ನವದೆಹಲಿ: ಕೇಂದ್ರ ಎನ್ ಡಿಎ ಸರ್ಕಾರದ ಮಹಾತ್ವಾಕಾಂಕ್ಷಿ ಪೂರ್ಣ ಪ್ರಮಾಣದ ಬಜೆಟ್ ಇನ್ನು ಕೆಲವೇ ಹೊತ್ತುಗಳಲ್ಲಿ ಮಂಡನೆಯಾಗಲಿದ್ದು, ಅದಕ್ಕೆ ಮುನ್ನ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಇಂದು ವಹಿವಾಟು ಆರಂಭಕ್ಕೆ ಏರಿಕೆ ಕಂಡುಬಂದಿದೆ.

ಸೆನ್ಸೆಕ್ಸ್ 147 ಅಂಕಗಳ ಏರಿಕೆ ಕಂಡು ಇತ್ತೀಚಿನ ವರದಿ ಬಂದಾಗ 36,112ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 35 ಅಂಕಗಳ ಏರಿಕೆ ಕಂಡುಬಂದು 11,062ರಲ್ಲಿ ವಹಿವಾಟು ನಡೆಸುತ್ತಿದೆ.

ಕೇಂದ್ರ ಬಜೆಟ್ ನಲ್ಲಿ ಹೂಡಿಕೆ ಸೇರಿದಂತೆ ಹಲವು ವಲಯಗಳಲ್ಲಿ ಜನರ ಭರವಸೆ ಹೆಚ್ಚಾಗಿರುವುದು ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿದೆ.

RELATED ARTICLES  ಶಶಿಕಲಾ ಪೆರೋಲ್ ಅರ್ಜಿ ತಿರಸ್ಕರಿಸಿದ ಕಾರಾಗೃಹ ಇಲಾಖೆ

ಜಾಗತಿಕ ಮಾರುಕಟ್ಟೆಗಳು ಭಾರತೀಯ ಷೇರುಮಾರುಕಟ್ಟೆಯನ್ನು ಉತ್ತೇಜಿಸಿವೆ. ಯುಎಸ್ ಫೆಡರಲ್ ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಏಷ್ಯಾ ಮಾರುಕಟ್ಟೆಯಲ್ಲಿ ಉತ್ತೇಜನ ಕಂಡುಬಂದಿದೆ. ಇಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ಮುಂದಿನ ದಿನಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿಯ ದರಗಳು ನಿರ್ಧಾರವಾಗಲಿವೆ ಎನ್ನುತ್ತಾರೆ ತಜ್ಞರು.
ಇಂದು ಬೆಳಗಿನ ವಹಿವಾಟು ಆರಂಭಕ್ಕೆ ತೈಲ, ಅನಿಲ, ಲೋಹ ಮತ್ತು ಬ್ಯಾಂಕಿಂಗ್ ವಲಯದ ಸಂವೇದಿ ಸೂಚ್ಯಂಕಗಳು ಏರಿಕೆಯಲ್ಲಿವೆ.

RELATED ARTICLES  ನಾರಾಯಣ ಭಾಗ್ವತ್ ರಿಗೆ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ನಿಫ್ಟಿಯ 50 ಹೂಡಿಕೆಗಳಲ್ಲಿ ಆಕ್ಸಿಸ್ ಬ್ಯಾಂಕ್, ಎಲ್ ಅಂಡ್ ಟಿ, ಹೆಚ್ ಸಿಎಲ್, ಟಿಸಿಎಸ್ ಮುಂಚೂಣಿಯಲ್ಲಿವೆ. ಶೇಕಡಾ 1ರಿಂದ 2ರಷ್ಟು ಲಾಭ ಮಾಡಿಕೊಂಡಿವೆ.
ಎನ್ಟಿಪಿಎಸ್, ಡಾ.ರೆಡ್ಡೀಸ್ ಲ್ಯಾಬ್ ಶೇಕಡಾ 1ರಷ್ಟು ಕಳೆದುಕೊಂಡಿವೆ. ಇಂದಿನ ಬಜೆಟ್ ನಲ್ಲಿ ವಿತ್ತೀಯ ಕೊರತೆ ಪ್ರಮುಖವಾಗಿದೆ. ವಿತ್ತೀಯ ಕೊರತೆ ಶೇಕಡಾ 3.2ರಷ್ಟು ಇಂದಿನ ಬಜೆಟ್ ನಲ್ಲಿ ನಿರೀಕ್ಷಿಸಲಾಗಿದ್ದು ಅದು ಸೆನ್ಸೆಕ್ಸ್ ಮತ್ತು ನಿಫ್ಟಿ ಮೇಲೆ ಪರಿಣಾಮ ಬೀರಲಿದೆ.