ಹೊನ್ನಾವರ: ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ ಸಂಪನ್ನಗೊಂಡಿದ್ದು ಸಾಂಸ್ಕೃತಿಕ ಕಲಾ ಸಿರಿಗೆ ತೆರೆ ಬಿದ್ದಿದೆ. ಶಂಭು ಹೆಗಡೆ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಗಣಪತಿ ಪ್ರಾರ್ಥನೆಯೊಂದಿಗೆ ದಿ: 31/01/2018 ಬುಧವಾರದಂದು ರಾಷ್ಟ್ರೀಯ ನಾಟ್ಯೋತ್ಸವ ಶುಭಾರಂಭಗೊಂಡಿತು. ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಶ್ರೀ ಭಾಸ್ಕರ ಗೌಡ ಆಡುಕಳ ಇವರು ದೈವಾಧೀನರಾದದ್ದನ್ನು ಸ್ಮರಿಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.

ಅತಿಥಿ ಅಭ್ಯಾಗತರನ್ನು ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪಸ್ಥಿತರಿರುವ ಅಧ್ಯಕ್ಷರು, ಅತಿಥಿ ಅಭ್ಯಾಗತರಿಂದ ದೀಪ ಬೆಳಗುವುದರ ಮೂಲಕ ಉದ್ಘಾಟನೆಗೊಂಡಿತು.

ಶ್ರೀ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗ್ಗೆ ಅಭಿನಂದನಾ ನುಡಿ ಗೈದ ಶ್ರೀ ಎಂ. ಕೆ. ಭಾಸ್ಕರ ರಾವ್ ಅನಿಸಿಕೆ ವ್ಯಕ್ತಪಡಿಸುತ್ತಾ ಶ್ರೀ ಗಜಾನನ ಹೆಗಡೆ ಪ್ರಶಸ್ತಿಗೆ ಅರ್ಹತೆ ಪಡೆದವರು ಗೋಡೆ ನಾರಾಯಣ ಹೆಗಡೆಯವರು ಎಂದರು.

ಪ್ರಶಸ್ತಿಯಿಂದ ಭಾಜನರಾದ ಶ್ರೀ ಗೋಡೆ ನಾರಾಯಣ ಹೆಗಡೆಯವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ಯಕ್ಷಗಾನ ಸೇವೆಯ ಆರಂಭದ ದಿನಗಳಲ್ಲಿ ನನ್ನನ್ನು ಈ ಕ್ಷೇತ್ರಕ್ಕೆ ಪ್ರೇರಣೆ ನೀಡಿ ಪೆÇ್ರೀತ್ಸಾಹಿಸಿ ಕೀಚಕ ಪಾತ್ರಕ್ಕೆ ಮಾರ್ಗದರ್ಶನ ನೀಡಿದ ಮಹನೀಯರು ಶ್ರೀ ಗಜಾನನ ಹೆಗಡೆಯವರು ಎಂದರು.

RELATED ARTICLES  ಜಾಗತಿಕ ಸಂಸ್ಥೆಗಳೊಂದಿಗೆ ಪತಂಜಲಿ ಪಾಲುದಾರಿಕೆ ಇಲ್ಲ: ರಾಮ್ ದೇವ್

ಕಳೆದ ವರ್ಷದ ನಾಟ್ಯೋತ್ಸವದಲ್ಲಿ ಸಾಗರ ಫೆÇೀಟೋಗ್ರಾಫಿಕ್ ಸೊಸೈಟಿಯ ಸಹಯೋಗದೊಂದಿಗೆ ಕಲಾತ್ಮಕ ಛಾಯಾಗ್ರಹಣ ಸ್ಪರ್ಧೆ ಏರ್ಪಡಿಸಿದ್ದು ಬಹುಮಾನ ವಿಜೇತರನ್ನು ಪುರಸ್ಕರಿಸಲಾಯಿತು. ಪ್ರಥಮ ಸ್ಥಾನ ಪಡೆದ ಶ್ರೀ ಅಮರದೀಪ ಸಾಗರ ಮತ್ತು ದ್ವೀತೀಯ ಸ್ಥಾನ ಪಡೆದ ಶ್ರೀ ರಾಮಕೃಷ್ಣ ಹೆಗಡೆಯವರನ್ನು ಪುರಸ್ಕರಿಸಲಾಯಿತು. ಏಳು ಛಾಯಾಗ್ರಾಹಕರಿಗೆ ಸಮಾಧಾನಕರ ಬಹುಮಾನ ನೀಡಿ ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪೆÇ್ರ. ವರದೇಶ ಹೀರೆಗಂಗೆ ಮಾತನಾಡಿ ಸಮಷ್ಠಿ ಭಾವದ, ವಿಕೇಂದ್ರಿತವಾಗಿದ್ದ ಕಲೆಗಳೆಲ್ಲವೂ ಪ್ರಸ್ತುತ ಸಮಷ್ಠಿಯಿಂದ ದೂರ ಸರಿಯುತ್ತಾ ಆಧುನಿಕ ಸಾಮಗ್ರಿಗಳ ಹಾವಳಿಯಿಂದ ವ್ಯಕ್ತಿ ಕೇಂದ್ರಿತವಾಗಿರುವುದು ಅಪಾಯಕರ ಎಂದು ಅಭಿಪ್ರಾಯಪಟ್ಟರು.

