ಕುಮಟಾ: ಮೂರೂರಿನ ಕೊಣಾರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಕೇಶವ ಶಂಕರ ಹೆಗಡೆಯವರಿಗೆ ಸೇರಿದ ಮನೆಯು ಆಕಸ್ಮಿಕ ಅಗ್ನಿ ಅವಘಡಕ್ಕೆ ಹಾನಿಯಾಗಿದ್ದು, ಮನೆಯ ಛಾವಣಿ ಸುಟ್ಟು ಕರಕಲಾಗಿದೆ.ಗಾಳಿ ಹೆಚ್ಚಾಗಿದ್ದು ಅಕಸ್ಮಾತ್ ಬೆಂಕಿಯ ಕಿಡಿ ತಗುಲಿದ್ದು ಮನೆಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ.

RELATED ARTICLES  ಸಾಂಸ್ಕೃತಿಕ ಚಟುವಟಿಕೆಗಳ ವಿವಿಧ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ ಆಯ್ಕೆ.

ವಿಷಯ ತಿಳಿದ ತಕ್ಷಣ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಘಟನಾಸ್ಥಳಕ್ಕೆ ಭೇಟಿನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ವಯಕ್ತಿಕ ತಾತ್ಕಾಲಿಕ ಪರಿಹಾರ ನೀಡಿದ ಶಾಸಕರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಹೆಚ್ಚಿನ ಪರಿಹಾರ ನೀಡುವಂತೆ ಸೂಚಿಸಿದರು.

RELATED ARTICLES  ಚಂದ್ರಯಾನ-೩ ರ ಯಶಸ್ಸು - ಸರಸ್ವತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಂಭ್ರಮಾಚರಣೆ.