ಬೆಂಗಳೂರು : ವಾತವಾರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವೂ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಮಿತಿ ಮೀರಿದ ವಾಯುಮಾಲಿನ್ಯದಿಂದ ಪ್ರೌಢಶಾಲೆಯ ಹಂತದಲ್ಲಿರುವ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ವಾಯುಮಾಲಿನ್ಯದಿಂದ ಬಂಜೆತನ , ಮೆಟಾಬಾಲಿಕ್ ಸಿಡ್ರೋಮ್ ಮತ್ತಿತರ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.ಹೃದಯ ಸಂಬಂಧಿ, ನರರೋಗ ಸಮಸ್ಯೆಯೂ ಉಲ್ಬಣಗೊಳ್ಳುತ್ತವೆ ಎಂದು ಬೋಸ್ಟಾನ್ ವಿಶ್ವವಿದ್ಯಾಲಯದ ಸಹಾಯಕ ಪ್ರೋಫೆಸರ್ ಶೃತಿ ಮಹಾಲಿಂಗಯ್ಯ ಹೇಳಿದ್ದಾರೆ.

RELATED ARTICLES  ಎಲ್ಲ ಋತುವಿಗೂ ಬೆಸ್ಟ್ ಎಳನೀರು!

ಅನಿಯಮಿತ ಋತುಚಕ್ರ ಹಾರ್ಮೋನ್ ಗಳ ಕಾರ್ಯಚಟುವಟಿಕೆ ಮೋಲೂ ತೀವ್ರ ರೀತಿಯ ಪರಿಣಾಮ ಬೀರಲಿದೆ . ವಾಯು ಮಾಲಿನ್ಯ ಮಾತ್ರವಲ್ಲದೇ, ಅನಿಯಮಿತ ಋತುಚಕ್ರ ಸಮಸ್ಯೆಂದಾಗಿ ಇಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ಅವರು ಹೇಳಿದ್ದಾರೆ.

ಹ್ಯುಮನ್ ರಿ ಪ್ರೊಢಕ್ಷನ್ ಜರ್ನಲ್ ನಲ್ಲಿ ಈ ಅಧ್ಯಯನದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಆರೋಗ್ಯ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ನರ್ಸ್ ಗಳು ಹಾಗೂ ಮಾಲಿನ್ಯದಿಂದ ಕೂಡಿರುವ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದಾಗ ಈ ಮಾಹಿತಿ ತಿಳಿದುಬಂದಿದೆ,

RELATED ARTICLES  ಮಾರುಕಟ್ಟೆಯಲ್ಲಿ ಸಿಗುವ ಶಿಶುಗಳಿಗೆ ನೀಡುವ ಆಹಾರಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿವೆ!

ಜಾಗತಿಕವಾಗಿ ಹಾಗೂ ಪ್ರತ್ಯೇಕವಾಗಿ ಮಾಲಿನ್ಯ ನಿಯಂತ್ರಿಸಿದಾಗ ಮಾತ್ರ ಮನುಷ್ಯರಲ್ಲಿ ಹೆಚ್ಚುತ್ತಿರುವ ರೋಗವನ್ನು ತಡೆಗಟ್ಟಬಹುದು ಎಂದು ಶೃತಿ ಮಹಾಲಿಂಗಯ್ಯ ತಿಳಿಸಿದ್ದಾರೆ.