ಹುಬ್ಬಳ್ಳಿ ಕಡೆಯಿಂದ ಬಂದ ಬಸ್ಸುಗಳು ಯಲ್ಲಾಪುರದಲ್ಲಿ ಠಿಕಾಣಿ

ಯಲ್ಲಾಪುರ; ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ ಹಿನ್ನಲೆಯಲ್ಲಿ ಯಲ್ಲಾಪುರ ಪೊಟ್ಟಣದಲ್ಲಿ ಯಾವುದೆ ಪರಿಣಾಮ ಬೀರಿಲ್ಲ ಆದರೆ ಹುಬ್ಬಳ್ಳಿ ಕಡೆಯಿಂದ ಪ್ರಯಾಣಿಕರನ್ನು ತುಂಬಿಕೊಂಡ ಬಸ್ಸುಗಳು ಮಾತ್ರ ಯಲ್ಲಾಪುರದಲ್ಲಿ ನಿಲ್ಲಿಸಿದ್ದರು.

ಹುಬ್ನಳ್ಲಿ ಕಡೆಯಿಂದ ಕಾರವಾರ ಕಡೆಗೆ ಸಾಗಬೇಕಾದ ಬಸ್ಸುಗಳ ಚಾಲಕರು ಅಚಾನಕ ಆಗಿ ಕಾರವಾರ ತೆರಳುವುದಿಲ್ಲ ಎಂದು ಬಸ್ಸುಗಳನ್ನು ಯಲ್ಲಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವುದು ಆಶ್ಚರ್ಯಕ್ಕೆ ಕಾರಣವಾಯಿತು.

RELATED ARTICLES  ಉತ್ತರಕನ್ನಡದ ಪ್ರಮುಖ ತಾಲೂಕಿನಲ್ಲಿ ಇಂದಿನ ಅಡಿಕೆ ಧಾರಣೆ

ಬೆಳಿಗ್ಗೆ 9-30 ರಿಂದ 11 ಘಂಟೆಯವರೆಗೂ ಸುಮಾರು ನಾಲ್ಕು ಬಸ್ಸುಗಳು ಬಸ್ಸ ನಿಲ್ದಾಣದಲ್ಲಿ ನಿಂತಿದ್ದರೇ ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸಾಗುವ ಸುಮಾರು ನಾಲ್ಕು ಬಸ್ಸುಗಳು ಯಲ್ಲಾಪುರ ನಿಲ್ದಾಣದಲ್ಲಿ ನಿಂತಿದ್ದವು.

RELATED ARTICLES  ಭೂ ಕುಸಿತ : ಪ್ರಾಣ ಕಳೆದುಕೊಂಡ ಮಹಿಳೆ

ಶಿರಸಿ, ಮುಂಡಗೋಡ, ಹಳಿಯಾಳ ಹಾಗೂ ಯಲ್ಲಾಪುರ ಗ್ರಾಮೀಣ ಭಾಗದಲ್ಲಿ ಬಸ್ ಸೇವೆ ಎಂದಿನಂತೆ ಮುಂದುವರೆದಿತ್ತು.

ಈ ಮಧ್ಯ ಕಾರವಾರ ಹಾಗೂ ಹುಬ್ಬಳ್ಳಿಯಿಂದ ಆಗಮಿಸಿದ ಪ್ರಯಾಣಿಕರು ಶಾಪ ಹಾಕುತ್ತಲೆ ಖಾಸಗಿ ವಾಹನದ ಮೂಲಕ ತಮ್ಮ ತಮ್ಮ ಊರುಗಳಿಗೆ ತೆರಳಿದರು.