ಕುಮಟಾ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕುಮಟಾ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡವನ್ನು ಹೆಗಡೆ ವ್ಯಾಪ್ತಿಯ ತಣ್ಣೀರುಕುಳಿಯಲ್ಲಿ ಇಂದು ಉದ್ಘಾಟಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್. ವಿ.ದೇಶಪಾಂಡೆಯವರು ಹಾಗೂ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದೀಪ
ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಆರ್ .ವಿ ದೇಶಪಾಂಡೆಯವರು ಶೈಕ್ಷಣಿಕ ಅಗತ್ಯತೆಗಳ ಪೂರೈಕೆಗೆ ಈ ಕಟ್ಟಡ ಸಂಪೂರ್ಣವಾಗಿ ಉಪಯುಕ್ತವಾಗಲಿ ಎಂದು ಅಭಿಪ್ರಾಯಪಟ್ಟರು.
ಸ್ವಂತ ಕಟ್ಟಡವಿಲ್ಲದೆ ಬೇರೆ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿತ್ತು ಇದೀಗ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.
ವೇದಿಕೆಯಲ್ಲಿ ಜಿ. ಪಂ. ಸದಸ್ಯರಾದ ಶ್ರೀ ರತ್ನಾಕರ ನಾಯ್ಕ, ತಾ. ಪಂ. ಅಧ್ಯಕ್ಷೆ ಶ್ರೀಮತಿ ವಿಜಯಾ ಪಟಗಾರ, ಪಾರಮುಖರಾದ ಗೀತಾ ಮುಕ್ರಿ. ಬಿ ಜಿ ಶಾನಭಾಗ, ಶಿವಾನಂದ ಪಟಗಾರ ಹಾಗೂ ಶಾರದಾಹೆಗಡೆಯವರು ಉಪಸ್ತಿತರಿದ್ದರು.