ಕುಮಟಾ: ಯುವ ಬ್ರಿಗೇಡ್ ಆಶ್ರಯದಲ್ಲಿ ನಡೆದ ನನ್ನ ಕನಸಿನ ಕರ್ನಾಟಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಗಿದ್ದು ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ನ ಸಂಸ್ಥಾಪಕರಾದ ಶ್ರೀ ಚರ್ಕವರ್ತಿ ಸೂಲಿಬೆಲೆ ಭಾಗವಹಿಸಿ ಮತನಾಡಿದರು.

ಇಂದಿಲ್ಲಿ ಬಂದು ಕುಮಟಾದ ಇತಿಹಾಸ ಓದುವಾಗ ಪ್ರಾನ್ಸಿಸ್ ಬುಕಲನ್ ಮತ್ತು ಇತರ ಇತಿಹಾಸಕಾರರು ಬರೆದಿರುವಂತೆ ಟಿಪ್ಪು ಇಡೀ ಕುಮಟಾವನ್ನು ಎರಡು ಬಾರಿ ಸುಟ್ಟು ಹಾಕಿದ್ದ ಎಂಬುದನ್ನು ಅರಿತು ನಮಗೆ ಆಘಾತ ಎನಿಸಿತು . ಉತ್ತರ ಕನ್ನಡದಂತಹ ಜಿಲ್ಲೆ ಇನ್ನೊಂದಿಲ್ಲ .ಕರಾವಳಿ ಮಲೆನಾಡು ಬಯಲು ಸೀಮೆ ಗಳನ್ನು ಒಟ್ಟಿಗೆ ಕೊಟ್ಟಿರುವ ಜಿಲ್ಲೆ ನಮ್ಮ ಜಿಲ್ಲೆ ಅದು ಉತ್ತರಕನ್ನಡ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಹೊನ್ನಾವರದಲ್ಲಿ ರಚನೆಯಾಯ್ತು ಗಾ.ಪಂ ಮಟ್ಟದವರೆಗೆ ಗೋ ಪರಿವಾರ

ಇಡೀ ಉತ್ತರ ಕನ್ನಡಕ್ಕೆ ಸೂಪರ್ ಮಲ್ಟಿ ಹೋಸ್ಪಿಟಲ್ ಇಲ್ಲದಿರುವುದು ನಮ್ಮ ದುರ್ದೈವ. ಕಾಲೀ ಭೂಮಿ ಇಲ್ಲ ಎಂಬ ಮಾತು ಕೇಳಿ ಬರುತ್ತಿರುವುದು ನೋಡಿದರೆ ನೋವಾಗುತ್ತದೆ.ಕುಮಟಾದಲ್ಲಿ ಋಷಿಗಳಂತೆ ಹಾಗೂ ಸಮಾಜಕರ್ಮಿ ಗಳಂತೆ ಚಿಂತಿಸುವ ಜನ ಇಲ್ಲಿದ್ದಾರೆ . ಇಲ್ಲಿ ಬೆಳವಣಿಗೆ ಹಾಗೂ ವಿಕಾಸದ ಬಗ್ಗೆ ಚಿಂತನೆ ಇದೆ ಎಂದು ಅಭಿಪ್ರಾಯಪಟ್ಟರು.

ಉತ್ತರ ಕನ್ನಡಕ್ಕೆ ಬೆಳವಣಿಗೆ ಮಾಡುವವರು ಬೇಕಾಗಿಲ್ಲ ವಿಕಾಸದ ಕನಸು ಕಟ್ಟುವವರು ಬೇಕಾಗಿದೆ ಎಂದ ಅವರು ಸಮುದ್ರ ಉತ್ತರ ಕನ್ನಡಕ್ಕೆ ಇರುವ ಬಹು ದೊಡ್ಡ ಆಸ್ತಿ , ಆದರೆ ಇದೇ ಸಮುದ್ರವೇ ದುರ್ದೈವ ಎಂಬತೆ ಬಿಂಬಿಸಲಾಗಿದೆ ಎಂಬುದೇ ನಮ್ಮ ಸಮಸ್ಯೆಯಾಗಿದೆ ಎಂದರು.

RELATED ARTICLES  ಭಕ್ತಜನ ರಕ್ಷಕಿ ಎಂದೇ ಬಿರುದಾಂಕಿತ ಶ್ರೀ ಮಹಾಸತಿ ದೇವಿಗೆ ವಿಶೇಷ ದಂಡಾವಳಿ ಸಹಿತ ಪುಷ್ಪಾಲಂಕಾರ ಪೂಜೆ

ದೇವರಿಗೆ ನೈವೇದ್ಯ ಕೊಡದಿದ್ದರೂ ಪರ್ವತ ಉಳಿಸುವ ಕಲ್ಪನೆ ಕೊಟ್ಟವನು ಕೃಷ್ಣ, ಪರಿಸರ ರಕ್ಷಣೆ ಹಾಗೂ ದೇಶದ ಅಭಿವೃದ್ಧಿಗೆ ಕೃಷ್ಣನೇ ಆದರ್ಶ ಎಂಬುದು ನಮ್ಮ ಕಲ್ಪನೆ.

ವೇಶ್ಯೆಯೊಬ್ಬಳು ತನ್ನ ಜೀವನ ಉದ್ಧಾರಕ್ಕೆ ಕೆರೆಯನ್ನು ನಿರ್ಮಿಸಿದ ಕೆರೆಯ ಕಲ್ಪನೆ ಕೊಟ್ಟ ಅವರು ಇಂತಹ ಸೂಳೆಕೆರೆಯನ್ನೂ ಮುಚ್ಚಿಸಿ ತನ್ನ ಕಟ್ಟಡ ಕಟ್ಟುವ ಹೇಯ ಕೃತ್ಯ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಡಾ.ಸುಭಾಶ್ಚಂದ್ರನ್, ಎಚ್.ಎನ್ ನಾಯ್ಕ, ಡಿ.ಎಂ ಕಾಮತ್ ವೇದಿಕೆಯಲ್ಲಿದ್ದರು. ನಾಗರಾಜ ನಾಯಕ ತೊರ್ಕೆ, ದಿನಕರ ಶೆಟ್ಟಿ,ಸುಬ್ರಾಯ ವಾಳ್ಕೆ, ಎಂ.ಜಿ. ಭಟ್ಟ ಇನ್ನಿತರರು ಹಾಜರಿದ್ದರು.