ಡಾ. ರವಿ ಹೆಗಡೆ ಹೂವಿನಮನೆಯವರು ಮಾತನಾಡಿ ಕಲೆ ವ್ಯಕ್ತಿಯ ಜೀವನೋತ್ಸಾಹವನ್ನು ಉತ್ಕರ್ಷಕ್ಕೆ ಒಯ್ಯುತ್ತಾ ವ್ಯಕ್ತಿತ್ವದ ಪರಿಪೂರ್ಣತೆಗೆ ಸಹಕಾರಿಯಾಗಿದೆ. ಕಾರಣ ಸಮಾಜ ಕಲೆಗಾಗಿ ಜಿಪುಣತನವನ್ನು ತೋರಿಸದೆ ಎಲ್ಲರೂ ಕೈಜೋಡಿಸುವ ಮೂಲಕ ಪೆÇ್ರೀತ್ಸಾಹಿಸುತ್ತಾ ಕಲಾವಿದರಿಗೆ ಸ್ಟಾರ್ ಮೌಲ್ಯ ಬರುವಂತೆ ನೋಡಿಕೊಳ್ಳಬೇಕೆಂದರು. ಯಕ್ಷಗಾನದ ಕಲೆ ಮತ್ತು ಕಲಾವಿದನ ಸೀಮೋಲ್ಲಂಘನಕ್ಕೆ ಕಾರಣವಾಗುವಂತೆ ಸಮಾಜ ಕಲೆಗಾಗಿ ಸಂಶೋಧನೆ ಪ್ರಸರಣ ಮತ್ತು ಅಭಿವೃದ್ಧಿಗೆ ಸಮಾಜ ಕೈಜೋಡಿಸಬೇಕೆಂದರು. ಕಲೆ ಕಣ್ಣಿದ್ದವರಿಗೆ ಮಾತ್ರವಲ್ಲದೇ ಒಳಗಣ್ಣಿದ್ದವರಿಗೂ ಪ್ರೇರಕ, ಪೂರಕ ಎಂದು ಅಭಿಪ್ರಾಯಪಟ್ಟರು.

ಗುಣವಂತೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಗಣಪಯ್ಯ ಗೌಡರು ಮಾತನಾಡಿ ಗುಣವಂತೆಯ ನೆಲದಲ್ಲಿ ದೇಶದ ವಿವಿಧ ಭಾಗಗಳಿಂದ ಕಲಾ ಪ್ರಾಕಾರಗಳನ್ನು ಆಮಂತ್ರಿಸಿ ಉತ್ತಮವಾಗಿ ಸಾಕಾರಗೊಳ್ಳುತ್ತಿರುವ ನಾಟ್ಯೋತ್ಸವವನ್ನು ಅಭಿನಂದಿಸಿದರು.

RELATED ARTICLES  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವು

ಅಧ್ಯಕ್ಷತೆಯನ್ನು ವಹಿಸಿದ ಸಾಹಿತಿ ಮತ್ತು ಚಿಂತಕರಾದ ಪೆÇ್ರ. ಎಂ. ಎ. ಹೆಗಡೆಯವರು ಮಾತನಾಡುತ್ತಾ ನಾಟ್ಯೋತ್ಸವವು 5 ದಿನಕ್ಕೆ ಸೀಮಿತವಾಗಿರದೇ ಒಂದು ಸಾಂಸ್ಕೃತಿಕ ಚಳುವಳಿ ರೂಪದಲ್ಲಿ ನಡೆಯುವ ಮೂಲಕವಾಗಿ ದೇಶದ ವಿವಿಧ ಆಯಾಮಗಳ ಕಲೆಯ ಹಿಂದಿರುವ ಶ್ರಮ, ಸಾಧನೆಯನ್ನು ನಿರಂತರವಾಗಿ ಅರಿಯುವಂತಾಗಿದೆ ಎಂದರು.

‘ಎಳೆಮಕ್ಕಳೊಳು ತಿಳಿವು, ಮೊಳೆತು ಬೆಳೆವುದ ನೋಡಾ’ ಎಂಬ ಹಾಗೆ ನಾಟ್ಯೋತ್ಸವದ ಮೂಲಕ ಮಕ್ಕಳಲ್ಲಿ ಹೊಸ ಪ್ರೇರಣೆ, ಉತ್ಸಾಹ ಬೆಳೆದು ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತಗೊಳ್ಳಲಿ ಎಂದರು. ಸಮಾರೋಪ ಸಂದರ್ಭದಲ್ಲಿ ಶ್ರೀ ಶಿವಾನಂದ ಹೆಗಡೆಯವರು ನಾಟ್ಯೋತ್ಸವದ ಯಶಸ್ವಿಗೆ ಕೈಜೋಡಿಸಿದ ಎಲ್ಲರನ್ನೂ ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು. ಶ್ರೀ ಆರ್. ಟಿ. ಹೆಬ್ಬಾರ ಮತ್ತು ಶ್ರೀ ಎಲ್. ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

DSC 6182

ಶ್ರೀಮತಿ ಭ್ರಮರಿ ಶಿವಪ್ರಕಾಶ್ ಇವರಿಂದ, ‘ಪಾಂಚಾಲಿ’-ಏಕವ್ಯಕ್ತಿ ಯಕ್ಷ-ಭರತನೃತ್ಯ ಸಂಗಮ ನೃತ್ಯ ಪ್ರಸ್ತುತಿ, ಸುಮನಸಾ ತಂಡ, ಉಡುಪಿ ಇವರಿಂದ ‘ರಥಯಾತ್ರೆ’ ನಾಟಕ.
ಮತ್ತು ಯಕ್ಷ ಮಹಿಳಾ ಬಳಗ, ಕೋಟ ಇವರಿಂದ ‘ಸುಧನ್ವ ಮೋಕ್ಷ’ ಯಕ್ಷಗಾನ ನಡೆದವು.