಗಳಿಂದ, ಮಾರ್ಗದರ್ಶನಗಳ ಅಭಾವದಿಂದ ಬದುಕು ದುಃಸ್ತರವಾಗಿತ್ತು. ಆಗಲೂ, ಅಂಜದೆ ಹಿಂಜರಿಯದೆ ಕಷ್ಟಪಟ್ಟು ವಿದ್ಯೆಗಳಿಸಿ ಬದುಕು ಕಟ್ಟಿಕೊಂಡಿದ್ದೇವೆ. ಇದಕ್ಕೆ ಶ್ರೀಕುಮಾರ ಸಂಸ್ಥೆ ನಾಡಿನಾದ್ಯಂತ ಬೆಳೆದು ಹೆಸರು ಮಾಡಿರುವುದೇ ಒಂದು ನಿದರ್ಶನ.
ಇದು ಹವ್ಯಕ ವಿಕಾಸ ವೇದಿಕೆಯ ಅಧ್ಯಕ್ಷರಾಗಿ ವೆಂಕಟ್ರಮಣ ಹೆಗಡೆಯವರ ಸಾಹಸಗಾಥೆ. ಇಂದು ಪರಿಸ್ಥಿತಿ ಬದಲಾಗಿದೆ. ಹವ್ಯಕರು ಹವ್ಯಕರಿಗೆ ಮಾರ್ಗದರ್ಶಕರಾಗಿದ್ದಾರೆ ಅಷ್ಟೇ ಅಲ್ಲ; ಆರ್ಥಿಕವಾಗಿಯೂ ಸಹಾಯ ಸಲ್ಲಿಸುವ ವಿಶಾಲಭಾವನೆ ಹೊಂದಿದ್ದಾರೆ. ನಾಡಿನ ಪ್ರತಿಭಾವಂತರೆಂದು ಕರೆಸಿ ಕೊಂಡ ಹವ್ಯಕರ ಹಿತಾಸಕ್ತಿ ಸರ್ಕಾರಕ್ಕೆ ವಿಷಯವೇ ಅಲ್ಲ. ಇಂತಹ ವಿಷವು ಪರಿಸ್ಥಿತಿಯಲ್ಲಿ ನಮ್ಮನ್ನು ನಾವೇ ಸಂಘಟಿಸಿಕೊಂಡು ಆರೋಗ್ಯಕರ ಆಲೋಚನೆಗಳೊಂದಿಗೆ ಮುನ್ನಡೆಯಬೇಕಾದ ತುರ್ತು ಇದೆ.
ಈ ನಿಟ್ಟಿನಲ್ಲಿ ಹವ್ಯಕವಿಕಾಸ ವೇದಿಕೆಯ ಸತತ ಆರು ವರ್ಷಗಳ ಈ ಸಂಘಟನೆ ಅಭಿನಂದನಾರ್ಹವಾದದ್ದು ಎಂದರು. ಮತ್ತೋರ್ವ ಅತಿಥಿ ಎಂ.ವಿ. ಹೆಗಡೆ ಮಾತನಾಡಿ – “ನಾವು ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಅದಕ್ಕೆ ಸಾಧನೆಯೂ ಬೇಕು. ಎಲ್ಲ ಸ್ಪರ್ಧಾಳುಗಳು ಆರೋಗ್ಯಕರವಾಗಿ ಈ ಟ್ರೋಪಿಯನ್ನು ಸಂಪನ್ನಗೊಳಿಸಿದ್ದಾರೆ. ಇದು ತುಂಬಾ ಗೌರವ ಹಾಗೂ ಸಂತೋಷದ ಸಂಗತಿ ಎಂದು ಹೇಳಿದರು. ಹವ್ಯಕ ವಿಕಾಸವೇದಿಕೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗq Éಮಾತನಾಡಿ ಈ ಸ್ಪರ್ಧೆಗೆ ಯಾರನ್ನೂ ಪೀಡಿಸಿ ಕಾಡಿಸಿ ಹಣಸಂಗ್ರಹಿಸಿಲ್ಲ ಒಂದು ಆರೋಗ್ಯಕರ ಸ್ಪರ್ಧೆಗಾಗಿ ಅನೇಕ ಸ್ನೇಹಿತರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ.
ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿ ಈ ಸಂಘಟನೆಯನ್ನು ಉದ್ಘಾಟಿಸಿ ಹರಸಿರುವುದರಿಂದ ಇದು ಎಷ್ಟೋ ಕಾಲ ಸಂಪನ್ನವಾಗಿ ಸಾಗುತ್ತದೆ ಎಂಬುದು ನಮ್ಮ ವಿಶ್ವಾಸ. ಉಡುಪಿ ಮಂಗಳೂರು ಹಾಗೂ ನಾಡಿನ ನಾನಾ ಭಾಗಗಳಿಂದ ಹವ್ಯಕ ಯುವಶಕ್ತಿ ಇಲ್ಲಿ ಸೇರಿ ಈ ಸ್ಪರ್ಧೆಯ ಯಶಸ್ಸಿಗೆ ಕಾರಣರಾಗಿದ್ದಾರೆ. ಹವ್ಯಕ ವಿಕಾಸ ವೇದಿಕೆಯ ಎಲ್ಲ ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮೆಲ್ಲರ ಸಹಕಾರ ಹೀಗೆ ಮುಂದುವರಿಯಲಿ ಎಂದು ಹೇಳಿದರು. ಆಟಗಾರರ ಪರವಾಗಿ ಪಂದ್ಯವನ್ನು ಗೆದ್ದ ಸಿರ್ಸಿಬಾಯ್ಸ ತಂಡದ ಪ್ರವೀಣ ಬೂಸಾ ಮಾತನಾಡಿ ಹವ್ಯಕವಿಕಾಸ ವೇದಿಕೆಯ ಆಟ ನಮಗೆ ವಲ್ರ್ಡಕಪ್ ಆಡಿದಷ್ಟೇ ಸಂತೋಷ ನೀಡಿದೆ. ಆಟಗಾರರಿಗಾಗಿ ಮಾಡಿದ ಊಟ, ವಸತಿ ಸತ್ಕಾರಗಳು ಸುವ್ಯಸ್ಥೆಗಾಗಿ ಅಭಿನಂದನೆಗಳು ಎಂದರು. ಎನ್. ಆರ್. ಹೆಗಡೆ ಸರ್ವರನ್ನು ಸ್ವಾಗತಿಸಿದರು ಗಣೇಶ ಅಭಿನಂದನೆಗಳನ್ನು ಸಲ್ಲಿಸಿದರು. ಬಹುಮಾನ ವಿತರಣೆ ಹಾಗೂ ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.