ಕುಮಟಾದ ಮಿರ್ಜಾನಿನ ಗಂಗಾಮಾತಾ ಗೆಳೆಯರ ಬಳಗ, ತಾರಿಬಾಗಿಲ ಅವರ ಆಶ್ರಯದಲ್ಲಿ ಹಿಂದೂ ಮೀನುಗಾರ ಸಮಾಜದವರಿಗಾಗಿ ಟೆನ್ನಿಸ್ ಬಾಲ್ ಕ್ರಿಕೇಟ ಪಂದ್ಯಾವಳಿಯನ್ನು ಕಲ್ಮಟ್ಟೆಯ ಪಾಪನಾಶಿನಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಪಂದ್ಯಾವಳಿಯನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು ನಂತರ ಮಾತನಾಡಿದ ಅವರು ಮೀನುಗಾರರು ಕಡಲ ಮಕ್ಕಳು ಸಾವಿನೊಂದಿಗೆ ಸೆಣಸಾಡುವ ಕಸಬು ಇವರದ್ದಾಗಿದೆ. ಈ ಸಮುದಾಯದವರು ಸಂಘಟಿತರಾಗಿ ಇಂತಹ ಕ್ರೀಡಾ ಚಟುವಟಿಕೆ ಹಮ್ಮಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುತ್ತವೆ. ಒತ್ತಡದ ಬದುಕು ನಡೆಸುತ್ತಿರುವ ನಾವೆಲ್ಲ ಇಂತಹ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೋಳ್ಳುವುದರಿಂದ ಮನರಂಜನೆಯೊಂದಿಗೆ ಒಗ್ಗಟ್ಟು ಬೆಳೆಯುತ್ತದೆ. ಮೀನುಗಾರ ಸಮಾಜದವರು ಶೈಕ್ಷಣೀಕವಾಗಿ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಹಾಗೂ ಮಕ್ಕಳಲ್ಲಿ ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕ್ರತೀಕ ಮನೊಭಾವನೆಯನ್ನು ಬೆಳೆಸಬೇಕು ಎಂದರು.

RELATED ARTICLES  ಗೋಕರ್ಣದಲ್ಲಿ ಯಾಮಪೂಜೆ ಸಂಪನ್ನ: ನಡೆಯಿತು ಧಾರ್ಮಿಕ ವಿಧಿ ವಿಧಾನ

ಕ್ರೀಡಾಂಗಣ ಉಧ್ಘಾಟಿಸಿದ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಅವರು ಮಾತನಾಡಿ ಮೀನುಗಾರ ಸಮಾಜದವರು ಅಭಿವೃದ್ಧಿಯ ನಿಟ್ಟಿನಲ್ಲಿ ಸಾಗುವ ಚಿಂತನೆ ನಡೆಸಿ ಉತ್ತಮ ಸಂಘಟನೆಯೊಂದಿಗೆ ತಮ್ಮ ಬೇಕು ಬೇಡಿಕೆಗಳನ್ನು ಈಡೆರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದರು.

RELATED ARTICLES  ಸರಕಾರದ ಕೋವಿಡ್ ಮಾರ್ಗ ಸೂಚಿಯಂತೆ ಆರಾಧನಾ ಮಹೋತ್ಸವ : ಸಾರ್ವಜನಿಕ ಕಾರ್ಯಕ್ರಮ ಇಲ್ಲ

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಿರ್ಜಾನ ಗ್ರಾ.ಪಂ.ಸದಸ್ಯರಾದ ಗಣೇಶ ಅಂಬಿಗ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಇದೇ ವೇದಿಕೆಯಲ್ಲಿ ಸಾಧಕರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಬದಲ್ಲಿ ಜಿ.ಪಂ.ಸದಸ್ಯರಾದ ಗಜಾನನ ಪೈ ಸೇರಿದಂತೆ ಹಲವು ಗಣ್ಯರು ಉಪಸ್ಥಿ