ಕುಮಟಾ: ಶಶಿಹಿತ್ತಲದ ಕರಾವಳಿ ಕ್ರಿಕೆಟರ್ಸ್ ಸ್ಪೋಟ್ರ್ಸ ಕ್ಲಬ್ ಆಶ್ರಯದಲ್ಲಿ ಹರಿಕಂತ್ರ ಸಮಾಜದವರಿಗಾಗಿ ದ್ವಿತೀಯ ವರ್ಷದ ಜಿಲ್ಲಾಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಶಶಿಹಿತ್ತಲ, ಹೆಡಬಂದರ ರೋಡ ಸಮೀಪ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟಕರು ಹಾಗೂ ಪ್ರಥಮ ಬಹುಮಾನದ ಪ್ರಾಯೋಜಕರೂ ಆದ ಸುಬ್ರಾಯ ವಾಳ್ಕೆ ಅವರು ಮಾತನಾಡಿ ಮೀನುಗಾರರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘಟಕರ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕರಾದ ದಿನಕರ ಕೆ. ಶೆಟ್ಟಿಯವರು ಮಾತನಾಡಿ ಹರಿಕಂತ್ರ ಸಮಾಜದವರು ಒಗ್ಗಟ್ಟಾಗಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಎಲ್ಲ ಕ್ರಿಕೇಟ್ ತಂಡಗಳು ಸ್ಫರ್ಧಾತ್ಮಕ ಮನೋಭಾವನೆಯೊಂದಿಗೆ ಪಂದ್ಯಾವಳಿಯಲ್ಲಿ ಪಾಲ್ಗೋಳ್ಳುವಂತೆ ಕರೆ ನೀಡಿದರು.
ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಕ್ರೀಡೆಗಳು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹರಿಕಂತ್ರ ಸಮಾಜದವರು ಸತತ 2ನೇ ವರ್ಷದಲ್ಲಿ ಯಶಸ್ವಿಯಾಗಿ ಈ ಪಂದ್ಯಾವಳಿ ಹಮ್ಮಿಕೊಂಡಿದ್ದಾರೆ. ಇಂತಹ ಪಂದ್ಯಾವಳಿ ಆಯೋಜಿಸುವುದರಿಂದ ನಮ್ಮ ಸ್ಥಳೀಯ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೆ ಇರುತ್ತದೆ. ಆ ಪ್ರತಿಭೆ ಹೊರಬರಲು ಸೂಕ್ತ ವೇದಿಕೆ ಹಾಗೂ ಮಾರ್ಗದರ್ಶನದ ಅಗತ್ಯವಿರುತ್ತದೆ. ಮೀನುಗಾರ ಸಮುದಯದವರು ಇತರೇ ಜಾತಿಗಳಂತೆ ಸಮಾಜದ ಮುಖ್ಯ ವಾಹಿನಿಗೆ ಬರುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದರು.
ಈ ಸಂಧರ್ಭದಲ್ಲಿ ದ್ವೀತಿಯ ಬಹುಮಾನ ವಿತರಕರಾದ ಉದ್ದಿಮೆದಾರರಾದ ಆನಂದ ಹರಿಕಂತ್ರ, ಊರ ಯಜಮಾನರಾದ ಹೊನ್ನಪ್ಪ ಹೊಸಬ ಹರಿಕಂತ್ರ, ಸೋಮಯ್ಯ ಹರಿಕಂತ್ರ, ಲಕ್ಷ್ಮಣ ಹರಿಕಂತ್ರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.