ಶಿರಸಿ: ಧರ್ಮ ಸಂರಕ್ಷಣಾ ಸಮಿತಿ, ಉತ್ತರ ಕನ್ನಡ ವತಿಯಿಂದ ‘ಶಾಂತಿಗಾಗಿ ಸಂತರ ನಡಿಗೆ’ ಪ್ರಾರಂಭವಾಗಿದೆ. ನಮ್ಮ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಬರ್ಬರ ಹತ್ಯೆಯ ಘಟನಾವಳಿಗಳು ಜನರ ನೆಮ್ಮದಿಯನ್ನು ಕೆಡಿಸಿವೆ.

ಹೊನ್ನಾವರದ ಪರೇಶ ಮೇಸ್ತಾ ಹತ್ಯೆಯಿಂದಾಗಿ ಶಾಂತಿ ಕದಡಿರುವುದರ ಜೊತೆಗೆ, ಜಿಲ್ಲೆಯಲ್ಲಿ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆದವು. ಆ ಸಂದರ್ಭದಲ್ಲಿ ಹಾಜರಿದ್ದ ಅಮಾಯಕರ ಬಂಧನವಾಗಿದೆ, ಹಲವರು ಬಂಧನದ ಭೀತಿಯಲ್ಲಿದ್ದಾರೆ. ಇದರಿಂದಾಗಿ ಅನೇಕರ ನಿತ್ಯ ಜೀವನ ತೊಂದರೆಗೆ ಒಳಗಾಗಿದೆ.

RELATED ARTICLES  ವೆಂಕಟೇಶ ನಾಗೇಶ ಶಾನಭಾಗ ಬಾಳೇರಿ ಇನ್ನಿಲ್ಲ

ಸಮಾಜಕ್ಕೆ ಸಂಕಷ್ಟ ಎದುರಾದಾಗ ಸನ್ಯಾಸಿಗಳು-ಸಾಧು-ಸಂತರು ಮಾರ್ಗದರ್ಶನ ಮಾಡಿದ ನಿದರ್ಶನಗಳು ಕಾಣಸಿಗುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪರಮ ಪೂಜ್ಯ ಶ್ರೀಗಳು-ಸಾಧು-ಸಂತರು ಉಪಸ್ಥಿತಿಯಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಪ್ರಕಟಿಸಿದರು.

RELATED ARTICLES  ಉ.ಕ ದಲ್ಲಿ ಇಂದು ನಾಲ್ವರಿಗೆ ಕೊರೋನಾ ದೃಢ : ಕುಮಟಾದಲ್ಲಿ ಓರ್ವ ಮಹಿಳೆಗೂ ಕರೋನಾ : ಕ್ವಾರಂಟೈನ್ ಮುಗಿಸಿ ಮನೆಗೆ ಹೋದವರಿಗೂ ಪಾಸಿಟೀವ್..!

ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳ ಶ್ರೀಗಳು-ಸಾಧು-ಸಂತರು ಮೌನ ಮೆರವಣಿಗೆಯ ನೇತೃತ್ವ ವಹಿಸಿದ್ದಾರೆ. ದೇವಸ್ಥಾನಗಳ ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆ , ಸಹಕಾರ ಸಂಘಗಳ ಪ್ರಮುಖರು, ನಿವೃತ್ತ ನೌಕರರು, ವೈದ್ಯರು, ವಕೀಲರು ಮೆರವಣಿಗೆಯಲ್ಲಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ. ಸಾವಿರಕ್ಕೂ ಅಧಿಕ ಜನರು ಯಾವುದೇ ಘೋಷಣೆ ಇಲ್ಲದೇ ಮೌನವಾಗಿ ಹೆಜ್ಜೆ ಹಾಕುತ್ತಿದ್ದಾರೆ.