ಉತ್ತರಕನ್ನಡ: ಕರಾವಳಿಯಲ್ಲಿ ಇತ್ತೀಚಿನ ದಿನದಲ್ಲಿ ನಡೆದ ಹತ್ಯೆಯ ಘಟನಾವಳಿಗಳ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಧರ್ಮ ರಕ್ಷಣಾ ಸಮಿತಿಯಿಂದ ಶಾಂತಿಗಾಗಿ ಸಂತರ ನಡಿಗೆ ಹಮ್ಮಿಕೊಳ್ಳಲಾಗಿತ್ತು.
ಉತ್ತರ ಕನ್ನಡದ ಶಿರಸಿಯಲ್ಲಿ ಯಾವುದೇ ಘೋಷಣೆ ಕೂಗದೆ ಶಾಂತಿಯುತ ನಡಿಗೆ ನಡೆಯಿತು. ಶಿರಸಿ ಬಂದ್ ಕರೆ ನೀಡಲಾಗಿದ್ದ ಸಂದರ್ಭದಲ್ಲಿ ಗಲಭೆ ಉಂಟಾಗಿ, ಅಮಾಯಕರ ಬಂಧನವಾಗಿದೆ ಆ ಹಿನ್ನೆಲೆಯಲ್ಲಿ ಅವರೆಲ್ಲರೂ ಇನ್ನುವರೆಗೂ ಊರು ಬಿಟ್ಟಿದ್ದಾರೆ. ಅವರೆಲ್ಲರ ಉದ್ಯೋಗಕ್ಕೆ ತೊಂದರೆಯಾಗಿದೆ.ಬಂಧಿತರ ಮೇಲೆ ಹೊರಬರಲಾಗದ ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಜೊತೆಗೆ ಹತ್ಯೆಯಾದ ಪರೇಶ್ ಮೇಸ್ತಾ ಹತ್ಯೆ ಕೇಸ್ನ್ನು NIA ಮೂಲಕ ನಡೆಸಬೇಕೆಂದು ಕೂಡಾ ಆಗ್ರಹಿಸಿದರು. ಅವರ ಕುಟಂಬಕ್ಕೆ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಶಾಂತಿಗಾಗಿ ಸಂತರ ನಡಿಗೆಯಲ್ಲಿ ಜಿಲ್ಲೆಯ ವಿವಿಧ 10 ಕ್ಕೂ ಹೆಚ್ಚು ಶ್ರೀಗಳು, ಸಾಧು, ಸಂತರುಗಳು ಭಾಗಿಯಾಗಿದ್ದರು. ಈ ಜಾಥ ಯೋಗ ಮಂದಿರದಿಂದ ಕೋರ್ಟ್ ರಸ್ತೆ ಮಾರ್ಗವಾಗಿ ನಡೆದು ಸಹಾಯಕ ಆಯುಕ್ತರ ಮುಖಾಂತರ ಮನವಿ ಸಲ್ಲಿಸಿರುವ ಸಂತರು.
ಶಾಂತಿ ನಡಿಗೆಯಲ್ಲಿ ಸಾಧು ಸಂತರೊಂದಿಗೆ ಗಣ್ಯರು, ದೇವಸ್ಥಾನಗಳ ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಗಳು, ನಿವೃತ್ತ ನೌಕರರು, ವೈದ್ಯರು, ವಕೀಲರು,ಇಂಜಿನಿಯರ ಗಳು ಸೇರಿ 500ಕ್ಕೂ ಹೆಚ್ಚು ಜನ ಸೇರಿದ್ದರು.