ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಿಂದ ಸಮೀಪದ ಶೇಷಾದ್ರಿಪುರ ಗುಡ್ಡದಲ್ಲಿ ಚಂದ್ರಗ್ರಹಣ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು.

ದೂರದರ್ಶಕದಿಂದ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವನಿಕರು ಅಪಾರ ಸಂಖ್ಯೆಯಲ್ಲಿ ನೆರೆದು ಬಾನಂಗಳದ ವಿಸ್ಮಯ ಕಂಡು ಬೆರಗುಗೊಂಡರು. ಪ್ರಾರಂಭದಲ್ಲಿ ಶಾಲಾ ಪ್ರಯೋಗಾಲಯದಲ್ಲಿ ವಿಜ್ಞಾನ ಶಿಕ್ಷಕ ಕಿರಣ ಪ್ರಭು ಗ್ರಹಣಾಧಾರಿತ ವಿಡಿಯೋ ಚಿತ್ರಗಳನ್ನು ಪ್ರದರ್ಶಿಸಿ ಸ್ಪಷ್ಟ ಗ್ರಹಣಗಳ ಕಲ್ಪನೆ ಮೂಡಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ವಿಜ್ಞಾನ ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿದರು.

RELATED ARTICLES  ಹಿಂಸಾತ್ಮಕವಾಗಿ ತುಂಬಿಕೊಂಡು ಹೋರಿಯ ಸಾಗಾಟ : ಓರ್ವನ ಬಂಧನ

ಶಿಕ್ಷಕರಾದ ಪ್ರದೀಪ ನಾಯ್ಕ, ಎಲ್.ಎನ್.ಅಂಬಿಗ, ಸುರೇಶ್ ಪೈ, ವಿಎನ್.ಭಟ್ಟ, ಸ್ವಾತಿ ನಾಯ್ಕ, ಅಂಕಿತಾ ನಾಯ್ಕ, ಪ್ರಶಾಂತ ಗಾವಡಿ, ಪಾಂಡುರಂಗ ವಾಗ್ರೇಕರ, ಮೊದಲಾದವರು ನೆರವು ನೀಡಿದರು.

RELATED ARTICLES  500 ನೇ ದಿನಕ್ಕೆ‌ ಕಾಲಿಡುತ್ತಿದೆ "ಗೋಕರ್ಣ ಗೌರವ"

ಶಿಕ್ಷಣ ಇಲಾಖೆಯ ಅಧಿಕಾರಿ ನಿತ್ಯಾನಂದ ಭಂಡಾರಿ, ಪಿ.ಎಂ.ಮುಕ್ರಿ, ಪೋಷಕ ಪ್ರತಿನಿಧಿಗಳಾಗಿ ಸಂಧ್ಯಾ ಪ್ರಭು, ಗುರುನಾಥ ಶಾನಭಾಗ, ಗೀತಾ ಶಾನಭಾಗ, ಪೂರ್ಣಿಮಾ ಮೊದಲಾದವರು ಗ್ರಹಣ ವೀಕ್ಷಣೆ ಕಾರ್ಯಕ್ಕೆ ಸಹಕರಿಸಿದರು. ಗ್ರಹಣದ ಸಂದರ್ಭದಲ್ಲಿ ವಿದ್ಯಾರ್ಥಿ ಪೋಷಕವರ್ಗದವರು ತಿಂಡಿ ತಿನಿಸುಗಳನ್ನು ತಿಂದು ಮೌಢ್ಯತೆಗೆ ತಿಲಾಂಜಲಿ ಬರೆದರು.